Latest

*ಸೆಂಟ್ರಾಕೇರ್ ಆಸ್ಪತ್ರೆಗೆ ಎಂಟ್ರಿ ಲೆವೆಲ್ NABH ಮಾನ್ಯತೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿಯ ತಿಲಕವಾಡಿ ಮೂಲದ ಸೆಂಟ್ರಾಕೇರ್ ಸೂಪರ್-ಸ್ಪೆಷಾಲಿಟಿ ಆಸ್ಪತ್ರೆ ಮತ್ತು ವೈದ್ಯಕೀಯ ಸಂಶೋಧನಾ ಕೇಂದ್ರಕ್ಕೆ ಪ್ರತಿಷ್ಠಿತ ಎಂಟ್ರಿ ಲೆವೆಲ್ NABH (National Accreditation Board for Hospitals & Healthcare Providers) ಮಾನ್ಯತೆ ಲಭಿಸಿದೆ. 

ಆಸ್ಪತ್ರೆಯ ಮೂಲಸೌಕರ್ಯ, ಸುರಕ್ಷತಾ ಮಾನದಂಡಗಳು, ತರಬೇತಿ ಪಡೆದ ಮಾನವ ಸಂಪನ್ಮೂಲ ಮತ್ತು ಗುಣಮಟ್ಟದ ಚಿಕಿತ್ಸಾ ಸೇವೆಗಳ ಆಧಾರದ ಮೇಲೆ ಈ ಮಾನ್ಯತೆ ನೀಡಲಾಗಿದೆ. 

ಆಸ್ಪತ್ರೆಯು ಮೂತ್ರ ಪಿಂಡ (ಕಿಡ್ನಿ) ಕಸಿಗೂ ಸಹ ಮಾನ್ಯತೆ ಪಡೆದಿದೆ. ಆಸ್ಪತ್ರೆಯು ಆರೋಗ್ಯ ಕರ್ನಾಟಕ-ಆಯುಷ್ಯಮಾನ ಭಾರತ ಮತ್ತು ಕರ್ನಾಟಕ ಆರೋಗ್ಯ ಸಂಜೀವಿನಿ ಅಡಿ ಚಿಕಿತ್ಸಾ ಸೌಲಭ್ಯವನ್ನು ಹೊಂದಿದೆ.

ವೈದ್ಯಕೀಯ ನಿರ್ದೇಶಕಿ ಡಾ. ನೀತಾ ದೇಶಪಾಂಡೆ ಅವರು, ಎಲ್ಲಾ ರೋಗಿಗಳಿಗೆ ಗುಣಮಟ್ಟದ ಹಾಗೂ ಸುರಕ್ಷಿತ ಆರೈಕೆ ಒದಗಿಸುವಲ್ಲಿ ತೊಡಗಿರುವ ಸಂಪೂರ್ಣ ತಂಡಕ್ಕೆ  ಅಭಿನಂದನೆ ಸಲ್ಲಿಸಿದ್ದಾರೆ.

Home add -Advt

Related Articles

Back to top button