Kannada NewsLatestNationalPolitics

*ಕೇಂದ್ರ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್: ತುಟ್ಟಿಭತ್ಯೆ ಹೆಚ್ಚಳ*

ಪ್ರಗತಿವಾಹಿನಿ ಸುದ್ದಿ: ಕೇಂದ್ರ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್ ನೀಡಲಾಗಿದೆ. ಕೇಂದ್ರ ಸಚಿವ ಸಂಪುಟ ಸಭೆ ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರ ತುಟ್ಟಿ ಭತ್ಯೆ ಹೆಚ್ಚಳ ಮಾಡಲು ಅನುಮೋದನೆ ನೀಡಿದೆ.

ಕೇಂದ್ರ ಸರ್ಕಾರಿ ನೌಕರರು ಮತ್ತು ಕೇಂದ್ರ ಪಿಂಚಣಿದಾರರಿಗೆ ಶೇ. 2ರಷ್ಟು ಡಿಎ (ತುಟ್ಟಿ ಭತ್ಯೆ) ಹೆಚ್ಚಿಸುವುದಾಗಿ ಕೇಂದ್ರ ಸರ್ಕಾರ ಘೋಷಿಸಿದೆ. ಇದರಿಂದಾಗಿ ಒಟ್ಟು ತುಟ್ಟಿ ಭತ್ಯೆ ಶೇ. 58ರಿಂದ ಮೂಲ ವೇತನದ ಶೇ. 60ಕ್ಕೆ ಏರಿಕೆಯಾಗಲಿದೆ. ಪರಿಷ್ಕೃತ ಡಿಎ ಜನವರಿ 2026ರಿಂದ ಅನ್ವಯವಾಗಲಿದೆ.

Home add -Advt

ಪಿಂಚಣಿದಾರರಿಗೂ ಇದು ಅನ್ವಯಿಸುತ್ತದೆ. ಇಂದು ನಡೆದ ಸಂಪುಟ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಕೈಗಾರಿಕಾ ಕಾರ್ಮಿಕರ ಗ್ರಾಹಕ ಬೆಲೆ ಸೂಚ್ಯಂಕದಲ್ಲಿನ (ಸಿಪಿಐ-ಐಡಬ್ಲ್ಯೂ) ಬದಲಾವಣೆಗಳ ಆಧಾರದ ಮೇಲೆ ವರ್ಷಕ್ಕೆ 2 ಬಾರಿ ತುಟ್ಟಿ ಭತ್ಯೆ ಹೆಚ್ಚಳ ಮಾಡಲಾಗುವುದು. ಜನವರಿಯಲ್ಲಿ ಒಮ್ಮೆ ಮತ್ತು ಜುಲೈನಲ್ಲಿ ಮತ್ತೊಮ್ಮೆ ತುಟ್ಟಿ ಭತ್ಯೆಯನ್ನು ಪರಿಷ್ಕರಿಸಲಾಗುತ್ತದೆ. ಈ ತುಟ್ಟಿ ಭತ್ಯೆ ಹೆಚ್ಚಳವು ಸುಮಾರು 49.19 ಲಕ್ಷ ಕೇಂದ್ರ ಸರ್ಕಾರಿ ನೌಕರರು ಮತ್ತು 68.72 ಲಕ್ಷ ಪಿಂಚಣಿದಾರರಿಗೆ ಪ್ರಯೋಜನವನ್ನು ನೀಡಲಿದೆ. ಕೇಂದ್ರ ಸರ್ಕಾರದ ಈ ನಿರ್ಧಾರದಿಂದಾಗಿ ವಾರ್ಷಿಕವಾಗಿ ಹೆಚ್ಚುವರಿಯಾಗಿ 6,791 ಕೋಟಿ ರೂ.ಗಳನ್ನು ಮೀಸಲಿಟ್ಟಿದೆ.


Related Articles

Back to top button