Belagavi NewsBelgaum NewsKannada NewsNationalPolitics

*ಕಾಂಗ್ರೆಸ್‌ನಿಂದ ಮಹಿಳಾ ಕುಲಕ್ಕೆ ಘೋರ ಅಪಮಾನ: ಜಗದೀಶ್ ಶೆಟ್ಟರ್ ಕಿಡಿ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ನಾರಿ ಶಕ್ತಿ ವಂದನಾ ಕಾಯ್ದೆಗೆ ಅಡ್ಡಿಯುಂಟುಮಾಡುವ ಮೂಲಕ ಕಾಂಗ್ರೆಸ್ ನೇತೃತ್ವದ ‘ಇಂಡಿ’ (I.N.D.I.A) ಮೈತ್ರಿಕೂಟ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿಯೇ ಒಂದು ಕರಾಳ ದಿನವನ್ನು ಸೃಷ್ಟಿಸಿದೆ. ಕಾಂಗ್ರೆಸ್ ಪಕ್ಷದ ಈ ದಮನಕಾರಿ ನಡೆಯು ಕೇವಲ ಭಾರತೀಯ ನಾರಿಯರಿಗಷ್ಟೇ ಅಲ್ಲ, ಇಡೀ ವಿಶ್ವದ ಮಹಿಳಾ ಸಮುದಾಯಕ್ಕೆ ಮಾಡಿದ ಅಕ್ಷಮ್ಯ ಅಪಮಾನವಾಗಿದೆ ಎಂದು ಸಂಸದ ಜಗದೀಶ್ ಶೆಟ್ಟರ್ ಕಿಡಿ ಕಾರಿದ್ದಾರೆ.

ಮಹಿಳಾ ಸಬಲೀಕರಣದ ಬಗ್ಗೆ ಕಾಂಗ್ರೆಸ್ ನಾಯಕರು ವೇದಿಕೆಗಳ ಮೇಲೆ ತೋರುವ ಕಳಕಳಿ ಕೇವಲ ‘ಮೊಸಳೆ ಕಣ್ಣೀರು’ ಎಂಬುದು  ಅವರ ಈ ನಡೆಯಿಂದ ಸ್ಪಷ್ಟವಾಗಿ ಸಾಬೀತಾಗಿದೆ. ಮಹಿಳೆಯರಿಗೆ 33% ಮೀಸಲಾತಿ ಬಿಲ್‌ ಸೋಲುವ ಹಾಗೆ ಮಾಡಿದೆ ಕಾಂಗ್ರೆಸ್ ಹಾಗೂ ಮೈತ್ರಿ ಕೂಟ ಮಹಿಳೆಯರಿಗೆ ರಾಜಕೀಯ ಪ್ರಾತಿನಿಧ್ಯ ನೀಡುವ ವಿಚಾರ ಬಂದಾಗಲೆಲ್ಲಾ ಕಾಂಗ್ರೆಸ್ ತನ್ನ ಇಬ್ಬಗೆಯ ನೀತಿಯನ್ನು ಪ್ರದರ್ಶಿಸುತ್ತಲೇ ಬಂದಿದೆ.

Home add -Advt

ಇಂದು ದೇಶದ ರಾಜಕೀಯ ಭೂಪಟದಲ್ಲಿ ತನ್ನ ಅಸ್ತಿತ್ವವನ್ನೇ ಕಳೆದುಕೊಂಡು ಉಸಿರುಗಟ್ಟುತ್ತಿರುವ ಕಾಂಗ್ರೆಸ್, ತನ್ನದೇ ಮನಃಸ್ಥಿತಿಯ ಇತರ ಪಕ್ಷಗಳನ್ನು ಕಟ್ಟಿಕೊಂಡು ‘ಇಂಡಿ ಕೂಟ’ದ ಹೆಸರಿನಲ್ಲಿ ಲೋಕಸಭೆಯಲ್ಲಿ ಸ್ತ್ರೀಕುಲದ ಹಕ್ಕುಗಳನ್ನು ಹಿಂಡಿ ಹಾಕಿದೆ. ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಸಾಮಾಜಿಕ ನ್ಯಾಯದ ಆಶಯಗಳನ್ನು ಮತ್ತು ವಿಶ್ವಗುರು ಬಸವಣ್ಣನವರು ಅಂದೇ ಪ್ರತಿಪಾದಿಸಿದ ಲಿಂಗ ಸಮಾನತೆಯ ಉದಾತ್ತ ತತ್ವಗಳನ್ನು ಈ ಪಕ್ಷಗಳು ಹತ್ತಿಕ್ಕುವ ಹೀನಾಯ ಕೆಲಸ ಮಾಡಿವೆ.

ಮಹಿಳೆಯರಿಗೆ ಸಮಾನ ಹಕ್ಕು ಮತ್ತು ಪ್ರಾತಿನಿಧ್ಯ ನೀಡುವ ವಿಚಾರದಲ್ಲಿ ನಮ್ಮ ಪಕ್ಷ ಸದಾ ಬದ್ಧವಾಗಿದೆ. ಆದರೆ, ಅಧಿಕಾರದ ಲಾಲಸೆಗಾಗಿ ಮಾತೃಸ್ವರೂಪಿಣಿಯರ ಹಕ್ಕನ್ನು ಕಸಿದುಕೊಂಡ, ಸ್ತ್ರೀ ವಿರೋಧಿ ನೀತಿಯನ್ನು ಅನುಸರಿಸುತ್ತಿರುವ ಕಾಂಗ್ರೆಸ್ ಮತ್ತು ಅದರ ಮೈತ್ರಿಕೂಟಕ್ಕೆ ಮುಂಬರುವ ದಿನಗಳಲ್ಲಿ ದೇಶದ ಪ್ರಜ್ಞಾವಂತ ಮಹಿಳಾ ಸಮುದಾಯ ತಕ್ಕ ಪಾಠ ಕಲಿಸಲಿದೆ ಎಂದು ಸಂಸದ ಜಗದೀಶ್ ಶೆಟ್ಟರ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related Articles

Back to top button