ಪ್ರಮಾಣಪತ್ರ ವಿತರಣಾ ಸಮಾರಂಭ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ –
ಕರ್ನಾಟಕ ಕಾನೂನು ಸಂಸ್ಥೆಯ ವ್ಯವಸ್ಥಾಪನಾ ಶಿಕ್ಷಣ ಹಾಗೂ ಸಂಶೋಧನಾ ಸಂಸ್ಥೆಯ (ಐಎಂಇಆರ್) ವಿದ್ಯಾರ್ಥಿಗಳು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಬೆಂಗಳೂರಿನ ಮೂಕ್ (MOOK) ವಿಭಾಗ ಐಐಎಮ್‌ಬಿಎಕ್ಸ್ ಆಯೋಜಿಸಿದ್ದ ಮುನ್ಸೂಚಕ ವಿಶ್ಲೇಷಣೆ (predictive analytics) ಸರ್ಟಿಫಿಕೆಟ್ ಕೋರ್ಸ್‌ನ್ನು ಯಶಸ್ವಿಯಗಿ ಪೂರೈಸಿದ್ದು, ಪ್ರಮಾಣಪತ್ರ ವಿತರಣಾ ಸಮಾರಂಭ ಅ. ೩೦ರಂದು ಬೆಳಗಾವಿಯಲ್ಲಿ ಜರುಗಿತು.
ಬೆಳಗಾವಿಯ ಹಿರಿಯ ಉದ್ಯಮಿ, ಆಕ್ವಾ ಅಲಾಯ್ಸ್ ವ್ಯವಸ್ಥಾಪಕ ನಿರ್ದೇಶಕ ಅಮೃತರಾಜ ಭಟ್ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಿ ಮಾತನಾಡಿ, ಇಂದಿನ ಔದ್ಯಮಿಕ ಸನ್ನಿವೇಶದಲ್ಲಿ ವಿಶ್ಲೇಷಣೆಗಿರುವ ಮಹತ್ವ ವಿವರಿಸಿದರು.
ಔದ್ಯಮಿಕ ಪರಿಸ್ಥಿತಿ ಕಠಿಣಕರವಾಗಿದ್ದರೂ ಅವಕಾಶಗಳೂ ಸಾಕಷ್ಟಿವೆ ಎಂದ ಅವರು, ವಿದ್ಯಾರ್ಥಿಗಳು ನೈತಿಕ ಮೌಲ್ಯಗಳನ್ನು ತಮ್ಮ ವೃತ್ತಿ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ವ್ಯವಸ್ಥಾಪನಾ ಶಿಕ್ಷಣ ಹಾಗೂ ಸಂಶೋಧನಾ ಸಂಸ್ಥೆ ಆಡಳಿತ ಮಂಡಳಿ (ಐಎಂಇಆರ್) ಚೇರಮನ್‌ರಾದ ರಾಜೇಂದ್ರ ಬೆಳಗಾವಕರ ಮಾತನಾಡಿ, ಇಂತಹ ವಿವಿಧ ಸರ್ಟಿಫಿಕೆಟ್ ಕೋರ್ಸ್‌ಗಳ ಮೂಲಕ ವಿದ್ಯಾರ್ಥಿಗಳು ತಮ್ಮ ವೃತ್ತಿ ಜೀವನಕ್ಕೆ ಅಗತ್ಯವಾದ ಕೌಶಲಗಳನ್ನು ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು. ಕೆಎಲ್‌ಎಸ್ ಐಎಂಇಆರ್ ನಿರ್ದೇಶಕರಾದ ಡಾ. ಅತುಲ್ ದೇಶಪಾಂಡೆ, ಪ್ರೊ. ಅತುಲ್ ಜಮ್ನಾನಿ ಕೋರ್ಸ್ ಸಂಯೋಜಿಸಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ