Kannada NewsKarnataka News

ಗೋಕಾಕ , ನಂದಗಡದಲ್ಲಿ  ಕಳ್ಳರ ಬಂಧನ 

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ –    ಗೋಕಾಕ ಪಟ್ಟಣದಲ್ಲಿ ಸರಗಳ್ಳತನ ಮಾಡುತ್ತಿದ್ದ ಆರೋಪಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಬಸವರಾಜ ರಾಮಣ್ಣ ಕರಿಯಪ್ಪಗೋಳ್ ಬಂಧಿತ ಆರೋಪಿ.
ಈತ ಆಗಸ್ಟ್ ತಿಂಗಳಲ್ಲಿ ಗೋಕಾಕ ಪಟ್ಟಣದ ಕಡಬಗಟ್ಟಿ ರಸ್ತೆಯಲ್ಲಿ ವಾಯು  ವಿಹಾರಕ್ಕೆ ಹೊರಟಿದ್ದ ಮಹಿಳೆಯೊಬ್ಬರ ಮಂಗಲಸೂತ್ರವನ್ನು ಕಿತ್ತುಕೊಂಡು ಪರಾರಿಯಾಗಿದ್ದ ಎಂಬುದು ತನಿಖೆಯ  ವೇಳೆ ಪತ್ತೆಯಾಗಿದೆ.
      ಗೋಕಾಕ ಶಹರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಕಳೆದ ಕೆಲವು ತಿಂಗಳುಗಳಿಂದ ಸರಗಳ್ಳತನವಾಗುತ್ತಿರುವ ಹಿನ್ನಲೆಯಲ್ಲಿ ಬೆಳಗಾವಿ ಎಸ್ಪಿ ಅವರ ಮಾರ್ಗದರ್ಶನದಲ್ಲಿ ಡಿವೈಎಸ್ ಪಿ ಮನೋಜಕುಮಾರ ನಾಯಿಕ ಅವರು ಸಿಪಿಐ ಗೋಪಾಲ  ರಾಠೋಡ ಅವರ ನೇತ್ರತ್ವದಲ್ಲಿ ತಂಡ ರಚನೆ ಮಾಡಿದ್ದರು.
     ಈಗಾಗಲೇ ಹಲವು ಚೈನ್ ಸ್ನಾಚಿಂಗ್ ಹಾಗೂ ಮನೆ ಕಳ್ಳತನ ಪ್ರಕರಣ ಬೇದಿಸಿರುವ ಈ ತಂಡ ಆಗಸ್ಟ್ ತಿಂಗಳಲ್ಲಿ ನಗರದಿಂದ ಕಡಬಗಟ್ಟಿ ರಸ್ತೆಯಲ್ಲಿ ವಾಯು ವಿಹಾರಕ್ಕೆ ತೆರಳಿದ್ದ ಮಹಿಳೆಯ ಮಂಗಳಸೂತ್ರ ಪ್ರಕರಣದ ಆರೋಪಿಯನ್ನು ಪತ್ತೆಹಚ್ಚಿದೆ.
       ನಗರದ ಮಹಾಲಕ್ಷ್ಮೀ ದೇವಸ್ಥಾನದ ಮುಂದೆ ಅನುಮಾನಸ್ಫದವಾಗಿ ಓಡಾಡುತ್ತಿದ್ದ  ಆರೋಪಿಯನ್ನು  ವಿಚಾರಣೆ ನಡೆಸಿದಾಗ ಈ ಪ್ರಕರಣ ತಾನೆ ಮಾಡಿರುವದಾಗಿ ಒಪ್ಪಿಕೊಂಡಿದ್ದಾನೆ. ಆರೋಪಿತನಿಂದ 40 ಗ್ರಾಂ ತೂಕದ, 2.04 ಲಕ್ಷ ರೂ.  ಮೌಲ್ಯದ ಮಂಗಳಸೂತ್ರವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
     ಕಾರ್ಯಾಚರಣೆಯಲ್ಲಿ ಗೋಕಾಕ ಶಹರ ಠಾಣೆಯ ಪಿ.ಎಸ್.ಐ ಎಮ್.ಡಿ.ಘೋರಿ ಸಿಬ್ಬಂಧಿಗಳಾದ ಆರ್ ಬಿ ಹಡಪದ, ಬಿ. ವಿ ನೇರ್ಲಿ, ಸುರೇಶ ಈರಗಾರ, ಯಲ್ಲಪ್ಪ ಗಿಡಗಿರಿ, ಸಚೀನ ಹಾಲಪ್ಪಗೋಳ, ವಿಠಲ ನಾಯಕ,
ರಮೇಶ ಮುರನಾಳೆ ಭಾಗವಹಿಸಿದ್ದಾರೆ.
      ಆರೋಪಿತನಿಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದು, ಈ ತಂಡದ ಕಾರ್ಯವನ್ನು  ಬೆಳಗಾವಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಹಾಗೂ ಹೆಚ್ಚುವರಿ ಪೋಲಿಸ್ ವರಿಷ್ಠಾಧಿಕಾರಿಯವರು ಶ್ಲಾಘಿಸಿದ್ದಾರೆ.

*ನಂದಗಡದಲ್ಲಿ ಕಳ್ಳರ ಬಂಧನ*

ನಂದಗಡ ಖಾನಾಪುರ ಠಾಣೆಯ ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದಂತೆ ನಂದಗಡ ಪೊಲೀಸರು ಇಬ್ಬರು ಆರೊಪಿತರನ್ನು ಬಂಧಿಸಿದ್ದು,  57 ಗ್ರಾಂ ಬಂಗಾರ, 310 ಗ್ರಾಂ ಬೆಳ್ಳಿ ಆಭರಣಗಳು, 55 ಸಾವಿರ ನಗದು ಹಣವನ್ನು ಮತ್ತು ಕಳ್ಳತನಕ್ಕೆ ಬಳಸಿದ ಮೊಟಾರ ಬೈಕನ್ನು ವಶಪಡಿಸಿಕೊಂಡಿದ್ದಾರೆ. ಅಳ್ನಾವರದ  ಯಲ್ಲಪ್ಪ  ಮತ್ತು ಗದಗದ ದುರ್ಗಪ್ಪ ಬಂಧಿತರು.
https://pragati.taskdun.com/latest/fsl-officershrutisuicidebangalore/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button