ಪ್ರಗತಿವಾಹಿನಿ ಸುದ್ದಿ, ಚಿಕ್ಕೋಡಿ –
ಪದವೀಧರ ಪ್ರಾಥಮಿಕ ಶಿಕ್ಷಕರ (6 ರಿಂದ 8) ನೇಮಕಾತಿ-2022 ರ 1:2 ಅನುಪಾತದ ತಾತ್ಕಾಲಿಕ ಪರಿಶೀಲನಾ ಪಟ್ಟಿಯನ್ನು ಪ್ರಕಟಿಸಿದ್ದು, ಅಭ್ಯರ್ಥಿಗಳ ಮೂಲದಾಖಲೆಗಳ ಪರಿಶೀಲಿಸುವ ಕುರಿತು ಈ ಕೆಳಗಿನ ದಿನಾಂಕಗಳಂದು ವಿಷಯವಾರು ಉಪನಿರ್ದೇಶಕರ ಕಚೇರಿ, ಸಾರ್ವಜನಿಕ ಶಿಕ್ಷಣ ಇಲಾಖೆ, ಚಿಕ್ಕೋಡಿ ಇಲ್ಲಿ ಪ್ರತಿ ದಿನ ಬೆಳಿಗ್ಗೆ 10.00 ಗಂಟೆಯಿಂದ ನಡೆಸಲಾಗುವುದು.
ಸಂಬಂಧಿಸಿದ ಅಭ್ಯರ್ಥಿಗಳು ತಮ್ಮ ಮೂಲ ದಾಖಲೆಗಳೊಂದಿಗೆ ಕ್ರಮಸಂಖ್ಯೆ ಪ್ರಕಾರ ನಿಗದಿಪಡಿಸಿದ ದಿನಾಂಕದಂದು ಕಡ್ಡಾಯವಾಗಿ ಖುದ್ದಾಗಿ ಹಾಜರಾಗಿ ಮೂಲ ದಾಖಲೆಗಳನ್ನು ಪರಿಶೀಲನೆಗೆ ಸಲ್ಲಿಸಲು ಹಾಗೂ ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಕಚೇರಿಯ ಸಹಾಯವಾಣಿ ಸಂಖ್ಯೆ: 08338-295008 ಸಂಪರ್ಕಿಸಲು ಮೋಹನಕುಮಾರ ಹಂಚಾಟೆ, ಉಪನಿರ್ದೇಶಕರು (ಆಡಳಿತ), ಸಾರ್ವಜನಿಕ ಶಿಕ್ಷಣ ಇಲಾಖೆ, ಚಿಕ್ಕೋಡಿ ಇವರು ತಿಳಿಸಿದ್ದಾರೆ.
ದಿನಾಂಕ | ಸಮಾಜ ಪಾಠಗಳು (ಕನ್ನಡ) | ಸಮಾಜ ಪಾಠಗಳು (ಉರ್ದು) | ಆಂಗ್ಲ ಭಾಷೆ | ಗಣಿತ ಮತ್ತು ವಿಜ್ಞಾನ (ಕನ್ನಡ) | ಗಣಿತ ಮತ್ತು ವಿಜ್ಞಾನ (ಉರ್ದು) | ಜೀವ ವಿಜ್ಞಾನ |
ಪರಿಶೀಲನಾ ಪಟ್ಟಿಯ ಈ ಕೆಳಗಿನ ಕ್ರಮಸಂಖ್ಯೆಯಂತೆ ಅಭ್ಯರ್ಥಿಗಳು ಹಾಜರಾಗುವುದು. | ||||||
06-10-2022 | 1 ರಿಂದ 180 | 1 ರಿಂದ 20 | 1 ರಿಂದ 60 | 1 ರಿಂದ 80 | 1 ರಿಂದ 20 | 1 ರಿಂದ 40 |
07-10-2022 | 181 ರಿಂದ 360 | 21 ರಿಂದ 42 | 61 ರಿಂದ 120 | 81 ರಿಂದ 160 | 21 ರಿಂದ 26 | 41 ರಿಂದ 80 |
08-10-2022 | 361 ರಿಂದ 580 | – | 121 ರಿಂದ 180 | 161 ರಿಂದ 240 | – | 81 ರಿಂದ 120 |
09-10-2022 | ರವಿವಾರ ರಜೆ | |||||
10-10-2022 | 581 ರಿಂದ 800 | – | 181 ರಿಂದ 240 | 241 ರಿಂದ 320 | – | 121 ರಿಂದ 155 |
11-10-2022 | 801 ರಿಂದ 1030 | – | 241 ರಿಂದ 258 | 321 ರಿಂದ 429 | – | – |
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ