Kannada NewsLatestTravelWorld

*ಆಕಾಶದಲ್ಲಿ ಪ್ಯಾರಾಚೂಟ್‌ಗೆ ಡಿಕ್ಕಿ ಹೊಡೆದ ವಿಮಾನ: ಸಾವಿರಾರು ಅಡಿ ಎತ್ತರದಿಂದ ನೆಲಕ್ಕೆ ಧುಮುಕಿದ ಮಹಿಳೆ*

ಪ್ರಗತಿವಾಹಿನಿ ಸುದ್ದಿ: ಮಹಿಳೆ ಆಕಾಶದಲ್ಲಿ ಪ್ಯಾರಾಗ್ಲೈಡಿಂಗ್ ಮಾಡುತ್ತಿದ್ದಾಗ, ‘ಸೆಸ್ನಾ 172’ ಎಂಬ ಸಣ್ಣ ವಿಮಾನವೊಂದು ಇದ್ದಕ್ಕಿದ್ದಂತೆ ಬಂದು ಅವರ ಪ್ಯಾರಾಚೂಟ್‌ಗೆ ಡಿಕ್ಕಿ ಹೊಡೆದಿದೆ.

ವಿಮಾನದ ರೆಕ್ಕೆ ಮತ್ತು ಪ್ರೊಪೆಲ್ಲರ್ ತಗುಲಿ ಪ್ಯಾರಾಗ್ಲೈಡರ್‌ನ ಮೇಲಿನ ಭಾಗ ಸಂಪೂರ್ಣವಾಗಿ ಚೂರುಚೂರಾಗಿ ಮಹಿಳೆ ಸಾವಿರಾರು ಅಡಿ ಎತ್ತರದಿಂದ ನೇರ ನೆಲಕ್ಕೆ ಧುಮುಕಿದ್ದಾರೆ. 

ಆಸ್ಟ್ರಿಯಾದ ರಮಣೀಯ ಸ್ಕ್ಮಿಟೆನ್‌ಹೋಹೆ ಪರ್ವತದ ಮೇಲೆ ಮೇ 23 ರಂದು ಸಂಭವಿಸಿದ ಭೀಕರ ವೈಮಾನಿಕ ಅಪಘಾತದಲ್ಲಿ, 44 ವರ್ಷದ ಸಬ್ರಿನಾ ಎಂಬ ಮಹಿಳೆ ಕೂದಲೆಳೆಯ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. 

ಈ ಭಯಾನಕ ಪತನದ ಮಧ್ಯೆಯೂ ಧೈರ್ಯ ಕಳೆದುಕೊಳ್ಳದ ಸಬ್ರಿನಾ, ಕೊನೆಕ್ಷಣದಲ್ಲಿ ತಮ್ಮ ಬ್ಯಾಕಪ್  ಪ್ಯಾರಾಚೂಟ್ ಯಶಸ್ವಿಯಾಗಿ ಹೊರತೆಗೆದಿದ್ದಾರೆ ಮಾಡಿದ್ದಾರೆ. ಇದರಿಂದಾಗಿ ಅವರು ಮರಗಳ ಮಧ್ಯೆ ಸುರಕ್ಷಿತವಾಗಿ ಇಳಿಯುವಲ್ಲಿ ಯಶಸ್ವಿಯಾಗಿದ್ದಾರೆ.

ಇಷ್ಟು ದೊಡ್ಡ ಘೋರ ಅಪಘಾತ ನಡೆದರೂ ಸಬ್ರಿನಾ ಅವರಿಗೆ ಕೇವಲ ಸಣ್ಣಪುಟ್ಟ ಮೂಗೇಟುಗಳಾಗಿದ್ದು, ವಿಮಾನದ ಪೈಲಟ್ ಕೂಡ ಸುರಕ್ಷಿತವಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಸಬ್ರಿನಾ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ಈ ಬೆಚ್ಚಿಬೀಳಿಸುವ ರಕ್ಷಣೆಯ ವೀಡಿಯೊ ಸದ್ಯ ಜಾಗತಿಕವಾಗಿ ಭಾರಿ ವೈರಲ್ ಆಗಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button