Kannada NewsKarnataka NewsNationalPoliticsTravelWorld

*ಇಂದು ಮತ್ತೆ ಏರಿಕೆಯಾದ ಪೆಟ್ರೋಲ್ ಡೀಸೆಲ್ ಬೆಲೆ*

ಪ್ರಗತಿವಾಹಿನಿ ಸುದ್ದಿ : ಎರಡು ವಾರಗಳ ಅಂತರದಲ್ಲಿ ಸತತವಾಗಿ ಮೂರು ಬಾರಿ ತೈಲ ಬೆಲೆಗಳು ಏರಿಕೆಯಾಗಿ ಜನ ಹೈರಾಣಾಗಿದ್ದು, ಇಂದು ಮತ್ತೆ ಏರಿಕೆ ಆಗುವ ಮೂಲಕ ಜನರಿಗೆ ಮತ್ತೊಮ್ಮೆ ಶಾಕ್ ನೀಡಿದೆ.

ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ದೇಶದಲ್ಲಿ ಇಂಧನ ದರಗಳು ಮತ್ತೆ ದುಬಾರಿಯಾಗಿವೆ. ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಪೆಟ್ರೋಲ್  ಬೆಲೆಯನ್ನು ಪ್ರತಿ ಲೀಟರ್‌ಗೆ 2.61 ರೂಪಾಯಿ ಹಾಗೂ ಡೀಸೆಲ್  ಬೆಲೆಯನ್ನು 2.71 ರೂಪಾಯಿಯಷ್ಟು ಹೆಚ್ಚಳ ಮಾಡಿವೆ. 

Related Articles
Home add -Advt

ಕಳೆದ ಎರಡು ವಾರಗಳಲ್ಲಿ ತೈಲ ದರ ಏರಿಕೆಯಾಗುತ್ತಿರುವುದು ಇದು ನಾಲ್ಕನೇ ಬಾರಿಯಾಗಿದ್ದು, ವಾಹನ ಸವಾರರ ಜೇಬಿಗೆ ಕತ್ತರಿ ಬಿದ್ದಂತಾಗಿದೆ.

ಬೆಲೆ ಏರಿಕೆಯ ನಂತರ ರಾಜಧಾನಿ ನವದೆಹಲಿಯಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 102.12 ರೂಪಾಯಿಗೆ ತಲುಪಿದ್ದರೆ, ಡೀಸೆಲ್ ದರ ಲೀಟರ್‌ಗೆ 95.20 ರೂಪಾಯಿಗೆ ಏರಿಕೆಯಾಗಿದೆ. 

Related Articles

Back to top button