Kannada NewsKarnataka NewsPolitics

*ಡಿ.ಕೆ ಶಿವಕುಮಾರ ಸಿಎಂ ಆಗುವುದು ಪಕ್ಕಾ: ರಾಜೇಂದ್ರ ಶ್ರೀಗಳು*

ಪ್ರಗತಿವಾಹಿನಿ ಸುದ್ದಿ: ಡಿ.ಕೆ. ಶಿವಕುಮಾರ್ ಅವರು ಕರ್ನಾಟಕದ ಮುಖ್ಯಮಂತ್ರಿಯಾಗುವುದು ಪಕ್ಕಾ ಎಂದು ಕಾಡಸಿದ್ದೇಶ್ವರ ಮಠದ ಶಿವಯೋಗಿ ರಾಜೇಂದ್ರ ಸ್ವಾಮೀಜಿ  ಭವಿಷ್ಯ ನುಡಿದ್ದಾರೆ.

ದೇವನಹಳ್ಳಿಯಲ್ಲಿ ಮಾತನಾಡಿದ ಶ್ರೀಗಳು, ರಾಜ್ಯದ ಅಧಿಕಾರದ ಗದ್ದುಗೆ ಏರಲು ಡಿಸಿಎಂ ಡಿಕೆ ಶಿವಕುಮಾರ್ ಅವರು ಈಗಾಗಲೇ ದೃಢ ನಿರ್ಧಾರ ಮಾಡಿದ್ದಾರೆ. ಸದ್ಯ ಅದಕ್ಕೆ ತಕ್ಕ ಕಾಲ ಕೂಡಿಬರಬೇಕಿದೆ ಅಷ್ಟೇ, ಆದ್ರೆ ಅವರು ಸಿಎಂ ಗಾದಿ ಏರುವುದು ಖಚಿತ ಎಂದು ಸ್ವಾಮೀಜಿ ಭವಿಷ್ಯವಾಣಿ ನುಡಿದಿದ್ದಾರೆ.

Home add -Advt

ಸ್ವತಃ ಡಿಕೆ ಶಿವಕುಮಾ‌ರ್ ಅವರ ಆರಾಧ್ಯ ಗುರುಗಳೇ ಸೂಕ್ತ ಸಮಯ ಹತ್ತಿರದಲ್ಲಿದೆ ಎಂದು ಭವಿಷ್ಯ ನುಡಿದಿರುವುದು ಆಡಳಿತ ಪಕ್ಷ ಸೇರಿದಂತೆ ಇಡೀ ರಾಜಕೀಯ ವಲಯದಲ್ಲಿ ತೀವ್ರ ಸಂಚಲನ ಮೂಡಿಸಿದೆ.

Related Articles

Back to top button