
ಪ್ರಗತಿವಾಹಿನಿ ಸುದ್ದಿ: ವಿಕೃತಕಾಮಿಯೊಬ್ಬ ನಗ್ನವಾಗಿ ರಸ್ತೆ ರಸ್ತೆಗಳಲ್ಲಿ, ಗಲ್ಲಿ ಗಲ್ಲಿಗಳಲ್ಲಿ ಓಡಾಡುತ್ತಿರುವ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ.
ಜಿಲ್ಲೆಯ ಚಳ್ಳಕೆರೆ ತಾಲೂಕಿನ ತ್ಯಾಗರಾಜನಗರದಲ್ಲಿ ನಡು ರಸ್ತೆಯಲ್ಲಿ ವಿಕೃತಕಾಮಿಯೊಬ್ಬ ಬೆತ್ತಲಾಗಿ ಓಡಾಡುತ್ತಿದ್ದು, ಮಹಿಳೆಯರು ಆತಂಕಕ್ಕೀಡಾಗಿದ್ದಾರೆ. ಯುವತಿಯೊಬ್ಬಳು ಮನೆಯಿಂದ ಹೊರ ಬರುತ್ತಿದ್ದಂತೆ ವ್ಯಕ್ತಿ ಅಸಭ್ಯವಾಇ ವರ್ತಿಸಿದ್ದಾನೆ. ಇದರಿಂದ ಭಯಗೊಂಡ ಯುವತಿ ಮನೆಯೊಳಗೆ ಓಡಿದ್ದಾಳೆ. ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗಿದೆ.
ವ್ಯಕ್ತಿಯ ಅಸಭ್ಯ ವರ್ತನೆಗೆ ಯುವತಿಯರು, ಮಹಿಳೆಯರು ಆತಂಕಗೊಂಡಿದ್ದು, ಮನೆಯಿಂದ ಹೊರಬರಲೂ ಭಯಪಡುತ್ತಿದ್ದಾರೆ. ಚಳ್ಳಕೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
 
					 
				 
					 
					 
					 
					
 
					 
					 
					


