Kannada NewsLatest

ಬೆಳಗಾವಿ: ಕೆವೈಸಿ ಅಪ್ ಡೇಟ್ ಮಾಡುವುದಾಗಿ ಹೇಳಿ 10 ಲಕ್ಷ ವಂಚಿಸಿದ ದುಷ್ಕರ್ಮಿಗಳು

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಬ್ಯಾಂಕ್ ಖಾತೆ ಕೆವೈಸಿ ಅಪ್ ಡೇಟ್ ಮಾಡುವುದಾಗಿ ಹೇಳಿ ಬಿಎಸ್ ಎನ್ ಎಲ್ ನ ನಿವೃತ್ತ ಉದ್ಯೋಗಿಗೆ ದುಷ್ಕರ್ಮಿಗಳು 10 ಲಕ್ಷ ರೂಪಾಯಿ ವಂಚಿಸಿರುವ ಘಟನೆ ಬೆಳಗಾವಿಯಲ್ಲಿ ಬೆಳಕಿಗೆ ಬಂದಿದೆ.

ಕಂಗ್ರಾಳಿ ಗ್ರಾಮದ ಯಲ್ಲಪ್ಪ ಜಾಧವ್ ವಂಚನೆಗೊಳಗಾದ ನಿವೃತ್ತ ನೌಕರ. ಕೆವೈಸಿ ಅಪ್ ಡೇಟ್ ಮಾಡುವುದಾಗಿ ಹೇಳಿ ವಂಚಕರು ಯಲ್ಲಪ್ಪ ಬಳಿಂದ ದಾಖಲೆಗಳನ್ನು ಪಡೆದುಕೊಂಡು ಹಣ ಡ್ರಾ ಮಾಡಿದ್ದಾರೆ.

Home add -Advt

ಬರೋಬ್ಬರಿ 102 ಬಾರಿ ಹಣ ಡ್ರಾ ಮಾಡಿದ್ದು ಬರೋಬ್ಬರಿ 10 ಲಕ್ಷ ರೂಪಾಯಿ ದೋಚಿದ್ದಾರೆ. ಮೋಸ ಹೋಗಿದ್ದು ಗೊತ್ತಾಗುತ್ತಿದ್ದಂತೆ ಯಲ್ಲಪ್ಪ ಇದೀಗ ಬೆಳಗಾವಿ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಅತ್ತಿಗೆಯನ್ನೇ ಕೊಂದು ಆತ್ಮಹತ್ಯೆಗೆ ಶರಣಾದ ನಾದಿನಿ

Related Articles

Back to top button