
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಸರಳವಾಸ್ತು ಖ್ಯಾತಿಯ ಚಂದ್ರಶೇಖರ್ ಗುರೂಜಿ ಹತ್ಯೆ ಪ್ರಕರಣಕ್ಕೆ ಸಂಬಮ್ಧಿಸಿದಂತೆ ಇಬ್ಬರು ಆರೋಪಿಗಳನ್ನು ಹುಬ್ಬಳ್ಳಿ ಪೊಲೀಸರು ಬಂಧಿಸಿದ್ದಾರೆ. ಆರೋಪಿ ಮಹಾಂತೇಶ್ ಪತ್ನಿ ವನಜಾಕ್ಷಿ, ಪತಿ ಮಾಡಿದ ಕೃತ್ಯದ ಬಗ್ಗೆ ಹೇಳಿಕೆ ನೀಡಿದ್ದು ಕಣ್ಣೀರಿಟ್ಟಿದ್ದಾರೆ.
ಚಂದ್ರಶೇಖರ್ ಗುರೂಜಿಯವರನ್ನು ನನ್ನ ಪತಿ ಮಹಾಂತೇಶ್ ಹತ್ಯೆ ಮಾಡಿದ್ದಾರೆ ಎನ್ನಲಾಗುತ್ತಿದೆ. ಟಿವಿಯಲ್ಲಿ ಸುದ್ದಿ ನೋಡುತ್ತಿದ್ದಂತೆ ನನಗೆ ಆಘಾತವಾಯಿತು. ಯಾಕಿಂತ ಕೆಲಸ ಮಾಡಿದರು ಎಂಬುದೂ ಗೊತ್ತಾಗುತ್ತಿಲ್ಲ ಎಂದು ಕಣ್ಣೀರಾಗಿದ್ದಾರೆ.
ಮಹಾಂತೇಶ್ ಮೊದಲು ಸರಳವಾಸ್ತು ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರು. ಬಳಿಕ ನಾನು 2005ರಲ್ಲಿ ಸಂಸ್ಥೆ ಸೇರಿದ್ದೆ 2019ರಲಿ ಕೆಲಸ ಬಿಟ್ಟೆ. ಕಾರಣ ನನಗೆ ಮುಂಬೈಗೆ ಹೋಗಲು ಹೇಳಿದ್ದರು. ಆದರೆ ನನಗೆ ಭಾಷೆ ಬರಲ್ಲ ಹಾಗಾಗಿ ಹೋಗಲ್ಲ ಎಂದು ಹೇಳಿದ್ದೆ. ಒಂದು ತಿಂಗಳು ಕೆಲಸ ಮಾಡಿ ನಂತರ ಕೆಲಸ ಬಿಡುವಂತೆ ಹೇಳಿದ್ದರು. ಎರಡು ತಿಂಗಳು ಹೆಚ್ಚುವರಿ ಸಂಬಳವನ್ನೂ ಕೊಟ್ಟಿದ್ದರು. ಮಾಧ್ಯಮದಲ್ಲಿ ತೋರಿಸುತ್ತಿರುವಂತೆ ನನ್ನ ಹೆಸರಲ್ಲಾಗಲಿ, ನನ್ನ ಪತಿ ಹೆಸರಲ್ಲಾಗಲಿ ಗುರೂಜಿ ಯಾವುದೇ ಆಸ್ತಿ ನೋಂದಾಯಿಸಿಲ್ಲ. ಯಾವುದೇ ಹಣದ ವ್ಯವಹಾರವೂ ಇಲ್ಲ ಎಂದು ಹೇಳಿದ್ದಾರೆ.
ನಾವು ಬ್ಯಾಂಕ್ ನಲ್ಲಿ ಸಾಲ ಮಾಡಿ ಫ್ಲಾಟ್ ತೆಗೆದುಕೊಂಡಿದ್ದೇವೆ. ಗುರೂಜಿ ಜತೆ ನನ್ನ ಗಂಡ, ನಾನು ಉತ್ತಮವಾಗಿಯೇ ಇದ್ದೆವು. ಗುರೂಜಿ ನಮಗೆ ಮಾತ್ರವಲ್ಲ ಬೇರೆ ಯಾರ ಹೆಸರಲ್ಲೂ ಆಸ್ತಿ ನೋಂದಾಯಿಸಿಲ್ಲ. ಆದರೆ ನನ್ನ ಗಂಡ ಯಾಕೆ ಹೀಗೆ ಮಾಡಿದ್ರು ಎಂಬುದು ಗೊತ್ತಾಗುತ್ತಿಲ್ಲ. ಅವರು ಎರಡು ಮೂರು ದಿನದಿಂದ ಮನೆಗೆ ಬಂದಿರಲಿಲ್ಲ. ಫೋನ್ ಮಾಡಿ ಕೇಳಿದರೆ ಏನೋ ಕೆಲಸ ಇದೆ ಬರುತ್ತೇನೆ ಎಂದಷ್ಟೇ ಹೇಳಿದ್ದರು. ನಿನ್ನೆ ಸುದ್ದಿ ನೋಡುತ್ತಿದ್ದಂತೆಯೇ ನನಗೂ ಶಾಕ್ ಆಯಿತು. ಯಾಕೆ ಹೀಗೆ ಮಾಡಿದ್ರು ಎಂಬುದು ಗೊತ್ತಿಲ್ಲ ಎಂದು ತಿಳಿಸಿದ್ದಾರೆ.
ನೂಪುರ್ ಹತ್ಯೆಗೆ ಬಹುಮಾನ ಘೋಷಿಸಿದ್ದ ಧರ್ಮಗುರು ಅರೆಸ್ಟ್