ಪ್ರಗತಿವಾಹಿನಿ ಸುದ್ದಿ, ಹೊಸದಿಲ್ಲಿ: ಚಂದ್ರಯಾನ-3 ಸಾಫ್ಟ್ ಲ್ಯಾಂಡಿಂಗ್ ದೃಶ್ಯಾವಳಿಗಳನ್ನು ಆ. 23 ರಂದು ಸಂಜೆ 5.27 ರಿಂದ ಇಸ್ರೋದ ಅಧಿಕೃತ ವೆಬ್‌ಸೈಟ್, ಯೂಟ್ಯೂಬ್, ಟ್ವಿಟರ್, ಫೇಸ್‌ಬುಕ್‌ನಲ್ಲಿ ಲೈವ್ ಸ್ಟ್ರೀಮ್ ಮಾಡಲಾಗುತ್ತಿದೆ.
ಇದಲ್ಲದೆ ಡಿಡಿ, ಆಜ್ ತಕ್, ಇಂಡಿಯಾ ಟುಡೇ ಮತ್ತು ಸ್ಪೇಸ್ ಡಾಟ್ ಕಾಮ್‌ನಲ್ಲಿ ಲೈವ್ ಕಾಮೆಂಟರಿ ಮತ್ತು ತಜ್ಞರ ವಿಶ್ಲೇಷಣೆ ಲಭ್ಯವಿರುತ್ತದೆ. ನಿಜವಾದ ಲ್ಯಾಂಡಿಂಗ್ ಸುಮಾರು 6:04 ಗಂಟೆಗೆ ಆಗಲಿದೆ. ಈ ದೃಶ್ಯಾವಳಿಗಳನ್ನು ವೀಕ್ಷಿಸಲು
ISRO Website: https://www.isro.gov.in, YouTube: https://youtube.com/watch?v=DLA_64yz8Ss…
Facebook: https://facebook.com/ISRO ಹಾಗೂ Space.com ಲಿಂಕ್ ಗಳನ್ನು ಬಳಸಹುದು.
ಐತಿಹಾಸಿಕ ಕ್ಷಣವಾದ ಚಂದ್ರನ ಮೇಲೆ ಬಾಹ್ಯಾಕಾಶ ನೌಕೆಯ ಸಾಫ್ಟ್ ಲ್ಯಾಂಡಿಂಗ್‌ನ ನೇರ ಪ್ರಸಾರ ಆಯೋಜಿಸಲು ಶಾಲೆಗಳು ಮತ್ತು ಶಿಕ್ಷಣ ಸಂಸ್ಥೆಗಳಿಗೂ ಇಸ್ರೋ ಮನವಿ ಮಾಡಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ