Kannada NewsKarnataka NewsLatest

*ನೇಣಿಗೆ ಕೊರಳೊಡ್ಡಿ ಆತ್ಮಹತ್ಯೆಗೆ ಶರಣಾದ ಪ್ರಿನ್ಸಿಪಾಲ್*

ಪ್ರಗತಿವಾಹಿನಿ ಸುದ್ದಿ; ಬಾಗಲಕೋಟೆ: ಕಾಲೇಜು ಪ್ರಾಂಶುಪಾಲರೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಹುನಗುಂದದಲ್ಲಿ ನಡೆದಿದೆ.

ನಾಗರಾಜ್ ಮುದಗಲ್ (56) ಆತ್ಮಹತ್ಯೆಗೆ ಶರಣಾದ ಪ್ರಿನ್ಸಿಪಾಲ್. ಸರಕಾರಿ ಪದವಿ ಕಾಲೇಜಿನ ಪ್ರಾಂಶುಪಾಲರಾಗಿದ್ದ ನಾಗರಾಜ್ ಮುದಗಲ್ ನೇಣು ಬಿಗಿದುಕೊಂಡು ಕಾಲೇಜಿನಲ್ಲಿಯೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

Home add -Advt

ಅಲ್ಲದೇ ಇಂದು ಕಾಲೇಜಿನಲ್ಲಿ ’ಜಾನಪದ ಜಾತ್ರೆ ಹೊನ್ನ ಸಂಭ್ರಮ’ ಎಂಬ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮಕ್ಕಾಗಿ ನಿನ್ನೆಯಷ್ಟೇ ಪ್ರಾಂಶುಪಾಲರು ಎಲ್ಲೆಡೆ ಹೋಗಿ ಕಾರ್ಯಕ್ರಮದ ಆಮತ್ರಣ ನೀಡಿ ಗಣ್ಯರನ್ನು ಆಹ್ವಾನಿಸಿದ್ದರು. ಆದರೆ ಇಂದು ಬೆಳಗಾಗುವಷ್ಟರಲ್ಲಿ ಪ್ರಾಂಶುಪಾಲರ ಶವ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಪ್ರಾಂಶುಪಾಲರ ಸಾವಿನಿಂದ ಕಾಲೇಜಿನ ಇತರ ಉಪನ್ಯಾಸಕರು, ವಿದ್ಯಾರ್ಥಿಗಳು ಕಂಗೆಟ್ಟಿದ್ದಾರೆ. ಜಾನಪದ ಜಾತ್ರೆಗೆ ಸಂಭ್ರಮದ ತಯಾರಿ ನಡೆಸಿದ್ದ ಪ್ರಾಂಶುಪಾಲರು ನೇಣಿಗೆ ಕೊರಳೊಡ್ಡಲು ನಿಖರ ಕಾರಣ ತಿಳಿದುಬಂದಿಲ್ಲ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Related Articles

Back to top button