Kannada NewsKarnataka NewsLatest
*ಚಂದ್ರಯಾನ-3: ಕೆಲವೇ ಕ್ಷಣಗಳಲ್ಲಿ ಚಂದ್ರನ ಅಂಗಳದಲ್ಲಿ ಇಳಿಯಲಿದೆ ವಿಕ್ರಮ್ ಲ್ಯಾಂಡರ್*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಕೋಟ್ಯಂತರ ಭಾರತೀಯರು ಕಾಯುತ್ತಿದ್ದ ಆ ಕಕ್ಷಣ ಬಂದೇ ಬಿಟ್ಟಿದೆ. ಕೆಲ ಹೊತ್ತಿನಲ್ಲಿಯೇ ಚಂದ್ರಯಾನ-3 ವಿಕ್ರಮ್ ಲ್ಯಾಂಡರ್ ಚಂದ್ರನ ಅಂಗಳದಲ್ಲಿ ಇಳಿಯಲಿದೆ.
ಚಂದ್ರಯಾನ-3 ನಿಗದಿತ ಸಮಯಕ್ಕೆ ತನ್ನ ಕಾರ್ಯಾಚಾರಣೆಯತ್ತ ಸಾಗಿದ್ದು, ಕೆಲವೆ ಕ್ಷಣಗಳಲ್ಲಿ ವಿಕ್ರಮ್ ಲ್ಯಾಂಡರ್ ಚಂದ್ರನ ದಕ್ಷಿಣ ದ್ರುವನ್ನು ಸ್ಪರ್ಶಿಸಲಿದೆ. ಬೆಂಗಳೂರಿನ ಬ್ಯಾಲಾಳುವಿನ ಇಸ್ರೋ ಸೆಂಟರ್ ನಿಂದ ವಿಕ್ರಮ್ ಲ್ಯಾಂಡರ್ ಕಂಟ್ರೋಲ್ ಕಾರ್ಯನಿರ್ವಹಿಸಲಾಗುತ್ತಿದೆ.
ಇಸ್ರೋ ವಿಜ್ಞಾನಿಗಳು ಅಂತಿಮ ಹಂತದ ಸಿದ್ಧತೆ ನಡೆಸಿದ್ದು, ವಿಕ್ರಮ್ ಲ್ಯಾಂಡರ್ ಚಂದ್ರನ ಅಂಗಳಕ್ಕೆ ಇಳಿಸಲು ಸರ್ವಸನ್ನದ್ಧರಾಗಿದ್ದಾರೆ. ಸಂಜೆ 6:4ಕ್ಕೆ ವಿಕ್ರಮ್ ಲ್ಯಾಂಡರ್ ಚಂದ್ರನ ಅಂಗಳಕ್ಕೆ ವಿಕ್ರಮ್ ಲ್ಯಾಂಡರ್ ಇಳಿಯಲಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ