ಚಂದ್ರು ಹತ್ಯೆ ಕೇಸ್ ಪ್ರಕರಣ; ಪೊಲೀಸ್ ಆಯುಕ್ತರಿಂದ ಸುಳ್ಳು ಹೇಳಿಕೆ; ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಗಂಭೀರ ಆರೋಪ
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಬೆಂಗಳೂರಿನ ಜೆ.ಜೆ.ನಗರದಲ್ಲಿ ಏ.4ರಂದು ನಡೆದ ಚಂದ್ರು ಎಂಬ ಯುವಕನ ಹತ್ಯೆ ಪ್ರಕರಣ ಇದೀಗ ಬಿಜೆಪಿ ಹಾಗೂ ಪೊಲೀಸ್ ಆಯುಕ್ತರ ನಡುವಿನ ಸಮರಕ್ಕೆ ಕಾರಣವಾಗಿದೆ.
ಉರ್ದು ಭಾಷೆ ಬರಲ್ಲ ಎಂದಿದ್ದಕ್ಕೆ ಚಂದ್ರು ಕೊಲೆಯಾಗಿದೆ ಎಂದು ಹೇಳಿಕೆ ನೀಡಿ ವಿವಾದಕ್ಕೀಡಾಗಿದ್ದ ಗೃಹ ಸಚಿವ ಅರಗ ಜ್ಞಾನೇಂದ್ರ ಮಾತನ್ನು ಸಮರ್ಥಿಸಿಕೊಂಡಿರುವ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್, ಚಂದ್ರು ಹತ್ಯೆ ಪ್ರಕರಣ ವಿಚಾರವಾಗಿ ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂತ್ ಸುಳ್ಳು ಹೇಳಿದ್ದಾರೆ ಎಂದು ಆರೋಪಿಸಿದ್ದಾರೆ.
ಎರಡು ಬೈಕ್ ಗಳ ನಡುವೆ ಟಚ್ ಆಗಿ ಗಲಾಟೆ ನಡೆದಿದೆ. ಗಲಾಟೆ ವಿಕೋಪಕ್ಕೆ ತಿರುಗಿ ಯುವಕನ ಮೇಲೆ ಗಂಭೀರವಾಗಿ ಹಲ್ಲೆ ನಡೆಸಿದ್ದರು ಎಂದು ಕಮೀಷ್ನರ್ ಕಮಲ್ ಪಂತ್ ಹೇಳಿಕೆ ನೀಡಿದ್ದರು. ಆದರೆ ಯುವಕನ ಸ್ನೇಹಿತ ಸೈಮನ್, ಅಂದು ತಾನೂ ಚಂದ್ರು ಜತೆಗಿದ್ದೆ. ಉರ್ದು ಭಾಷೆ ಬರಲ್ಲ ಎಂದಿದ್ದಕ್ಕೆ ಚೂರಿಯಿಂದ ಇರಿದು ಕೊಂದಿದ್ದಾರೆ ಎಂದು ಹೇಳಿದ್ದ. ಇದರ ಬೆನ್ನಲ್ಲೇ ಇದೀಗ ಎಂಎಲ್ ಸಿ ರವಿಕುಮಾರ್, ಚಂದ್ರು ಹತ್ಯೆ ಬಳಿಕ ಆತನ ಮನೆಗೆ ಹೋಗಿದ್ದೆವು. ಅಲ್ಲಿ ಆತನ ತಾಯಿ, ನೆರೆ ಹೊರೆಯವ್ರು ಉರ್ದು ಭಾಷೆ ಬರಲ್ಲ ಎಂದು ಹೇಳಿದ್ದಕ್ಕೆ ಕೊಲೆಯಾಗಿದ್ದಾಗಿ ಹೇಳಿದ್ದಾರೆ. ಚಂದ್ರು ಜತೆಗಿದ್ದ ಸ್ನೇಹಿತನೂ ಇದನ್ನೇ ಹೇಳಿದ್ದಾನೆ. ಇದಕ್ಕಿಂತ ಸಾಕ್ಷಿ ಇನ್ನೇನು ಬೇಕು? ಎಂದು ಪ್ರಶ್ನಿಸಿದ್ದಾರೆ.
ಅಲ್ಲದೇ ಪೊಲೀಸ್ ಕಮಿಷ್ನರ್ ಚಂದ್ರು ಹತ್ಯೆ ಬಗ್ಗೆ ಸುಳ್ಳು ಹೇಳಿದ್ದಾರೆ. ಈ ನಿಟ್ಟಿನಲ್ಲಿ ಸಂಪೂರ್ಣ ತನಿಖೆ ನಡೆಯಬೇಕು ಎಂದು ಆಗ್ರಹಿಸಿದ್ದಾರೆ.
ಬಾಲಕಿ ಮೇಲೆ ಗ್ಯಾಂಗ್ ರೇಪ್; ವಿಡಿಯೋ ಮಾಡಿ ಬೆದರಿಕೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ