ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ದಿನಾಂಕ: 13/12/2021 ರಿಂದ 24/12/2021 ರವರೆಗೆ ಬೆಳಗಾವಿ ನಗರದ ಸುವರ್ಣ ವಿಧಾನಸೌಧದಲ್ಲಿ ಕರ್ನಾಟಕ ರಾಜ್ಯ ವಿಧಾನ ಮಂಡಲದ ಚಳಗಾಲ ಅಧಿವೇಶನ ನಡೆಯಲಿರುವುದರಿಂದ ನಗರದಲ್ಲಿ ಸಂಚಾರ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಿ ಪೊಲೀಸ್ ಇಲಾಖೆ ಪ್ರಕಟಣೆ ನೀಡಿದೆ.
ಅಧಿವೇಶನದ ಸಮಯದಲ್ಲಿ ಮುಖ್ಯಮಂತ್ರಿಗಳು, ಉಪ-ಮುಖ್ಯಮಂತ್ರಿಗಳು, ಸಭಾಧ್ಯಕ್ಷರು, ಸಭಾಪತಿಗಳು, ಮಂತ್ರಿಮಂಡಲದ ಸಚಿವರು, ವಿಧಾನ ಸಭೆ/ವಿಧಾನ ಪರಿಷತ್ ಸದಸ್ಯರು, ವಿವಿಧ ಇಲಾಖೆಯ ಕಾರ್ಯದರ್ಶಿಗಳು, ಹಿರಿಯ ಅಧಿಕಾರಿಗಳು ಹಾಗೂ ಇನ್ನಿತರೆ ಗಣ್ಯ ವ್ಯಕ್ತಿಗಳು ಭಾಗವಹಿಸುತ್ತಾರೆ.
ನಗರದಲ್ಲಿ ಗಣ್ಯರು ಸಂಚರಿಸುವ ಮಾರ್ಗದಲ್ಲಿ ಸಂಚಾರ ವ್ಯವಸ್ಥೆಯಲ್ಲಿ ಯಾವುದೇ ರೀತಿಯ ಅಡೆತಡೆ ಉಂಟಾಗದಂತೆ ನೋಡಿಕೊಳ್ಳುವ ನಿಟ್ಟಿನಲ್ಲಿ ದಿನಾಂಕ: 13/12/2021 ರಿಂದ 24/12/2021 ರವರೆಗೆ ನಗರದ ಈ ಕೆಳಗೆ ನಮೂದಿಸಿದ ಆಯ್ದ ರಸ್ತೆಗಳಲ್ಲಿ ಎಲ್ಲ ಮಾದರಿಯ ವಾಹನಗಳ ನಿಲುಗಡೆ ಹಾಗೂ ವಾಹನ ಸಂಚಾರವು ನಿರ್ಬಂಧನೆಗೊಳಪಟ್ಟಿರುತ್ತದೆ.
ಸಾರ್ವಜನಿಕರು ಈ ಕೆಳಕಂಡ ಮಾರ್ಗಗಳಲ್ಲಿ ವಾಹನಗಳು ನಿಲುಗಡೆ ಮಾಡದೇ ಹಾಗೂ ಸಂದರ್ಭನುಸಾರವಾಗಿ ಇನ್ನಿತರೆ ಪ್ರಮುಖ ರಸ್ತೆಗಳಲ್ಲಿ ಸ್ಥಳೀಯ ಪೊಲೀಸರು ನೀಡುವ ಸೂಚನೆಯಂತೆ ಸಂಚರಿಸಿ ಬದಲಿ ಮಾರ್ಗ ಬಳಸಿಕೊಳ್ಳಬೇಕು. ನಗರ ಪ್ರವೇಶಿಸುವ ಭಾರಿ ವಾಹನಗಳು ಸೂಚಿಸಿದ ಬದಲಿ ಮಾರ್ಗದಲ್ಲಿ ಸಂಚರಿಸಬೇಕು ಎಂದು ಪೊಲೀಸ್ ಇಲಾಖೆ ತಿಳಿಸಿದೆ.
ಗಣ್ಯವ್ಯಕ್ತಿಗಳು ಸಂಚರಿಸುವ ರಸ್ತೆಗಳ ವಿವರ :
1) ಸಾಂಬ್ರಾ ವಿಮಾನ ನಿಲ್ದಾಣದಿಂದ ಬಾಗಲಕೋಟ ಕ್ರಾಸ್, ಮುತಗಾ, ಶಿಂಧೋಳ್ಳಿ ಕ್ರಾಸ್. ಬಸವನ ಕುಡಚಿ, ಎಸ್.ಸಿ. ಮೋಟರ್, ಸಾಂಬ್ರಾ ಅಂಡರ್ ಬ್ರಿಜ್ ವರೆಗಿನ ಏರಪೋರ್ಟ ರಸ್ತೆ.
2) ಸಾಂಬ್ರಾ ಅಂಡರ್ ಬ್ರಿಜ್‌ದಿಂದ ಮುಚ್ಚಂಡಿ ಗ್ಯಾರೇಜ್‌ವರೆಗಿನ ಎರಡೂ ಬದಿಯ ಸರ್ವಿಸ್ ರಸ್ತೆ.
3) ಕನಕದಾಸ ವೃತ್ತದಿಂದ ಶ್ರೀನಗರ ಗಾರ್ಡನ ಕ್ಯಾನ್ಸರ್ ಆಸ್ಪತ್ರೆಯವರೆಗಿನ ಎರಡೂ ಬದಿಯ ಸರ್ವಿಸ್ ರಸ್ತೆ.
4) ಸುವರ್ಣ ವಿಧಾನ ಸೌಧ ದಿಂದ ಹೊಟೇಲ್ ಫೇರ್‌ಫೀಲ್ ಮ್ಯಾರಿಯೇಟ್, ಕಾಕತಿ ವರೆಗಿನ ಪೂನಾ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 4
5) ಕನಕದಾಸ ವೃತ್ತದಿಂದ ಸರ್ಕಿಟ್ ಹೌಸ ವರೆಗಿನ ರಸ್ತೆ
6) ಸಾಂಬ್ರಾ ಅಂಡರ್ ಬ್ರಿಜ್‌ದಿಂದ ಗಾಂಧಿ ನಗರ ವರೆಗಿನ ಸರ್ವಿಸ್ ರಸ್ತೆ, ಗಾಂಧಿ ನಗರದಿಂದ ಹೊಟೇಲ್ ಸಂಕಮ್ ಹಾಗೂ ನಿತ್ಯಾನಂದ ಸರ್ಕಲ್ ವರೆಗಿನ ರಸ್ತೆ.
7) ಕಿಲ್ಲಾ ಕೆರೆ ಅಶೋಕ ಪಿಲ್ಲರ ವೃತ್ತದಿಂದ ಚನ್ನಮ್ಮ ವೃತ್ತ ಮಾರ್ಗವಾಗಿ ಕ್ಲಬ್ ರಸ್ತೆ ವರೆಗಿನ ರಸ್ತೆ
8) ಸಂಗೊಳ್ಳಿ ರಾಯಣ್ಣ ವೃತ್ತದಿಂದ ಕೃಷ್ಣದೇವರಾಯ [ಕೋಲ್ದಾಪೂರ] ವೃತ್ತದ ವರೆಗಿನ ಹಳೆ ಪಿಬಿ ರಸ್ತೆ
9) ಚನ್ನಮ್ಮ ವೃತ್ತದಿಂದ ಕೃಷ್ಣದೇವರಾಯ [ಕೋಲ್ಲಾಪೂರ] ವೃತ್ತ ವರೆಗಿನ ಡಾ| ಬಿ. ಆರ್. ಅಂಬೇಡ್ಕರ ರಸ್ತೆ.
10) ಕೃಷ್ಣದೇವರಾಯ [ಕೋಲ್ಲಾಪೂರ] ವೃತ್ತದಿಂದ ಕೆ.ಎಲ್.ಇ. ಛತ್ರಿವರೆಗಿನ ಕೆ.ಎಲ್.ಇ. ರಸ್ತೆ.
11) ಚನ್ನಮ್ಮ ವೃತ್ತದಿಂದ ಕಾಲೇಜ್ ರಸ್ತೆ, ಬೋಗಾರವೇಸ್ ವೃತ್ತ, ಖಾನಾಪೂರ ರಸ್ತೆ, ಕಾಂಗ್ರೇಸ್ ರಸ್ತೆ, ಪೀರನವಾಡಿ ಕ್ರಾಸ್ ಮುಖಾಂತರ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ [ವಿಟಿಯು] ವರೆಗಿನ ರಸ್ತೆ.
ಭಾರಿ ವಾಹನಗಳ ಮಾರ್ಗ ಬದಲಾವಣೆ ಮಾಡಲಾದ ರಸ್ತೆಗಳ ವಿವರ
1) ಕೊಲ್ಲಾಪೂರ, ನಿಪ್ಪಾಣಿ, ಸಂಕೇಶ್ವರ, ಮಾರ್ಗವಾಗಿ ಕಾಲೇಜ್ ರಸ್ತೆ ಮುಖಾಂತರ ಖಾನಾಪೂರ ಕಡೆಗೆ ಸಾಗುವ ಎಲ್ಲ ಭಾರಿ ವಾಹನಗಳು ಅನಾಬಾಕುಲ್ ವೃತ್ತ ಹತ್ತಿರ ಬಲತಿರುವ ಪಡೆದುಕೊಂಡು ಬಾಕ್ಸಾಯಿಟ್ ರಸ್ತೆ ಮುಖಾಂತರ ಫಾರೆಸ್ಟ ನಾಕಾ, ಹಿಂಡಲಗಾ ಗಣೇಶ ಮಂದಿರ, ಗಾಂಧಿ ಸರ್ಕಲ್ (ಅರಗನ ತಲಾಬ), ಶೌರ್ಯ ಚೌಕ (ಮಿಸ್ಟ್ರಿ ಆಸ್ಪತ್ರೆ ಸರ್ಕಲ್), ಕೇಂದ್ರಿಯ ವಿದ್ಯಾಲಯ ನಂ.2, ಶರ್ಕತ ಪಾರ್ಕ, ಗ್ಲೋಬ್ ಥಿಯೇಟರ್ ಸರ್ಕಲ್ ಮೂಲಕ ಖಾನಾಪೂರ ರಸ್ತೆಗೆ ಸೇರಿ ಮುಂದೆ ಸಾಗುವುದು.
2) ಖಾನಾಪೂರ ಕಡೆಯಿಂದ ಚನ್ನಮ್ಮ ವೃತ್ತ ಮೂಲಕ ಸಂಚರಿಸುವ ಎಲ್ಲ ಭಾರಿ ವಾಹನಗಳು
ಗ್ಲೋಬ್ ಸರ್ಕಲ್ ಹತ್ತಿರ ಎಡ ತಿರುವ ಪಡೆದುಕೊಂಡು, ಶರ್ಕತ ಪಾರ್ಕ, ಕೇಂದ್ರಿಯ
ವಿದ್ಯಾಲಯ ನಂ.2, ಶೌರ್ಯ ಚೌಕ (ಮಿಲ್ಮ ಆಸ್ಪತ್ರೆ ಸರ್ಕಲ್), ಗಾಂಧಿ ಸರ್ಕಲ್ (ಅರಗನ
ತಲಾಬ), ಹಿಂಡಲಗಾ ಗಣೇಶ ಮಂದಿರ, ಫಾರೆಸ್ಟ ನಾಕಾ, ಬಾಕ್ಸಾಯಿಟ್ ರಸ್ತೆ ಸೇರಿ ಮುಂದೆ
ಸಾಗುವುದು.
ಬೆಳಗಾವಿ ಅಧಿವೇಶನದ ವೇಳೆ ಎಲ್ಲರ ನಿರೀಕ್ಷೆಯೇ ಬೇರೆ, ಆತಂಕವೇ ಬೇರೆ, ಏನದು?
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ