Latest

ಶಿಕ್ಷಕರ ವರ್ಗಾವಣೆಯ ನಿಯಮಗಳನ್ನು ಸರಿಪಡಿಸಿ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:  ಶಿಕ್ಷಕರ ವರ್ಗಾವಣೆಯ ಕರಡು ಪಟ್ಟಿಯಲ್ಲಿ ವಿಕಲಚೇತನ ಶಿಕ್ಷಕರಿಗೆ ಸಂಬಂಧಿಸಿದಂತೆ ಅನೇಕ ಲೋಪ ದೋಷಗಳು ಕಂಡು ಬಂದಿದ್ದು ಅವುಗಳನ್ನು ಸರಿಪಡಿಸುಂತೆ ವಿಕಲಚೇತನ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಬೀರಪ್ಪ ಅಂಡಗಿ ಚಿಲವಾಡಗಿ ಸರಕಾರವನ್ನು ಒತ್ತಾಯಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು ಶಿಕ್ಷಕರ ವರ್ಗಾವಣೆಯ ಹೊಸ ಕರಡು ಪಟ್ಟಿಯಲ್ಲಿ ವಿಕಲಚೇತನ ಶಿಕ್ಷಕರಿಗೆ ಸಂಬಂಧಿಸಿದ ಅಂಶಗಳಲ್ಲಿ ವಿಕಲಚೇತನ ಶಿಕ್ಷಕರಿಗೆ ನೀಡಲಾಗುವ ಆದ್ಯತೆಯನ್ನು ಸೇವಾ ಅವಧಿಯಲ್ಲಿ ಒಂದು ಬಾರಿ ಮಾತ್ರ ಪಡೆಯಬೇಕು ಎಂಬ ನಿಯಮವನ್ನು ಅಳವಡಿಸಲಾಗಿದೆ. ಈ ನಿಯಮವು ೨೦೧೬ರ ವಿಕಲಚೇತನರ ಕಾಯ್ದೆಗೆ ವಿರುದ್ದವಾಗಿದ್ದು, ವಿಕಲಚೇತನ ಶಿಕ್ಷಕರಿಗೆ ಕಾರ್ಯ ನಿರ್ವಹಿಸಲು ತೊಂದರೆಯಾಗುತ್ತದೆ. ವಿಕಲಚೇತನ ಶಿಕ್ಷಕರಿಗೆ ಪ್ರತಿ ವರ್ಷ ವರ್ಗಾವಣೆ ಹೊಂದಲು ಅವಕಾಶ ನೀಡಬೇಕು. ಜೊತೆಗೆ ಕೇಂದ್ರ ಸರಕಾರದಿಂದ ನೀಡಲಾಗುವ ಯು.ಡಿ.ಐ.ಡಿ.ಕಾರ್ಡ ಎಲ್ಲಾ ರೀತಿಯ ವರ್ಗಾವಣೆ ಹಾಗೂ ಸೌಲಭ್ಯವನ್ನು ಪಡೆಯಲು ಆಧಾರವಾಗಿರುವುದರಿಂದ ಜಿಲ್ಲಾ ಮಟ್ಟದಲ್ಲಿ ಅಂಗವಿಕಲತೆಗೆ ಸಂಬಂಧಪಟ್ಟ ಯಾವುದೇ ಪ್ರಮಾಣ ಪತ್ರವನ್ನು ನೀಡುವುದಿಲ್ಲ. ಹಾಗಾಗಿಯೇ ವರ್ಗಾವಣೆಯ ಸಮಯದಲ್ಲಿ ವಿಕಲಚೇತನ ಶಿಕ್ಷಕರಿಗೆ ಅವರ ಅಂಗವಿಕಲತೆಗೆ ಸಂಬಂಧಿಸಿದಂತೆ ಜಿಲ್ಲಾ ಮಟ್ಟದ ವೈದ್ಯಕೀಯ ಮಂಡಳಿಯಿಂದ ಅಂಗವಿಕಲತೆಯ ಪ್ರಮಾಣ ಪತ್ರವನ್ನು ತರಲು ಸೂಚಿಸಿರುವ ಅಂಶವನ್ನು ಕೈ ಬೀಡಬೇಕು. ಘಟಕದ ಹೊರಗಡೆ ಒಂದು ಭಾರಿ ಮಾತ್ರ ವರ್ಗಾವಣೆ ಪಡೆಯಬೇಕು ಎಂಬ ನಿಯಮದಿಂದ ವಿಕಲಚೇತನ ಶಿಕ್ಷಕರಿಗೆ ವಿನಾಯತಿ ನೀಡಬೇಕು. ಒಂದು ಸ್ಥಳದಲ್ಲಿ ಕಡ್ಡಾಯವಾಗಿ ಮೂರು ವರ್ಷ ಸೇವೆ ಸಲ್ಲಿಸಬೇಕು ಎಂಬ ನಿಯಮದಿಂದ ವಿಕಲಚೇತನ ಶಿಕ್ಷಕರಿಗೆ ವಿನಾಯತಿ ನೀಡಿ ಪ್ರತಿ ಭಾರಿ ವರ್ಗಾವಾಗಲು ಅನುಮತಿ ನೀಡಬೇಕು. ಕಲ್ಯಾಣ ಕರ್ನಾಟಕದಲ್ಲಿ ೧೦ ಸೇವೆ ಸಲ್ಲಿಸಿದವರಿಗೆ ಮಾತ್ರ ವರ್ಗಾವಣೆ ಎಂಬ ನಿಯಮದಿಂದ ವಿಕಲಚೇತನ ಶಿಕ್ಷಕರಿಗೆ ವಿನಾಯತಿ ನೀಡಬೇಕು. ಆದ್ಯತೆಯ ಪ್ರಕರಣದಲ್ಲಿ ಪತಿ ಹಾಗೂ ಪತ್ನಿ ಪ್ರಕರಣದವರಿಗೆ ಮೊದಲ ಆದ್ಯತೆಯನ್ನು ನೀಡಿರುವುದರಿಂದ ವಿಕಲಚೇತನ ಶಿಕ್ಷಕರಿಗೆ ತೊಂದರೆಯಾಗುತ್ತದೆ. ವಿಕಲಚೇತನ ಶಿಕ್ಷಕರಿಗೆ ಪ್ರಥಮ ಆದ್ಯತೆಯನ್ನು ನೀಡಬೇಕು. ಜೊತೆಗೆ ಕರಡು ಪಟ್ಟಿ ಹಾಗೂ ಮಾರ್ಗ ಸೂಚಿಯಲ್ಲಿ ಅನೇಕ ವ್ಯತ್ಯಾಸಗಳಿದ್ದು ಅವುಗಳ ಬಗ್ಗೆ ಸರಕಾರವು ಗಮನವನ್ನು ಹರಿಸಿ ವಿಕಲಚೇತನ ಶಿಕ್ಷಕರಿಗೆ ನ್ಯಾಯ ಒದಗಿಸಿ ಕೊಡುವಂತೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related Articles

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button