Belagavi NewsBelgaum News

*ಮಾಧ್ಯಮ ಸಮನ್ವಯ ಸಮಿತಿ ಸಭೆಗೆ ಬಹಿಷ್ಕಾರ*

ಪ್ರಗತಿವಾಹಿನಿ ಸುದ್ದಿ: ಅ. 23 ರಿಂದ 3 ದಿನಗಳ ಕಾಲ ಚನ್ನಮ್ಮನ ಕಿತ್ತೂರಿನಲ್ಲಿ ನಡೆಯುತ್ತಿರುವ ಐತಿಹಾಸಿಕ ಚನ್ನಮ್ಮನ ಕಿತ್ತೂರು ಉತ್ಸವದ ಯಶಸ್ಸಿಗಾಗಿ ಬೆಳಗಾವಿ ಜಿಲ್ಲಾಡಳಿತ 20 ಉಪ ಸಮಿತಿಗಳನ್ನು ರಚನೆ ಮಾಡಿದೆ. ಅದರಲ್ಲಿ ಮಾಧ್ಯಮ ಸಮನ್ವಯ ಸಮಿತಿ ಕೂಡಾ ಒಂದಾಗಿದೆ.

ಈ ಉಪಸಮಿತಿ ಅಧ್ಯಕ್ಷರನ್ನಾಗಿ ವಾರ್ತಾ ಮತ್ತು ಪ್ರಚಾರ ಇಲಾಖೆಯ ಸಹಾಯಕ ನಿರ್ದೇಶಕ ಗುರುನಾಥ ಕಡಬೂರ ಅವರನ್ನು ನೇಮಕ ಮಾಡಲಾಗಿದೆ. ಆದರೆ, ಮಾಧ್ಯಮ ಸಮನ್ವಯ ಸಮಿತಿಯಲ್ಲಿ ಸ್ಥಳೀಯ ಕೆಲವು ಮಾಧ್ಯಮ ಪ್ರತಿನಿಧಿಗಳನ್ನು ಕಡೆಗಣ ಸಲಾಗಿದೆ. ಪತ್ರಕರ್ತರು ನೀಡಿದ ಸಲಹೆ ಸೂಚನೆಗಳಿಗೆ ಬೆಲೆ ನೀಡದ ಅಧಿಕಾರಿಗಳು ಎಲ್ಲವು ತಮ್ಮ ಮೂಗಿನ ನೇರಕ್ಕೆ ನಡೆಯಬೇಕೆಂಬ ಆರೋಪವು ಕೇಳಿ ಬಂದಿದೆ. ಜಿಲ್ಲಾಧಿಕಾರಿಗಳು ಕಿತ್ತೂರು ಉತ್ಸವ ಪೂರ್ವಭಾವಿ ಸಭೆಯಲ್ಲಿ ರಾಜ್ಯ ಮಟ್ಟದ ಕಿತ್ತೂರು ಉತ್ಸವವನ್ನು ವಿಶ್ವ ಮಟ್ಟದಲ್ಲಿ ಪ್ರಚಾರ ಸಿಗುವ ಹಾಗೆ ಮಾಡಲಾಗುತ್ತದೆ ಎಂದು ವಾಗ್ದಾನ ಮಾಡಿದ್ದರು. ಆದರೆ ಜಿಲ್ಲಾ ಮಟ್ಟದ ಮಾಧ್ಯಮ ಪ್ರತಿನಿಧಿಗಳನ್ನು ಕೂಡ ಈ ಸಮಿತಿಯಲ್ಲಿ ಕಡೆಗಣ ಸಲಾಗಿದೆ. ಹೀಗಾದರೆ ರಾಜ್ಯ ಮಟ್ಟದಲ್ಲಿ ಪ್ರಚಾರ ಸಿಗುವುದಾದರೂ ಹೇಗೆಂಬ ಪ್ರಶ್ನೆ ಸಹಜವಾಗಿಯೇ ಮೂಡುತ್ತದೆ.


ಅಧಿಕಾರಿಗಳು ಮಾಡಿದ ಈ ಎಡವಟ್ಟನ್ನು ತಕ್ಷಣ ಸರಿಪಡಿಸಬೇಕು. ಮಾಧ್ಯಮ ಸಮನ್ವಯ ಸಮಿತಿಯಲ್ಲಿ ಕೇವಲ ಮಾಧ್ಯಮದವರು ಮಾತ್ರ ಇರಬೇಕು. ಹೀಗಾಗಿ ಶನಿವಾರ (ಅ.05) ರಂದು ನಡೆಯಬೇಕಾದ ಮಾಧ್ಯಮ ಸಮನ್ವಯ ಸಮಿತಿ ಸಭೆಗೆ ಸ್ಥಳೀಯ ಪತ್ರಕರ್ತರು ಬಹಿಷ್ಕಾರ ಹಾಕಿದ್ದಾರೆ ಎಂದು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಈರಣ್ಣ ಬಣಜಗಿ ಪ್ರಕಟಣೆ ಮೂಲಕ ತಿಳಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button