Latest

ಬೆಂಗಳೂರು ಗಲಭೆ; ಮತ್ತೋರ್ವ ಆರೋಪಿ ಬಂಧನ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಬೆಂಗಳೂರು ಗಲಭೆಗೆ ಸಂಬಂಧಿಸಿದಂತೆ ಮತ್ತೋರ್ವ ಆರೋಪಿ ಸೇರಿದಂತೆ ಹತ್ತಕ್ಕೂ ಹೆಚ್ಚು ಆರೋಪಿಗಳನ್ನು ಬಂಧಿಸಲಾಗಿದೆ. ಗಲಾಟೆ ಸಂದರ್ಭದಲ್ಲಿ ಡಿಸಿಪಿ ಶರಣಪ್ಪ ಕಾರನ್ನು ಧ್ವಂಸಮಾಡುವಲ್ಲಿ ಪ್ರಮುಖ ಪಾತ್ರವಹಿಸಿದ್ದ ಆರೊಪಿ ಮುಬಾರಕ್ ನನ್ನು ಡಿಜೆ ಹಳ್ಳಿ ಪೊಲೀಸರು ಬಂಧಿಸಿದ್ದಾರೆ.

ಡಿಜೆ ಹಳ್ಳಿ ಹಾಗೂ ಕೆ ಜೆ ಹಳ್ಳಿ ಗಲಭೆ ಸಂದರ್ಭದಲ್ಲಿ ಡಿಸಿಪಿ ಅವರ ಕಾರನ್ನು ಉದ್ರಿಕ್ತರು ಧ್ವಂಸಗೊಳಿಸಿದ್ದರು. ಈ ವೇಳೆ ಹಲವು ದಾಳಿಕೋರರು ಕಾರಿಗೆ ಮುತ್ತಿಗೆ ಹಾಕಿ ರಾಡ್ ನಿಂದ ಹೊಡೆದು ಧ್ವಂಸಗೊಳಿಸುತ್ತಿದ್ದರೆ, ಆರೋಪಿ ಮುಬಾರಕ್ ತನ್ನ ತಲೆಯಿಂದ ಕಾರಿನ ಗಾಜಿಗೆ ಡಿಚ್ಚಿ ಹೊಡೆಯುತ್ತಿದ್ದ. ಇದೇ ರೀತಿ ಡಿಚ್ಚಿ ಹೊಡೆದು ಕಾರಿನ ಎರಡು ಗಾಜನ್ನು ಈತನೇ ಒಡೆದಿದ್ದ ಎನ್ನಲಾಗಿದೆ.

Home add -Advt

ಇದೀಗ ಮುಬಾರಕ್ ಸೇರಿದಂತೆ ಹತ್ತಕ್ಕೂ ಹೆಚ್ಚು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

Related Articles

Back to top button