ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬೆಳಗಾವಿ ಗ್ರಾಮೀಣ ಕ್ಷೇತ್ರದ ಬಡಾಲ ಅಂಕಲಗಿ ಗ್ರಾಮದಲ್ಲಿ ಹರ್ಷಾ ಶುಗರ್ಸ್ ವ್ಯವಸ್ಥಾಪಕ ನಿರ್ದೇಶಕ, ಕಾಂಗ್ರೆಸ್ ಮುಖಂಡ ಚನ್ನರಾಜ ಹಟ್ಟಿಹೊಳಿ ಸೋಮವಾರ ಹೋಂ ಐಸೋಲೇಶನ್ ಕಿಟ್ ವಿತರಿಸಿ, ಕೊರೋನಾ ಸೋಂಕಿತರಿಗೆ ಮನಸ್ಥೈರ್ಯ ತುಂಬಿದರು.
ಜನರು ಕೊರೋನಾ ಸೋಂಕಿನ ಬಗ್ಗೆ ಭಯಪಡಬಾರದು. ಧೈರ್ಯದಿಂದ ಕೋವಿಡ್ ಪರೀಕ್ಷೆಯನ್ನು ಮಾಡಿಸಿಕೊಳ್ಳಬೇಕು ಎಂದ ಚನ್ನರಾಜ, ಅಗತ್ಯವಾದವರಿಗೆ ಕೊರೋನಾ ಪರೀಕ್ಷೆ ಮಾಡಿಸಿಕೊಳ್ಳಲು ಅವಕಾಶ ಮಾಡಿಕೊಟ್ಟರು.
ಇದೇ ವೇಳೆ ಲಕ್ಷ್ಮೀ ತಾಯಿ ಫೌಂಡೇಷನ್ ವತಿಯಿಂದ ಕೋವಿಡ್ 19 ಹೋಮ್ ಐಸೋಲೇಷನ್ ಕಿಟ್ ಗಳನ್ನು ವಿತರಿಸಿದ ಚನ್ನರಾಜ ಹಟ್ಟಿಹೊಳಿ, ಕೊರೋನಾ ಸೋಂಕಿನ ಬಗ್ಗೆ ಯಾರೊಬ್ಬರು ಹೆದರದೇ ಧೈರ್ಯವಾಗಿರಬೇಕು. ಸಾಮಾಜಿಕ ಅಂತರ ಕಾಯ್ದುಕೊಂಡು, ಮಾಸ್ಕ್, ಸ್ಯಾನಿಟೈಜರ್ ಗಳನ್ನು ಸರಿಯಾಗಿ ಬಳಸಬೇಕು ಎಂದು ಕರೆ ನೀಡಿದರು.
ಲಸಿಕೆ ಹಾಕಿಸಿಕೊಳ್ಳಲು ಆನ್ ಲೈನ್ ನೋಂದಣಿ ಮಾಡಿಕೊಳ್ಳದವರ ಸಮೀಕ್ಷೆ ಮಾಡಿ ನೋಂದಣಿಗೆ ಸಹಾಯ ಮಾಡುವಂತೆ ಕಾಂಗ್ರೆಸ್ ಕೋವಿಡ್ ಸೇವಕರಿಗೆ ಮಾರ್ಗದರ್ಶನ ನೀಡಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಗೀತಾ ಹಿರೇಮಠ, ರಾಮನಗೌಡ ಪಾಟೀಲ, ಸಿದ್ದು, ಬಸವಂತ ನಾಯ್ಕ, ವಿಠ್ಠಲ ಅರ್ಜುನವಾಡಿ, ಲಕ್ಷ್ಮೀ ಹಳೆಮನಿ, ಸಾವಕ್ಕ ಅಗಸಿಮನಿ, ಸೋಮಪ್ಪ ತೊಲಗಿ, ಗಂಗಪ್ಪ, ರಾಮಪ್ಪ ಅರ್ಜುನವಾಡಿ, ಪಡೆಪ್ಪ ಅರಳೀಕಟ್ಟಿ, ಮೂಶೆಪ್ಪ ಹಟ್ಟಿ, ಯಲಗೌಡ ಕೋವಿಡ್ ಆಶಾ ಕಾರ್ಯಕರ್ತೆಯರು, ಆರೋಗ್ಯಾಧಿಕಾರಿಗಳು, ಪಕ್ಷದ ಕಾರ್ಯಕರ್ತರು ಸೇರಿದಂತೆ ಇತರರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ