Belagavi NewsBelgaum NewsPoliticsSports

*ಹಾಫ್ ಪಿಚ್ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ ನೀಡಿದ ಚನ್ನರಾಜ ಹಟ್ಟಿಹೊಳಿ*

ಪ್ರಗತಿವಾಹಿನಿ ಸುದ್ದಿ :  ಶನಿವಾರ ಬೆಂಡಿಗೇರಿ ಗ್ರಾಮಕ್ಕೆ ಆಗಮಿಸಿದ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ಹಲವು ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರು.

 ಬೆಂಡಿಗೇರಿ ಗ್ರಾಮದಲ್ಲಿ‌ ಸುಮಾರು 50 ಲಕ್ಷ ರೂ,ಗಳ ವೆಚ್ಚದಲ್ಲಿ ನಿರ್ಮಾಣದ ಹಂತದಲ್ಲಿರುವ ಶ್ರೀ ವಿಠ್ಠಲ ರುಕ್ಮಾಯಿ ಮಂದಿರದ ಕಟ್ಟಡ ಕಾಮಗಾರಿಯ ಪ್ರಗತಿ ಪರಿಶೀಲನೆ ನಡೆಸಿದ ಚನ್ನರಾಜ, ಮೊದಲನೇ ಕಂತಿನಲ್ಲಿ ಬಿಡುಗಡೆಗೊಂಡ 20 ಲಕ್ಷ ರೂ,ಗಳ ಚೆಕ್ ನ್ನು ಈಗಾಗಲೇ ಮಂದಿರ ಕಮಿಟಿಯವರಿಗೆ ಹಸ್ತಾಂತರಿಸಲಾಗಿದೆ. ಕಾಮಗಾರಿ ಪ್ರಗತಿಯಾದಂತೆ ಉಳಿದ ಹಣವನ್ನೂ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದರು.

ಈ ವೇಳೆ ಪುಂಡಲೀಕ ನನ್ನೋಜಿ, ಮಲ್ಲಸರ್ಜ ಖಂಡೋಜಿ, ಬಾಳೇಶ್ ಮೂಡಲಗಿ, ಸಿದ್ದಣ್ಣ ಹಾವಣ್ಣವರ, ರವಿ ಮೇಳೆದ್, ಪ್ರಕಾಶ ಪಾಟೀಲ, ಬಸನಗೌಡ ಪಾಟೀಲ, ರುದ್ರಪ್ಪ ನನ್ನೋಜಿ, ಮಲ್ಲಿಕಾರ್ಜುನ ಡಬ್ಬು ಮುಂತಾದವರು ಉಪಸ್ಥಿತರಿದ್ದರು.

ನಂತರ, ಬೆಂಡಿಗೇರಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ 5 ಹೆಚ್ಚುವರಿ ಕೊಠಡಿಗಳನ್ನು ನಿರ್ಮಾಣ ಮಾಡುವ ನಿಟ್ಟಿನಲ್ಲಿ ಸ್ಥಳದ ಪರಿಶೀಲನೆ ನಡೆಸಿ, ಶಾಲಾ ಸಿಬ್ಬಂದಿ ಜೊತೆ ಸಮಾಲೋಚನೆ ನಡೆಸಿದರು. ಇದೇ ಸಮಯದಲ್ಲಿ ಕಂಪ್ಯೂಟರ್ ಲ್ಯಾಬ್‌ ಗೆ ತೆರಳಿ ಹೊಸದಾಗಿ 5 ಕಂಪ್ಯೂಟರ್ ಗಳನ್ನು ವಿತರಿಸಿದ ದಾನಿಗಳ ಕೊಡುಗೆಯನ್ನು ಶ್ಲಾಘಿಸಿದರು. 

Home add -Advt

ಈ ವೇಳೆ ಶಾಲೆಯ ಗುರುಮಾತೆ ವಿದ್ಯಾ ಶೀಗಿಹಳ್ಳಿ, ದೈಹಿಕ ಶಿಕ್ಷಕರಾದ ಜಿ.ಸಿ.ಮುದಿಗೌಡರ್, ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಮಲ್ಲಪ್ಪ ಕಾದ್ರೋಳ್ಳಿ, ಸರ್ವಸದಸ್ಯರು ಸೇರಿದಂತೆ ಬೆಂಡಿಗೇರಿ ಗ್ರಾಮಸ್ಥರು ಇದ್ದರು.

ಬೆಂಡಿಗೇರಿ ಗ್ರಾಮದಲ್ಲಿ ನಿರ್ಮಾಣ ಹಂತದಲ್ಲಿರುವ ಗ್ರಾಮ ಪಂಚಾಯತಿ ಕಟ್ಟಡದ ಪ್ರಗತಿ ಪರಿಶೀಲನೆ ನಡೆಸಿದ ಅವರು, ಅಗತ್ಯ ಸೂಚನೆಗಳನ್ನು ನೀಡಿದರು.

ಈ ವೇಳೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶಿವಾನಂದ ಚಂಡು, ಸದಸ್ಯರಾದ ದುಂಡಪ್ಪ ಮೇಳೆದ್, ಶಂಕರಗೌಡ ಮೇಳೆದ್, ಪಿಡಿಒ ಪತ್ತಾರ, ರವಿ ಮೇಳೆದ್, ಸಿದ್ದಣ್ಣ ಹಾವಣ್ಣವರ್, ಸಂತೋಷ ಅಂಗಡಿ, ಬಸವರಾಜ ಡಮ್ಮಣಗಿ ಇದ್ದರು.

ನಂತರ, ಬೆಂಡಿಗೇರಿ ಗ್ರಾಮದಲ್ಲಿ ಲಕ್ಷ್ಮೀತಾಯಿ ಫೌಂಡೇಷನ್‌ ವತಿಯಿಂದ ಆಯೋಜಿಸಲಾಗಿರುವ ಹಾಫ್ ಪಿಚ್ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ ನೀಡಿದ ಚನ್ನರಾಜ, ಕೆಲಕಾಲ ಕ್ರಿಕೆಟ್ ಆಡಿದರು.

Related Articles

Back to top button