
ಪ್ರಗತಿವಾಹಿನಿ ಸುದ್ದಿ: ಜನ್ಮ ದಿನದ ಹಿನ್ನೆಲೆಯಲ್ಲಿ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಅವರಿಗೆ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಶುಭ ಕೋರಿದರು.

ಬೆಳಗ್ಗೆಯಿಂದ ಸಂಜೆಯವರೆಗೂ ಸಾವಿರಾರು ಜನರು ಮನೆಗೆ ಆಗಮಿಸಿ ಶುಭ ಕೋರಿದರು. ಅನೇಕರು ತಾವೇ ಕೇಕ್ ಗಳನ್ನು ತಂದು ಚನ್ನರಾಜ ಅವರ ಹಸ್ತದಿಂದ ಕಟ್ ಮಾಡಿಸಿ ತಿನ್ನಿಸಿದರು.

ಅಭಿಮಾನಿಗಳು, ಕಾರ್ಯಕರ್ತರು, ಅಧಿಕಾರಿಗಳು, ಸ್ನೇಹಿತರು, ಹಿತೈಷಿಗಳು ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಆಗಮಿಸಿದ್ದನ್ನು ಕಂಡು ಭಾವುಕರಾದ ಚನ್ನರಾಜ ಹಟ್ಟಿಹೊಳಿ, ಜನರ ಈ ಪ್ರೀತಿ, ವಿಶ್ವಾಸವೇ ನಮ್ಮನ್ನು ಈ ಮಟ್ಟಕ್ಕೆ ಬೆಳೆಸಿದೆ. ಜನರ ವಿಶ್ವಾಸಕ್ಕೆ ಚಿರ ಋಣಿಯಾಗಿರುವೆ. ಇದನ್ನು ಉಳಿಸಿಕೊಂಡು ಹೋಗುತ್ತೇನೆ ಎಂದು ತಿಳಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ