Kannada NewsKarnataka NewsLatest
*ಕರೆಂಟ್ ಶಾಕ್; 8 ವರ್ಷದ ಬಾಲಕ ದುರ್ಮರಣ*

ಪ್ರಗತಿವಾಹಿನಿ ಸುದ್ದಿ: ರಸ್ತೆಯಲ್ಲಿ ಹೋಗುತ್ತಿದ್ದ ಬಾಲಕ ಕರೆಂಟ್ ಶಾಕ್ ಹೊಡೆದು ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ಚಿಕ್ಕಬಳ್ಳಾಪುರದ ಮಂಚೇನಹಳ್ಳಿಯಲ್ಲಿ ನಡೆದಿದೆ.
ನಾಗೇಂದ್ರ (8) ಮೃತ ಬಾಲಕ. ಮೂನಾಕ್ಷಿ ಹಾಗೂ ಮೂರ್ತಿ ದಂಪತಿಯ ಪುತ್ರ. ಪ್ರಾಥಮಿಕ ಆರೋಗ್ಯ ಕೇಂದ್ರದ ಬಳಿಯೇ ಇಂದು ಬೆಳಿಗ್ಗೆ ಈ ದುರಂತ ಸಂಭವಿಸಿದೆ.
ರಸ್ತೆಯ ಬಳಿಯೇ ಟ್ರಾನ್ಸ್ ಫಾರ್ಮರ್ ಇದ್ದು, ಟ್ರಾನ್ಸ್ ಫಾರ್ಮರ್ ಬಳಿಯೇ ರಸ್ತೆ ಅಗಲೀಕರಣಕ್ಕೆಂದು ಮಣ್ಣು ತೆಗೆಯಲಾಗಿತ್ತು. ಮಣ್ಣು ತೆಗೆದ ಹಿನ್ನೆಲೆಯಲ್ಲಿ ಹೊಂಡದಲ್ಲಿ ನೀರು ತುಂಬಿಕೊಂಡಿದೆ. ಇದರಿಂದಾಗಿ ಟ್ರಾನ್ಸ್ ಫಾರ್ಮರ್ ಗ್ರೌಂಡಿಂಗ್ ವೈಯರ್ ಹೊರ ಬಂದಿರುವುದರಿಂದ ಗುಂಡಿಯ ಸುತ್ತಮುತ್ತ ರಸ್ತೆಯಲ್ಲಿಯೂ ವಿದ್ಯುತ್ ಪ್ರವಹಿಸುತ್ತಿದೆ. ರಾಸ್ತೆ ದಾಟುತ್ತಿದ್ದ ಬಾಲಕ ಗೊತ್ತಾಗದೇ ಅದೇ ಜಾಗದಲ್ಲಿ ಸಾಗಿದ್ದಾನೆ ಕರೆಂಟ್ ಶಾಕ್ ಹೊಡೆದು ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಮಂಚೇನಹಳ್ಳಿ ಪೊಲೀಸರು ಘತನಾ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.




