ಪ್ರಗತಿವಾಹಿನಿ ಸುದ್ದಿ; ಚಿಕ್ಕಮಗಳೂರು: ಹೆಣ್ಣು ನೋಡಲು ಹೋದ 8 ಮಂದಿಗೆ ಕೊರೊನಾ ಪಾಸಿಟಿವ್ ಬಂದಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದಿದೆ.
ಇಲ್ಲಿನ ತರೀಕೆರೆ ತಾಲೂಕಿನ ಗಡಿ ಗಿರಿಯಾಪುರ ಹಾಗೂ ದಂದೂರು ಸೇರಿದಂತೆ ಒಂದೇ ಕುಟುಂಬದ ಮೂರು ಹಳ್ಳಿಯ ಸುಮಾರು 20 ಮಂದಿ ಭದ್ರಾವತಿ ಮೂಲದ ವ್ಯಕ್ತಿ ಜೊತೆ ತುಮಕೂರಿಗೆ ವಧುವನ್ನು ನೋಡಲು ಹೋಗಿದ್ದರು.
ಸುಮಾರು 20 ಜನರಲ್ಲಿ 8 ಜನಕ್ಕೆ ಕೊರೊನಾ ಪಾಸಿಟಿವ್ ಬಂದಿದೆ. ತುಮಕೂರಿಗೆ ಹೋಗಿ ಬಂದ ಗ್ರಾಮಸ್ಥರಿಗೆ ಸೋಂಕು ತಗುಲಿರುವುದರಿಂದ ಮೂರು ಹಳ್ಳಿಯ ಜನರಲ್ಲಿ ಇದೀಗ ಆತಂಕ ಎದುರಾಗಿದೆ. ಕೊರೊನಾ ಆರಂಭದ ಮೊದಲ 55 ದಿನಗಳ ಕಾಲ ಜಿಲ್ಲೆಯಲ್ಲಿ ಒಂದೇ ಒಂದು ಕೊರೊನಾ ಪಾಸಿಟಿವ್ ಪ್ರಕರಣಗಳು ಇರಲಿಲ್ಲ. ಆದರೆ ಮೇ 19 ರಿಂದ ಆರಂಭವಾದ ಪಾಸಿಟಿವ್ ಗಳ ಸಂಖ್ಯೆ ಇಂದು 70ಕ್ಕೇರಿದೆ.
ಒಂದೇ ದಿನ ಜಿಲ್ಲೆಯಲ್ಲಿ 17 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು ಪತ್ತೆಯಾದ ಬಹುತೇಕರಿಗೆ ಕೇಸ್ ಗಳಿಗೆ ಬೆಂಗಳೂರಿನ ನಂಟಿದೆ. ಬೆಂಗಳೂರಿನಲ್ಲಿ ಎಂಎಸ್‍ಸಿ ಕಂಪನಿ ಉದ್ಯೋಗಿ ಬೆಂಗಳೂರಿನಿಂದ ಹಿಂತಿರುಗಿ ಬಂದು ತನ್ನ ಕುಟುಂಬದ ಮೂವರಿಗೆ ಸೋಂಕು ಹರಡಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ