Latest

ರಣ ಮಳೆಗೆ ಕುಸಿದ ಗುಡ್ಡ; ಕಳಸ-ಹಿರೇಬೈಲು ಸಂಚಾರ ಸ್ಥಗಿತ

ಪ್ರಗತಿವಾಹಿನಿ ಸುದ್ದಿ; ಚಿಕ್ಕಮಗಳೂರು: ರಾಜ್ಯಾದ್ಯಂತ ವರುಣನ ಆರ್ಭಟ ಮುಂದುವರೆದಿದ್ದು, ರಣ ಮಳೆಯಿಂದಾಗಿ ಚಿಕ್ಕಮಗಳೂರು ಜಿಲ್ಲೆಯಲ್ಲಿ ಗುಡ್ಡ ಕುಸಿತವುಂಟಾಗಿದೆ.

ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಗುಡ್ಡ ಕುಸಿದು ರಸ್ತೆಯೇ ಬಂದ್ ಆಗಿರುವ ಘಟನೆ ಚಿಕ್ಕಮಗಳೂರಿನ ಕಳಸ ಬಳಿ ನಡೆದಿದೆ. ರಸ್ತೆಯ ಮೇಲೆ ಮಣ್ಣು, ಮರಗಳು ಬಿದ್ದಿದ್ದು, ಕಳಸ ಹಾಗೂ ಹಿರೇಬೈಲು ನಡುವಿನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ.

ಭಾರಿ ಪ್ರಮಾಣದಲ್ಲಿ ರಸ್ತೆಯಲ್ಲಿ ಬಿದ್ದಿರುವ ಮಣ್ಣನ್ನು ಮಳೆಯ ನಡುವೆ ಸ್ಥಳೀಯರೇ ತೆರವುಗೊಳಿಸುತ್ತಿದ್ದಾರೆ. ಸಂಚಾರ ಕಡಿತಗೊಂಡಿರುವುದರಿಂದ ಎರಡು ಊರುಗಳ ನಡುವೆ ಸಂಪರ್ಕವೇ ಇಲ್ಲದಂತಾಗಿದೆ.

ಗಣೇಶ ವಿಸರ್ಜನೆ ವೇಳೆ ಯುವಕನನ್ನು ಇರಿದು ಕೊಂದ ದುಷ್ಕರ್ಮಿಗಳು

Home add -Advt

https://pragati.taskdun.com/latest/ganesh-visarjaneyouthmurdergadaga/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button