ಪ್ರಗತಿವಾಹಿನಿ ಸುದ್ದಿ, ತುಮಕೂರು: ಮಗು ಕಿಡ್ನ್ಯಾಪ್ ಕೇಸ್ ಭೇದಿಸಲು ಹೋಗಿದ್ದ ಪೊಲೀಸರಿಗೆ ಮಕ್ಕಳ ಮಾರಾಟ ಪ್ರಕರಣದ ಮತ್ತೊಂದು ಗ್ಯಾಂಗ್ ಪತ್ತೆಯಾಗಿರುವ ಘಟನೆ ತುಮಕೂರಿನಲ್ಲಿ ನಡೆದಿದೆ.
ಕಿಡ್ನ್ಯಾಪ್ ಪ್ರಕರಣ ತನಿಖೆ ನಡೆಸುತ್ತಿದ್ದ ಪೊಲೀಸರೇ ಶಾಕ್ ಆದ ಘಟನೆಯಿದು. ಒಂದೇ ಗ್ಯಾಂಗ್ ನಿಂದ ಬರೋಬ್ಬರಿ 9 ಮಕ್ಕಳನ್ನು ಮಾರಾಟ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಮಕ್ಕಳ ಮಾರಾಟ ದಂಧೆಯಲ್ಲಿ ನರ್ಸ್ ಗಳೇ ಭಾಗಿಯಾಗಿದ್ದು, ತುಮಕೂರು ಜಿಲ್ಲೆಯ ಗುಬ್ಬಿ ಪೊಲೀಸರು ಮಕ್ಕಳ ಮಾರಾಟ ಜಾಲವನ್ನು ಪತ್ತೆ ಮಾಡಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ 6 ಆರೋಪಿಗಳನ್ನು ಬಂಧಿಸಿದ್ದಾರೆ. ತುಮಕೂರು ಖಾಸಗಿ ನರ್ಸಿಂಗ್ ಕಾಲೇಜು ಮ್ಯಾನೇಜರ್ ಮಹೇಶ್, ಆಸ್ಪತ್ರೆಯ ಸ್ಟಾಫ್ ನರ್ಸ್ ಗಳಾದ ಪೂರ್ಣಿಮಾ, ಸೌಜನ್ಯ, ಟ್ಯಾಟೂ ಆರ್ಟಿಸ್ಟ್ ಕೆ.ಎನ್.ರಾಮಕೃಷ್ಣ, ಹನುಮಂತರಾಜು ಹಾಗೂ ಚಿಕ್ಕನಾಯಕನ ಹಳ್ಳಿ ಮೂಲದ ಫಾರ್ಮಾಸಿಸ್ಟ್ ಮಹಬೂಬ್ ಶರೀಫ್ ಬಂಧಿತ ಆರೋಪಿಗಳು.
ಜಾತ್ರೆಗಳಲ್ಲಿ ಕೆ.ಎನ್.ರಾಮಕೃಷ್ಣ ಹಾಗೂ ಹನುಮಂತರಾಜು ಟ್ಯಾಟೂ ಬರೆಯುತ್ತಿದ್ದರು. ಬಂಧಿತ ಗ್ಯಾಂಗ್ ಅಕ್ರಮ ಸಂಬಂಧಗಳಿಂದ ಪಡೆದ ಮಕ್ಕಳನ್ನು ಮಾರಾಟ ಮಾಡುತ್ತಿತ್ತು. ಬಂಧಿತ ಆರೋಪಿಗಳಿಂದ 1 ಕಾರು ಹಾಗೂ ನಗದು ಹಣವನ್ನು ವಶಕ್ಕೆ ಪಡೆಯಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ