Latest

ಶೃಂಗೇರಿ ಅಪ್ರಾಪ್ತ ಬಾಲಕಿ ಅತ್ಯಾಚಾರ ಪ್ರಕರಣಕ್ಕೆ ಆಘಾತಕಾರಿ ಟ್ವಿಸ್ಟ್

ಪ್ರಗತಿವಾಹಿನಿ ಸುದ್ದಿ; ಚಿಕ್ಕಮಗಳೂರು: ಎರಡು ತಿಂಗಳ ಹಿಂದೆ ಬೆಳಕಿಗೆ ಬಂದಿದ್ದ ಶೃಂಗೇರಿ ಅಪ್ರಾಪ್ತ ಬಾಲಕಿ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಆಘಾತಕಾರಿ ಮಾಹಿತಿಯೊಂದು ಹೊರಬಿದ್ದಿದೆ. ಬಾಲಕಿ ಕಾಮುಕರ ಕೈಗೆ ಸಿಗಲು ಕಾರಣ ಬಾಲಕಿಯ ತಾಯಿ ಎಂಬ ವಿಷಯ ಪೊಲೀಸರಿಗೆ ಲಭ್ಯವಾಗಿದೆ.

ಒಂದು ವಿಡಿಯೋ ಇಟ್ಟುಕೊಂಡು ಕಾಮುಕರು ಸತತ 5 ತಿಂಗಳ ಕಾಲ ಬಾಲಕಿಗೆ ಬೆದರಿಸಿ ಆಕೆಯನ್ನು ತಮ್ಮ ಕಾಮದಾಹಕ್ಕೆ ಬಳಸಿಕೊಳ್ಳುತ್ತಿದ್ದರು. ಈ ವಿಚಾರ ಗೊತ್ತಿದ್ದರೂ ಹಣದ ಆಸೆಗಾಗಿ ಪ್ರಕರಣ ಮುಚ್ಚಿ ಹಾಕುವ ಯತ್ನ  ನಡೆದಿತ್ತು ಎನ್ನಲಾಗಿತ್ತು. ತನಿಖೆಯನ್ನು ಹೆಚ್ಚುವರಿ ಪೊಲೀಸ್ ಅಧಿಕಾರಿಗೆ ಒಪ್ಪಿಸಿದ ಬಳಿಕ ಪ್ರಕರಣದ ಒಂದೊಂದೆ ಸತ್ಯ ಬಯಲಾಗಿದೆ.

ಬಾಲಕಿ ತನ್ನ ಅಮ್ಮನನ್ನೇ ಚಿಕ್ಕಮ್ಮ ಎಂದು ಕರೆಯುತ್ತಿದ್ದಳು. ಹಣದಾಸೆಗಾಗಿ ಬಾಲಕಿಯನ್ನು ಹೆದರಿಸಿ ಕಾಮದ ಕ್ರೌರ್ಯಕ್ಕೆ ಹೆತ್ತ ತಾಯಿಯೇ ಬಾಲಕಿಯನ್ನು ದೂಡಿದ್ದಳು. ಆರೋಪಿ ಮಹಿಳೆ ಹಾವೇರಿ ಮೂಲದವಳಾಗಿದ್ದು, ಮಹಿಳೆ ಅಲ್ಲಿಯೇ ಮದುವೆಗಾದ್ದಳು. ಈ ವೇಳೆ ಆಕೆಗೆ ಮಗಳೊಬ್ಬಳು ಜನಿಸಿದ್ದಳು. ಬಳಿಕ ಪತಿಯನ್ನು ಬಿಟ್ಟು ಶೃಂಗೇರಿಗೆ ಬಂದು ಮಗಳೊಂದಿಗೆ ನೆಲೆಸಿದ್ದಳು. ಆಕೆ ತನ್ನ ಮಗಳೆಂದು ಹೇಳಿಕೊಂಡಿರಲಿಲ್ಲ. ಎರಡನೇಯವನನ್ನು ವಿವಾಹವಾಗಿದ್ದಳು. ಕೆಲ ವರ್ಷದಲ್ಲೇ ಎರಡನೇ ಗಂಡ ಕೂಡ ಈಕೆಯನ್ನು ಬಿಟ್ಟು ಹೋಗಿದ್ದ. ನಂತರ ತನ್ನ ಮಗಳನ್ನು ಕೆಟ್ಟ ಕೆಲಸಕ್ಕಾಗಿ ಬಳಸಿಕೊಳ್ಳಲು ಆರಂಭಿಸಿದ್ದಳು. ಆರೋಪಿಗಳಾದ ಅಭಿ, ಯೋಗೇಶ್ ಜೊತೆ ಸೇರಿ ಮಗಳ ವಿಡಿಯೋ ಮಾಡಿಟ್ಟುಕೊಂಡು ಮಗಳನ್ನೇ ಬೆದರಿಸಿ ಕಾಮಪಿಪಾಸುಗಳ ಕೈಗೊಪ್ಪಿಸಿದ್ದಳು.

ಅಂತಿಮವಾಗಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಕಿ ಮೇಲೆ ಅತ್ಯಾಚಾರವೆಸಗಿದ್ದ 32 ಜನರನ್ನು ಪೊಲೀಸರು ಬಂಧಿಸಿದ್ದಾರೆ. ಹೆತ್ತ ತಾಯಿಯೇ ಮಗಳನ್ನು ಈ ರೀತಿ ಕೃತ್ಯಗಳಿಗೆ ತಳ್ಳಿದ್ದು ಇಡೀ ನಾಗರಿಕ ಸಮಾಜ ತಲೆತಗ್ಗಿಸುವಂತೆ ಮಾಡಿದೆ.

Home add -Advt

Related Articles

Back to top button