ಪ್ಲ್ಯಾಸ್ಟಿಕ್ ಬ್ಯಾರೆಲ್ ತೆಪ್ಪದಲ್ಲಿ ಮಕ್ಕಳು, ಮಹಿಳೆಯರ ಸಂಚಾರ
ಪ್ರಗತಿವಾಹಿನಿ ಸುದ್ದಿ, ಅಥಣಿ-
ಎರಡನೇ ಬಾರಿ ಕೃಷ್ಣಾ ನದಿಗೆ ಮಹಾಪೂರ.. ಜನಜೀವನ ಅಸ್ಥವ್ಯಸ್ಥ.. ಮತ್ತೆ ಪ್ರಾಣ ಭಯದಲ್ಲಿ ಜನರು. ಪ್ರಾಣವನ್ನೆ ಒತ್ತೆ ಇಟ್ಟು ಶಾಲೆಗೆ ಹೋಗುತ್ತಿರುವ ಮಕ್ಕಳು… ನಡುಗಡ್ಡೆಯಾದ ಅಥಣಿ ತಾಲೂಕಿನ ಹುಲಗಬಾಳಿ ಗ್ರಾಮದ ಮಾಂಗ್ ವಸತಿ ತೋಟದ ೪೦ ಕಟುಂಬಗಳು ಅಪಾಯಕಾರಿ ಪ್ಲಾಸ್ಟಿಕ್ ಬ್ಯಾರಲ್ ಮೇಲೆ ಮಕ್ಕಳು ಸಂಚಾರ ಮಾಡುತ್ತಿದ್ದಾರೆ.
ಬ್ಯಾರಲ್ ಬಳಸಿ ತಯಾರಿಸಿದ ತೆಪ್ಪದ ಮೇಲೆ ಸಂಚರಿಸುತ್ತಿರುವ ಪುಟಾಣಿ ಮಕ್ಕಳು. ಪ್ರತಿ ದಿನ ಇದೆ ರೀತಿಯಾಗಿ ಒಂದು ವಾರದಿಂದ ಪಕ್ಕದಲ್ಲೆ ಇರುವ ಶಾಲೆಗಳಿಗೆ ಮಕ್ಕಳು ಹೋಗುತ್ತಿದ್ದಾರೆ. ಸ್ವಲ್ಪ ಆಯ ತಪ್ಪಿದರೂ ಪ್ರಾಣಕ್ಕೆ ಸಂಚಕಾರ ಗ್ಯಾರಂಟಿ ಅನ್ನುತ್ತದ್ದಾರೆ ಸ್ಥಳೀಯರು. ಆದರೆ ಈ ಬಗ್ಗೆ ಅಥಣಿ ತಾಲೂಕು ಆಡಳಿತಕ್ಕೆ ಈ ೪೦ ಕುಟುಂಬಗಳನ್ನು ಸುರಕ್ಷಿತ ಸ್ಥಳಕ್ಕೆ ರವಾನಿಸುವಂತೆ ಮನವಿ ಮಾಡಿದರೂ ಯಾವುದೆ ಸವಲತ್ತು ಒದಗಿಸುತ್ತಿಲ್ಲ ಎಂದು ಆರೋಪ ಮಾಡುತ್ತಿದ್ದಾರೆ ಇಲ್ಲಿನ ನಿವಾಸಿಗಳು. ಇನ್ನಾದರು ಸರಕಾರ, ಜಿಲ್ಲಾಡಳಿತ ಇವರ ನೆರವಿಗೆ ಬರುತ್ತಾ? ಮಕ್ಕಳಿಗೆ ಅಪಾಯವಾಗುವ ಮುನ್ನ ಇವರನ್ನು ತಾಲೂಕು ಆಡಳಿತ ರಕ್ಷಣೆ ಮಾಡುತ್ತಾ?
ಲಿಖಿತ ಒಪ್ಪಿಗೆ ನೀಡಿದರೆ ನವಗ್ರಾಮ ನಿರ್ಮಾಣ -ಯಡಿಯೂರಪ್ಪ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ