ಭಾರತದೊಂದಿಗೆ ಬಾಂಧವ್ಯ ವೃದ್ಧಿಗೆ ಮುಗಿ ಬೀಳುತ್ತಿರುವ ಚೀನಾ; ಭಾರತದ ಆರ್ಥ ವ್ಯವಸ್ಥೆಗೆ ಕೊಡಲಿ ಪೆಟ್ಟು ಕೊಡುವ ಸಂಚು !
ಪ್ರಗತಿವಾಹಿನಿ ಸುದ್ದಿ, ಬೀಜಿಂಗ್: “ಭಾರತದೊಂದಿಗಿನ ಸೌಹಾರ್ದಯುತ ಬಾಂಧವ್ಯಕ್ಕೆ ಚೀನಾ ಮಹತ್ತರ ಸ್ಥಾನವನ್ನು ನೀಡುತ್ತದೆ. ನಾಗರಿಕರ ಕಲ್ಯಾಣದ ಹಿತದೃಷ್ಟಿಯಿಂದ, ಉತ್ತಮ ಸಂಬಂಧದ ಅಗತ್ಯ ಇದೆ” ಎಂದು ಚೀನಾದ ವಿದೇಶಾಂಗ ಸಚಿವ ಕಿನ್ ಗಾಂಗ್ ಹೇಳಿದ್ದಾರೆ. ಇದರ ಹಿಂದೆ ಭಾರತದ ಆರ್ಥ ವ್ಯವಸ್ಥೆಗೆ ಕೊಡಲಿ ಪೆಟ್ಟು ಕೊಡುವ ಸಂಚು ಹೂಡಿದೆ ಎಂದೇ ಊಹಿಸಬಹುದು.
ಜಿ-20 ಪ್ರಯುಕ್ತ ವಿದೇಶಾಂಗ ಸಚಿವರ ಸಭೆಯಲ್ಲಿ ಪಾಲ್ಗೊಳ್ಳಲೆಂದು ಭಾರತಕ್ಕೆ ಆಗಮಿಸಿರುವ ವಿದೇಶಾಂಗ ಸಚಿವ ಕಿನ್ ಗಾಂಗ್ ಅವರು, ಭಾರತದ ವಿದೇಶಾಂಗ ಸಚಿವ ಜೈಶಂಕರ್ ಅವರೊಂದಿಗೆ ಗುರುವಾರ ಪ್ರತ್ಯೇಕ ಸಭೆ ನಡೆಸಲಿದ್ದಾರೆ. ಹಾಂಗ್‌ಕಾಂಗ್ ಮೂಲದ ‘ಸೌಥ್ ಚೀನಾ ಮಾರ್ನಿಂಗ್ ಪೋಸ್ಟ್’ ದೈನಿಕ ವರದಿಯಲ್ಲಿ ‘ಭಾರತದ ಜೊತೆಗಿನ ಸಂಬಂಧವನ್ನು ಸುಧಾರಿಸುವುದೇ ಗಾಂಗ್ ಅವರ ಭೇಟಿಯ ಉದ್ದೇಶಗಳಲ್ಲೊಂದು’ ಎಂದು ಮುದ್ರಿಸಿದೆ.
ಪೂರ್ವ ಲಡಾಖ್ ಗಡಿಯಲ್ಲಿ ಸಂಘರ್ಷ ಆರಂಭವಾದಾಗಿನಿಂದ ಹದಿನೇಳು ಬಾರಿ ಮಾತುಕತೆ ನಡೆದಿದೆ, ಆದಾಗ್ಯೂ ಭಾರತ ಮತ್ತು ಚೀನಾ ನಡುವೆ ಬಾಂಧವ್ಯ ವೃದ್ದಿಯಾಗಿಲ್ಲ. ಹಲವಾರು ಕ್ಷೇತ್ರಗಳಲ್ಲಿ ಚೀನಾದ ವಸ್ತುಗಳ ಖರೀದಿಯನ್ನು ನಿಷೇಧಿಸಿದೆ. ಮೊಬೈಲ್ ಅ್ಯಪ್ ಗಳನ್ನೂ ಒಳಗೊಂಡಂತೆ ಚೀನಾಕ್ಕೆ ಹೋಗಬಹುದಾಗಿದ್ದ ಲಾಭಕ್ಕೆ ಭಾರತ ಕತ್ತರಿ ಹಾಕಿದೆ. ವಿಶ್ವದ ಪ್ರಬಲ ಪ್ರಜಾಪ್ರಭುತ್ವ ರಾಷ್ಟ್ರ ಹಾಗೂ ಎಲ್ಲ ಹಂತದಲ್ಲಿಯೂ ಚೀನಾಕ್ಕೆ ಸೆಡ್ಡು ಹೊಡೆಯಬಲ್ಲ ರಾಷ್ಟ್ರ ಏಷ್ಯಾದಲ್ಲಿಯೇ ಭಾರತ ಬಿಟ್ಟರೆ ಮತ್ತೊಂದಿಲ್ಲ. 135 ಕೋಟಿ ಜನಸಂಖ್ಯೆ ಹೊಂದಿದ ಭಾರತವು, ಆರ್ಥಿಕ ಚಟುವಟಿಕೆಗಳಿಗೆ ಹೇಳಿ ಮಾಡಿಸಿದ ರಾಷ್ಟ್ರವಾಗಿದೆ.
ವೈರಸ್ ತಯಾರಿಕೆ, ಗೂಢಾಚಾರಿಕೆ, ಆರ್ಥಿಕವಾಗಿ ಹಿಂದುಳಿದ ರಾಷ್ಟ್ರಗಳಿಗೆ ಸಾಲ ನೀಡಿಕೆ, ಭಯೋತ್ಪಾದಕರ ಕಾರ್ಖಾನೆ ಪಾಕಿಸ್ತಾನಕ್ಕೆ ಸಹಾಯ ಹಸ್ತ ಇತ್ಯಾದಿಯಾಗಿ ಪ್ರಪಂಚದಾದ್ಯಂತ ಹಲವು ಕಪ್ಪು ಚುಕ್ಕಿಗಳಿಗೆ ಒಳಗಾದ ಚೀನಾ ತನ್ನ ಪ್ರಾಬಲ್ಯದ ಕುರುಹನ್ನು ಉಳಿಸಿಕೊಳ್ಳಲೂ ಸಹ ಹೆಣಗಾಡುತ್ತಿದೆ. ಇತ್ತೀಚೆಗೆ ಸ್ಪೈ ಬಲೂನನ್ನು ಅಮೆರಿಕಾ ಹೊಡೆದುರುಳಿಸಿದ ಮೇಲೆ, ಯಾರೂ ತನ್ನ ಪರವಾಗಿ ಮಾತಾಡಲಿಲ್ಲವೆಂದೂ, ತಾನು ಏಕಾಂಗಿಯಾಗುತ್ತೇನೆಂಬ ಭಾವನೆಯಿಂದಲೂ ಅಂತರಾಷ್ಟ್ರೀಯ ವಿಚಾರಗಳ ಬಗ್ಗೆ, ಮಾನವೀಯತೆಯ ಬಗ್ಗೆ ಜಪಿಸತೊಡಗಿದೆ. ಜೊತೆಗೆ ಭಾರತದಂತಹ ಸ್ಪರ್ಧಾತ್ಮಕ, ಅಭಿವೃದ್ಧಿ ಶೀಲ ರಾಷ್ಟ್ರಗಳೊಂದಿಗಿನ ಸಂಬಂಧಕ್ಕೀಗ ಮುಗಿ ಬೀಳುತ್ತಿದೆ.
ಈ ಅಂಶವನ್ನು ಸೂಕ್ಷ್ಮವಾಗಿ ಗಮನಿಸಿದ ಭಾರತದ ನಡೆ ನಿಗೂಢವಾಗಿಟ್ಟಿದೆ. ಕಾರಣ ಕಳೆದ ಎರೆಡು ವರ್ಷಗಳಿಂದಲೂ ಅನಾವಶ್ಯಕವಾಗಿ ಗಡಿಯೊಳಗೆ ನುಸುಳುವುದು, ಮುಷ್ಟಿ ಯುದ್ಧಕ್ಕಿಳಿಯುವುದು, ತನ್ನ ದೇಶದ ನಕಾಶೆಯಲ್ಲಿ ಅರುಣಾಚಲ ಪ್ರದೇಶವನ್ನು ಮುದ್ರಿಸುವುದನ್ನೆಲ್ಲ ಮಾಡಿದೆ. ಹೀಗಾಗಿ ತನ್ನ ಆರ್ಥಿಕ ಮೂಲಕ್ಕೆ ತಾನೇ ಕಲ್ಲು ಹಾಕಿಕೊಂಡು ಈಗ ಮತ್ತೆ ಬಣ್ಣ ಬದಲಿಸಲು ಮುಂದಾಗಿದೆ. ಸದ್ಯಕ್ಕೆ ಗಾಂಗ್ ಹಾಗೂ ಜೈಶಂಕರ್ ಭೇಟಿಗೆ ಹೆಚ್ಚು ಮಹತ್ವ ಬಂದಿದ್ದು, ಏಷ್ಯಾದ ರಾಷ್ಟ್ರಗಳಲ್ಲದೇ ಜಗತ್ತೇ ಭಾರತದ ಭವಿಷ್ಯದ ನಡೆಯನ್ನು ಬೆರಗುಗಣ್ಣಿಂದ ನೋಡುತ್ತಿದೆ.
ಖತರ್ನಾಕ್ ದರೋಡೆಕೋರರ ಗ್ಯಾಂಗ್ ಬಂಧನ; ರಾಮದುರ್ಗ ಪೊಲೀಸ್ ಕಾರ್ಯಾಚರಣೆ
ಎಸ್. ಜಿ. ಬಾಳೇಕುಂದ್ರಿ ತಾಂತ್ರಿಕ ಮಹಾವಿದ್ಯಾಲಯದ ಎನ್ನೆಸ್ಸೆಸ್ ಶಿಬಿರ ಸಮಾರೋಪ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ