ಪ್ರಗತಿವಾಹಿನಿ ಸುದ್ದಿ; ಬೀಜಿಂಗ್: ಗಡಿ ವಿಚಾರಕ್ಕೆ ಸಂಬಂಧಿಸಿದಂತೆ ಭಾರತದ ಜೊತೆ ಕ್ಯಾತೆ ತೆಗೆದಿರುವ ಚೀನಾ ಇದೀಗ ತೈವಾನ್ ಮೇಲೆ ದಾಳಿ ನಡೆಸಲು ಸಜ್ಜಾಗಿದೆ.
ಈಗಾಗಲೇ ಚೀನಾ ತೈವಾನ್ ಗಡಿಗೆ ಸಮೀಪವಿರುವ ಸೇನಾ ನೆಲೆಯನ್ನು ಆಧುನೀಕರಣಗೊಳಿಸಿರುವ ಚೀನಾ, ಸಮರಾಭ್ಯಾಸವನ್ನು ನಡೆಸಿದೆ. ವಾಯು ನೆಲೆಯಲ್ಲಿ ಹಳೆ ಕ್ಷಿಪಣಿಗಳ ಬದಲಾಗಿ ಅತ್ಯಾಧುನಿಕ ಸೂಪರ್ ಸಾನಿಕ್ ಕ್ಷಿಪಣಿಗಳನ್ನು ನಿಯೋಜನೆ ಮಾಡಿದೆ.
2500 ಕಿ.ಮೀ ದೂರ ಸಂಚರಿಸುವ ಡಿಎಫ್-17 ಕ್ಷಿಪಣಿಗಳನ್ನು ಚೀನಾ ಸಜ್ಜುಗೊಳಿಸಿದೆ. ತೈವಾನ್ ಇತ್ತೀಚಿನ ದಿನಗಳಲ್ಲಿ ಅಮೆರಿಕಾಗೆ ಬೆಂಬಲ ನೀಡುತ್ತಿರುವ ಬೆನ್ನಲ್ಲೇ ತೈವಾನ್ ತನ್ನ ಭಾಗ ಎಂದು ಚೀನಾ ಹೇಳಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ