Karnataka News

*ಡಿಜಿ-ಐಜಿಪಿಯಾಗಿ ಡಾ.ಸಲೀಂ ನೇಮಕಾತಿ ರದ್ದುಪಡಿಸುವಂತೆ ಮುಖ್ಯ ಕಾರ್ಯದರ್ಶಿಗೆ ವಕೀಲೆ ಪತ್ರ*

ಪ್ರಗತಿವಾಹಿನಿ ಸುದ್ದಿ: ಕರ್ನಾಟಕ ಪೊಲೀಸ್ ಮಹಾನಿರ್ದೇಶಕರಾಗಿ ಡಾ.ಎಂ.ಎ.ಸಲೀಂ ಅವರನ್ನು ನೇಮಕ ಮಾಡಿರುವುದನ್ನು ವಕೀಲೆ ಸುಧಾ ಕಟ್ಟಾ ಪ್ರಶ್ನಿಸಿದ್ದಾರೆ.

ಸುಪ್ರೀಂ ಕೋರ್ಟ್ ನ ಮಾರ್ಗಸೂಚಿಗಳನ್ನು ಉಲ್ಲಂಘಿಸಿ ರಾಜ್ಯ ಸರ್ಕಾರ ಡಾ.ಎಂ.ಎ.ಸಲೀಂ ಅವರನ್ನು ಡಿಜಿ-ಐಜಿಪಿಯನ್ನಾಗಿ ನೇಮಕ ಮಾಡಿದ್ದು, ಈ ನೇಮಕಾತಿ ರದ್ದು ಮಾಡುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರಿಗೆ ವಕೀಲೆ ಸುಧಾ ಪತ್ರ ಬರೆದಿದ್ದಾರೆ.

7 ದಿನಗಳಲ್ಲಿ ಸರ್ಕಾರ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳದಿದ್ದರೆ ಪಿಐಎಲ್ ಸಲ್ಲಿಸುವುದಾಗಿ ಎಚ್ಚರಿಸಿದ್ದಾರೆ.

ನೇಮಕಾತಿ ಬಗ್ಗೆ ಯಾವುದೇ ವಿಶೇಷ ಕಾರಣ ನೀಡದೆ, ಅವಧಿ ಉಲ್ಲೇಖಿಸದೇ ಡಿಜಿ-ಐಜಿಪಿ ನೇಮಕ ಮಾಡಲಾಗಿದೆ ಈ ಮೂಲ್ಕ ಸಂವಿಧಾನ ಮತ್ತು ಕಾನೂನು ಉಲ್ಲಂಘಿಸಲಾಗಿದೆ. ಡಾ.ಸಲೀಂ ಅವರ ನೇಮಕಾತಿ ಹಿಂಪಡೆಯಬೇಕು. ಸುಪ್ರೀಂ ಕೋರ್ಟ್ ಮಾರ್ಗಸೂಚಿಯಂತೆ ನೇಮಕಾತಿ ನಡೆಯಲಿ ಎಂದು ಒತ್ತಾಯಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button