ಪ್ರಗತಿವಾಹಿನಿ ಸುದ್ದಿ; ಚಿತ್ರದುರ್ಗ: ಇದು ಆರಕ್ಷಕನೇ ಭಕ್ಷಕನಾದ ಕಥೆ. ಆಗಲೇ ಎರಡು ಮದುವೆಯಾಗಿದ್ದರೂ ಮತ್ತೋರ್ವ ಯುವತಿ ಮೇಲೆ ಕಣ್ಣಿಟ್ಟು ಅತ್ಯಾಚಾರವೆಸಗಿರುವ ಹಿನ್ನೆಲೆಯಲ್ಲಿ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ಪೊಲೀಸ್ ಠಾಣೆ ಸಿಪಿಐ ವಿರುದ್ಧ ಪ್ರಕರಣ ದಾಖಲಾಗಿದೆ.
ಚಿತ್ರದುರ್ಗ ನಗರದ ಮಹಿಳಾ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರ ಪ್ರಕರಣ ದಾಖಲಾಗಿದೆ. ಸೋದರ ಮಾವನ ವಿರುದ್ಧ ಯುವತಿಯೋರ್ವಳು ದೂರು ದಾಖಲಿಸಿದ್ದಾಳೆ. ಬಿ.ಜಿ.ಉಮೇಶ್ ದಾವಣಗೆರೆಯಲ್ಲಿ ಇನ್ಸ್ ಪೆಕ್ಟರ್ ಆಗಿದ್ದಾಗ ನಿರಂತರವಾಗಿ ಅತ್ಯಾಚಾರ ಮಾಡಿದ್ದು, 5 ಬಾರಿ ಗರ್ಭಪಾತ ಮಾಡಲಾಗಿದೆ ಎಂದು ಯುವತಿ ಆರೋಪಿಸಿದ್ದಾಳೆ.
5 ವರ್ಷಗಳ ಹಿಂದೆ ದಾವಣಗೆರೆಯಲ್ಲಿ ನಿವೇಶನ ಸಮಸ್ಯೆ ಹಿನ್ನೆಲೆಯಲ್ಲಿ ಯುವತಿಯ ಕುಟುಂಬದವರು ಉಮೇಶ್ ಬಳಿ ಸಹಾಯ ಕೇಳಿದ್ದರು. ಅದರಂತೆ ಚಿತ್ರದುರ್ಗದಿಂದ ದಾವಣಗೆರೆಗೆ ಯುವತಿಯನ್ನು ಕರೆಸಿಕೊಂಡಿದ್ದ ಸೋದರ ಮಾವನೂ ಆಗಿರುವ ಇನ್ಸ್ ಪೆಕ್ಟರ್ ಉಮೇಶ್, ಯುವತಿಯ ಮೇಲೆ ನಿರಂತರ ಅತ್ಯಾಚಾರವೆಸಗಿದ್ದ ಎಂದು ಆರೋಪಿಸಲಾಗಿದೆ.
ಕರೆದಾಗ ಬರಲಿಲ್ಲ ಎಂಬ ಕಾರಣಕ್ಕೆ ಯುವತಿ ಶಿವಮೊಗ್ಗದಲ್ಲಿ ಬಿಇಡಿ ಓದುತ್ತಿದ್ದಾಗ ಅಲ್ಲಿಯೂ ಬಂದು ಅತ್ಯಾಚಾರವೆಸಗಿದ್ದಾಗಿ ಯುವತಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಈಗಾಗಲೇ ಉಮೇಶ್ ಗೆ ಇಬ್ಬರು ಹೆಂಡತಿಯರಿದ್ದು, 3ನೇ ಪತ್ನಿಯ ಹಾಗೆ ಇರು ಎಂದು ಯುವತಿಯನ್ನು ಬಲವಂತ ಮಾಡುತ್ತಿದ್ದ ಎನ್ನಲಾಗಿದೆ. ಅಲ್ಲದೇ ಹೇಳಿದಂತೆ ಕೆಳದಿದ್ದರೆ ನಿನ್ನ ತಂದೆ-ತಾಯಿ ಬದುಕು ಬೀದಿಗೆ ತರುತ್ತೇನೆ. ನಿವೇಶನ ಸಿಗದಂತೆ ಮಾಡುತ್ತೇನೆ ಎಂದು ಬೆದರಿಕೆ ಹಾಕುತ್ತಿದ್ದ ಎನ್ನಲಾಗಿದೆ. ಇದೀಗ ಉಮೇಶ್ ವಿರುದ್ಧ 376 (2)(k)(n), 323, 504, 506ಐಪಿಸಿ ಅಡಿ ಪ್ರಕರಣ ದಾಖಲಾಗಿದೆ.
https://pragati.taskdun.com/belgaum-news/murder-accused-arrested-2/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ