Latest

*IPS ಅಧಿಕಾರಿ ಸಿಐಡಿ ಡಿಐಜಿ ಆರ್.ದಿಲೀಪ್ ಇನ್ನಿಲ್ಲ*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಹಿರಿಯ ಐಪಿಎಸ್ ಅಧಿಕಾರಿ ಸಿಐಡಿ ಡಿಐಜಿ (EO) ಆರ್.ದಿಲೀಪ್ ಹೃದಯ ಸ್ತಂಭನದಿಂದ ವಿಧಿವಶರಾಗಿದ್ದಾರೆ.

ಕೆಲ ದಿನಗಳಿಂದ ಅನಾರೋಗ್ಯದಿಂದಾಗಿ ಬೆಂಗಳೂರಿನ ಬನ್ನೇರುಘಟ್ಟ ಬಳಿಯ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದ ದೀಪ್ ಅವರಿಗೆ ಚಿಕಿತ್ಸೆ ಮುಂದುವರೆದಿತ್ತು. ಆದರೆ ಇಂದು ಮಧ್ಯಾಹ್ನದ ನಂತರ ಕಾರ್ಡಿಯಾಕ್ ಅರೆಸ್ಟ್ (ಹೃದಯ ಸ್ತಂಭನ) ಆಗಿದ್ದು, ವೈದ್ಯರು ಎಷ್ಟೇ ಪ್ರಯತ್ನ ಪಟ್ಟರು ಜೀವ ಉಳಿಸಲು ಸಾಧ್ಯವಾಗಿಲ್ಲ. ಹೃದಯ ಸ್ತಂಭನದಿಂದಾಗಿ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ.

ದಿಲೀಪ್ ಮಡದಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಡಿಐಜಿ ಆಗಿದ್ದ ಆರ್.ದಿಲೀಪ್ ಐಜಿಯಾಗಿ ಪದೋನ್ನತಿ ಪಡೆಯುವವರಿದ್ದರು ಎನ್ನಲಾಗಿದೆ.

Home add -Advt

 

*ಬೆಳಗಾವಿ: ದೇವಸ್ಥಾನದ ಬಳಿಯೇ ಆತ್ಮಹತ್ಯೆಗೆ ಶರಣಾದ ASI*

https://pragati.taskdun.com/athaniasisuicidebelagavi/

*ಬೆಳಗಾವಿಯ ಏರ್ಮೆನ್ ತರಬೇತಿ ಶಾಲೆಯಲ್ಲಿ ‘ಅಗ್ನಿವೀರವಾಯು’ ಮೊದಲ ಬ್ಯಾಚ್ ನ ತರಬೇತಿ ಆರಂಭ*

https://pragati.taskdun.com/agnipath-projectagniveerbelagavitraining1st-bach/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button