ಪ್ರಗತಿವಾಹಿನಿ ಸುದ್ದಿ, ಚಿಕ್ಕೋಡಿ – ಪೌರತ್ವ ತಿದ್ದುಪಡಿ ಕಾಯ್ದೆಯು ಯಾವುದೇ ಧರ್ಮ ಅಥವಾ ಪ್ರದೇಶದ ಭಾರತೀಯ ನಾಗರೀಕರ ಮೇಲೆ ಪ್ರತಿಕೂಲ ಪರಿಣಾಮ ಬೀರುವದಿಲ್ಲ. ಬಹಳಷ್ಟು ವದಂತಿ ಮತ್ತು ತಪ್ಪು ಮಾಹಿತಿ ಹರಿದಾಡುತ್ತಿದೆ. ಅದು ಯಾವುದೂ ನಿಜವಲ್ಲ, ಪೌರತ್ವ ತಿದ್ದುಪಡಿ ಕಾಯ್ದೆಯ ಕುರಿತು ಸತ್ಯವನ್ನು ಎಲ್ಲರೊಂದಿಗೆ ಹಂಚಿಕೊಳ್ಳಬೇಕು ಎಂದು ಸಂಸದ ಅಣ್ಣಾ ಸಾಹೇಬ ಜೊಲ್ಲೆ ವಿನಂತಿಸಿಕೊಂಡರು.
ಮಾಜಿ ಶಾಸಕ ಸಂಜಯ ಪಾಟೀಲ ಮಾತನಾಡಿ ಪೌರತ್ವ ತಿದ್ದುಪಡಿ ಕಾಯ್ದೆಯಿಂದ ೧೩೦ ಕೋಟಿ ನಾಗರಿಕರಿಗೆ ಯಾವುದೇ ತೊಂದರೆ ಆಗುವುದಿಲ್ಲ. ಸಂವಿಧಾನದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ೩೧ ಡಿಸೆಂಬರ್ ೨೦೧೪ ರ ನಂತರ ಬಂದ ನಾಗರಿಕರಿಗೆ ಈ ಕಾಯ್ದೆಯು ಅನ್ವಯವಾಗಲಿದೆ. ಆದ್ದರಿಂದ ವಿರೋಧಿಗಳ ಮಾತಿನ ಕಡೆ ಕಿವಿಕೋಡದೆ ಪೌರತ್ವ ಕಾಯ್ದೆಯನ್ನು ಅರಿತುಕೊಳ್ಳಬೇಕು. ಇದರಲ್ಲಿ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್, ಪಾರಸಿ ಈ ತರ ಯಾವುದೇ ಬೇದ ಭಾವ ಆಗುವುದಿಲ್ಲ. ಇದರಿಂದ ಯಾವುದೇ ನಾಗರಿಕರ ಮೇಲೆ ಅನ್ಯಾಯವಾಗುವುದಿಲ್ಲ. ಇವತ್ತು ಪ್ರಧಾನಿ ನರೇಂದ್ರ ಮೋದಿ ಹಾಗೂ ಗ್ರಹಮಂತ್ರಿ ಅಮೀತ ಶಹಾ ಅಂತವರಿಂದ ದೇಶ ಸುರಕ್ಷಿತವಾಗಿದೆ. ಪೌರತ್ವ ಕಾಯ್ದೆ ದೇಶದ ಹಿತದೃಷ್ಟಿಯಲ್ಲಿ ಸುರಕ್ಷಿತವಾಗಿದೆಂದರು.
ಈ ಸಂದರ್ಭದಲ್ಲಿ ಜಿಲ್ಲಾ ಪದಾಧಿಕಾರಿಗಳಾದ ದುಂಡಪ್ಪಾ ಬೆಂಡವಾಡೆ, ಹಾಲಸಿದ್ದನಾಥ ಸಕ್ಕರೆ ಕಾರ್ಖಾನೆಯ ಸಂಚಲಕರಾದ ಅಪ್ಪಾಸಾಹೇಬ ಜೊಲ್ಲೆ, ನಾಗೇಶ ಕಿವಡ, ಸತೀಶ ಅಪ್ಪಾಜಿಗೋಳ, ಅಪ್ಪಾಸಾಹೇಬ ಚಗಲಾ, ಅನೇಕ ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ