Kannada NewsKarnataka NewsNationalPolitics

*ಉಗ್ರರ ದಾಳಿಯಲ್ಲಿ ಮೃತಪಟ್ಟ  ಕುಟುಂಬಗಳಿಗೆ ಹತ್ತು ಲಕ್ಷ ಪರಿಹಾರ ಘೋಷಿಸಿದ ಸಿಎಂ*

ಪ್ರಗತಿವಾಹಿನಿ ಸುದ್ದಿ :ಕಾಶ್ಮೀರದ ಪಹಲಗಾಂನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಮೃತಪಟ್ಟಿರುವ ರಾಜ್ಯದ ಪ್ರತಿ ನಾಗರಿಕರ ಕುಟುಂಬಗಳಿಗೆ ತಲಾ ಹತ್ತು ಲಕ್ಷ ರೂಪಾಯಿಗಳ ಪರಿಹಾರವನ್ನು ನೀಡಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ.

ಏ.22ರಂದು ಜಮ್ಮು ಕಾಶ್ಮೀರದಲ್ಲಿ ಪಹಾಲ್ದಾಮ್ ಕಣಿವೆ ಪ್ರದೇಶದಲ್ಲಿ ಏಕಾಏಕಿ ಉಗ್ರರ ನುಗ್ಗಿ ಗುಂಡಿನ ದಾಳಿ ನಡೆಸಿದ್ದರು. ಈ ವೇಳೆ ಕರ್ನಾಟಕದ ಇಬ್ಬರು ಪ್ರವಾಸಿಗರು ಸೇರಿ ಒಟ್ಟು 28 ಜನ ಮೃತಪಟ್ಟಿದ್ದರು. ಜಮ್ಮು ಕಾಶ್ಮೀರ ಸರ್ಕಾರ ಕೂಡಾ ಮೃತ ಕುಟುಂಭಕ್ಕೆ 10 ಲಕ್ಷ ಪರಿಹಾರ ಘೋಷಣೆ ಮಾಡಿದೆ. 

Home add -Advt

ಶಿವಮೊಗ್ಗದ ಮಂಜುನಾಥ್ ಹಾಗೂ ಬೆಂಗಳೂರಿನ ಮತ್ತಿಕೆರೆಯ ಭರತ್ ಭೂಷಣ್‌ ಅವರು ಉಗ್ರರ ಗುಂಡೇಟಿಗೆ ಸಾವನ್ನಪ್ಪಿದ್ದರು. ಈ ಇಬ್ಬರ ಮೃತ ದೇಹವನ್ನು ರಾಜ್ಯಕ್ಕೆ ಕರೆ ತರಲು ಈಗಾಗಲೇ ಸರ್ಕಾರ ಸಕಲ ಸಿದ್ಧತೆ ಮಾಡಿದೆ.

Related Articles

Back to top button