Kannada NewsKarnataka NewsNationalPolitics

*ದೇಶದ ನಾಲ್ಕು ಹೈಕೋರ್ಟ್ ಸ್ಫೋಟಿಸುವದಾಗಿ ಬೆದರಿಕೆ*

ಪ್ರಗತಿವಾಹಿನಿ ಸುದ್ದಿ: ಒಂದು ಕಡೆ ದೇಶದಲ್ಲಿ ಉಗ್ರರು ನಡೆಸಿದ ದಾಳಿಯಲ್ಲಿ 30 ಕ್ಕೂ ಅಧಿಕ ಜನರ ಸಾವನ್ನಪ್ಪಿದರೆ. ಇನ್ನೊಂದು ಕಡೆ ಗೋವಾ, ಕೇರಳ, ಬಾಂಬೆ ಹಾಗೂ ಗುವಾಹಟಿ ಹೈಕೋರ್ಟ್ ಗಳನ್ನು ಸ್ಪೋಟಿಸುವದಾಗಿ ಬೆದರಿಕೆ ಮೇಲ್ ಗಳು ಬಂದಿರುವ ಬಗ್ಗೆ ವರದಿಯಾಗಿದೆ.‌

ಮಂಗಳವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ ಗೋವಾ ಹೈಕೋಟ್‌ರ್ನ ರಿಜಿಸ್ಟ್ರಾರ್ ಕಚೇರಿಗೆ ನ್ಯಾಯಾಲಯದಲ್ಲಿ ಬಾಂಬ್ ಇಡಲಾಗುತ್ತಿರುವ ಬಗ್ಗೆ ಇಮೇಲ್ ಬಂದಿತು. ಅದರ ನಂತರ, ರಿಜಿಸ್ಟ್ರಾರ್ ಕಚೇರಿಯ ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಪೆಲೀಸ್ ನಿಯಂತ್ರಣ ಕೊಠಡಿಗೆ ಈ ಬಗ್ಗೆ ಮಾಹಿತಿ ನೀಡಿದರು. 

ಮಾಹಿತಿ ಪಡೆದನಂತರ, ಪರ್ವರಿ ಪೊಲೀಸ್ ಠಾಣೆ, ಅಗ್ನಿಶಾಮಕ ದಳ, ಬಾಂಬ್ ನಿಷ್ಕ್ರಿಯ ದಳ ಮತ್ತು ಭಯೋತ್ಪಾದನಾ ನಿಗ್ರಹದಳಕ್ಕೆ ಮಾಹಿತಿ ನೀಡಲಾಯಿತು. ಬಾಂಬ್ ನಿಷ್ಕ್ರಿಯ ದಳವು ಹೈಕೋರ್ಟ್, ನ್ಯಾಯಾಲಯದ ಆವರಣ, ಕೆಫೆಟೇರಿಯಾ ಮತ್ತು ಪಾರ್ಕಿಂಗ್ ವಲಯವನ್ನು ಸಂಪೂರ್ಣವಾಗಿ ಪರಿಶೀಲಿಸಿತು.

ಸುಮಾರು ನಾಲ್ಕು ಗಂಟೆಗಳ ಕಾಲ  ಪರಿಶೀಲಿಸಿದ ನಂತರ, ಯಾವುದೇ ಸ್ಫೋಟಕಗಳು ಕಂಡುಬಂದಿಲ್ಲ. ಇಮೇಲ್ ಕಳುಹಿಸಿದವರು ಯಾರು ಎಂಬುದರ ಕುರಿತು ಪೊಲೀಸರು ತನಿಖೆ ನಡೆಸಲಾಗುತ್ತಿದೆ.

ಗೋವಾ ಅಷ್ಟೇ ಅಲ್ಲದೆ ಬಾಂಬೆ ಹೈಕೋಟ್‌ರ್ನ ಔರಂಗಾಬಾದ್ ಪೀಠ ಹಾಗೂ ಕೇರಳ ಮತ್ತು ಗುವಾಹಟಿ ಹೈಕೋಟ್‌ರ್ಗಳಿಗೆ ಹೈಕೋರ್ಟ್ ಅನ್ನು ಸ್ಪೋಟಿಸುವುದಾಗಿ ಬೆದರಿಕೆಗಳು ಬಂದಿವೆ. ತನಿಖೆಯ ನಂತರ, ಇಲ್ಲಿ ಏನೂ ಕಂಡುಬಂದಿಲ್ಲ ಎನ್ನಲಾಗಿದ್ದ, ನ್ಯಾಯಾಲಯದಲ್ಲಿ ಸಂಜೆಯ ವೇಳೆಗೆ ವಿಚಾರಣೆಗಳು ನಡೆದಿವೆ ಎನ್ನಲಾಗಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button