
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಚರ್ಚೆ ಬೆನ್ನಲ್ಲೇ ಇದೇ ಮೊದಲವಾರಿಗೆ ಸಿಎಂ ಬಿ.ಎಸ್.ಯಡಿಯೂರಪ್ಪ ರಾಜೀನಾಮೆ ಬಗ್ಗೆ ಸುಳಿವು ನೀಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಯಡಿಯೂರಪ್ಪ, ಬಿಜೆಪಿಯಲ್ಲಿ 75 ವರ್ಷ ದಾಟಿದವರಿಗೆ ಅಧಿಕಾರ ಕೊಟ್ಟಿಲ್ಲ ಆದ್ರೆ ನನ್ನ ಕೆಲಸವನ್ನು ಮೆಚ್ಚಿ ಪ್ರಧಾನಿ ಮೋದಿ, ಅಮಿತ್ ಶಾ, ಹೈಕಮಾಂಡ್ ಅಧಿಕಾರ ಕೊಟ್ಟಿದ್ದಾರೆ. ಜುಲೈ 26ಕ್ಕೆ ನಾನು ಎರಡು ವರ್ಷ ಅಧಿಕಾರ ಪೂರೈಸುತ್ತೇನೆ. ಕೇಂದ್ರದ ನಾಯಕರು ನೀಡಿದ ಸೂಚನೆ ಪಾಲಿಸಲು ಸಿದ್ದ. ಜುಲೈ 25ರಂದು ವರಿಷ್ಠರು ಸಂದೇಶ ನೀಡುತ್ತಾರೆ. ಅವರು ನೀಡುವ ಸೂಚನೆಯಂತೆ ಕೆಲಸ ಮಾಡಲು ನಾನು ಸಿದ್ಧ ಎಂದು ಹೇಳಿದರು.
ಮುಂದಿನ ದಿನಗಳಲ್ಲಿ ಪಕ್ಷವನ್ನು ಸದೃಡಗೊಳಿಸಿ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುವುದು ನನ್ನ ಸಂಕಲ್ಪ. ಪಕ್ಷದ ಹೈಕಮಾಂಡ್ ನನಗೆ ಯಾವ ಸೂಚನೆ ನೀಡಿದರೂ ಪಾಲಿಸುತ್ತೇನೆ. ರಾಜ್ಯದ ಮಠಾಧೀಶರು ನನಗೆ ನೀಡಿದ ಬೆಂಬಲ, ಕಾಳಜಿಗೆ ಧನ್ಯವಾದಗಳು. ಕಾರ್ಯಕರ್ತರು, ಅಭಿಮಾನಿಗಳು ಗೊಂದಲಕ್ಕೀಡಾಗುವುದು ಬೇಡ. ನನ್ನ ಪರವಾಗಿ ಯಾರೂ ಸಹ ಹೇಳಿಕೆ ನೀಡುವುದು, ಪ್ರತಿಭಟನೆಗಳನ್ನು ನಡೆಸುವುದು ಬೇಡ ಎಂದು ಹೇಳಿದರು.
ಸಂತೋಷ್/ ಲಕ್ಷ್ಮಣ ಸವದಿ ಸಿಎಂ, ಬಿಎಸ್ವೈ ಉಪರಾಷ್ಟ್ರಪತಿ: ಕರ್ನಾಟಕ ರಾಜಕೀಯದಲ್ಲಿ ಹೀಗೊಂದು ಸುದ್ದಿ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ