Latest

ಸಿಎಂ ಯಡಿಯೂರಪ್ಪ ಪರ ಮಠಾಧೀಶರ ಬ್ಯಾಟಿಂಗ್; 25ಕ್ಕೂ ಹೆಚ್ಚು ಸ್ವಾಮಿಜಿಗಳು ಭೇಟಿ

 

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಸಿಎಂ ಬದಲಾವಣೆ ವದಂತಿ ಬೆನ್ನಲ್ಲೇ ಯಡಿಯೂರಪ್ಪ ಪರ ನಿಂತಿರುವ ವಿವಿಧ ಮಠಾಧೀಶರು, ದಿಂಗಾಲೆಶ್ವರ ಸ್ವಾಮೀಜಿ ನೇತೃತ್ವದಲ್ಲಿ ಇಂದು ಬಿಎಸ್ ವೈ ಅವರನ್ನು ಭೇಟಿಯಾಗಿ ಚರ್ಚಿಸಿದ್ದಾರೆ.

ಬಾಲೇಹೊಸೂರಿನ ದಿಂಗಾಲೆಶ್ವರ ಸ್ವಾಮೀಜಿ ನೇತೃತ್ವದಲ್ಲಿ 25ಕ್ಕೂ ಹೆಚ್ಚು ಸ್ವಾಮಿಜಿಗಳು ಸಿಎಂ ಅಧಿಕೃತ ನಿವಾಸ ಕಾವೇರಿಗೆ ಆಗಮಿಸಿದ್ದು, ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿಯಾಗಿ ಚರ್ಚಿಸಿದರು.

Home add -Advt

ಸಿಎಂ ಭೇಟಿಗೂ ಮುನ್ನ ಮಾತನಾಡಿದ ದಿಂಗಾಲೇಶ್ವರ ಸ್ವಾಮೀಜಿ, ರಾಜ್ಯದಲ್ಲಿ ಸಿಎಂ ಯಡಿಯೂರಪ್ಪ ಬದಲಾವಣೆ ಮಾಟುಗಳು ಕೇಳಿಬರುತ್ತಿವೆ ಇಂತಹ ಚರ್ಚೆ ಸರಿಯಲ್ಲ. ಬೇರೆಯವರು ಸಿಎಂ ಆಗಿದ್ದಾಗ ಇಲ್ಲದ ಸಮಸ್ಯೆಗಳು ಯಡಿಯೂರಪ್ಪ ಸಿಎಂ ಆದಾಗ ಉದ್ಭವವಾಗುತ್ತಿವೆ ಎಂಬ ರೀತಿಯಲ್ಲಿ ಬಿಂಬಿಸುತ್ತಿರುವುದರ ಉದ್ದೇಶವೇನು? ನಾಯಕತ್ವ ಬದಲಾವಣೆ ನಿರ್ಧಾರದ ಹಿಂದೆ ಕಾಣದ ಕೈಗಳು ಕೆಲಸ ಮಾಡುತ್ತಿವೆ. ಅವರು ಲಿಂಗಾಯತ ಸಮುದಾಯದ ಪ್ರಬಲ ನಾಯಕ ಎಂಬ ವಿಚಾರವಲ್ಲ ಒಬ್ಬರನ್ನು ನಾಯಕನೆಂದು ಆಯ್ಕೆ ಮಾಡಿದ ಮೇಲೆ ಅವರಿಗೆ ಅಧಿಕಾರ ನಡೆಸಲು ಫ್ರೀಯಾಗಿ ಬಿಡಬೇಕು. ಅದನ್ನು ಬಿಟ್ಟು ಪದೇ ಪದೇ ಅಡ್ಡಿ ಪಡಿಸುತ್ತಿರುವುದು ಸರಿಯಲ್ಲ. ಯಡಿಯೂರಪ್ಪ ಓರ್ವ ಸಮರ್ಥ ನಾಯಕ. ಅವರು ಪಕ್ಷ ಬಿಟ್ಟಾಗ ಪಕ್ಷದ ಕಥೆ ಏನಾಗಿತ್ತು ಎಂಬುದು ಇಡೀ ರಾಜ್ಯದ ಜನತೆಗೆ ಗೊತ್ತು. ಈ ಬಗ್ಗೆ ನಾವು ಮಾತನಾಡುತ್ತಿಲ್ಲ. ಆದರೆ ಒಬ್ಬ ಸಮರ್ಥ ನಾಯಕ ಆಡಳಿತ ನಡೆಸುತ್ತಿರುವಾಗ ಪದೇ ಪದೇ ಅಡ್ಡಿಯುಂಟು ಮಾಡುತ್ತಾ ತೊಂದರೆ ನೀಡುತ್ತಿರುವುದು ಸರಿಯಲ್ಲ. ಹಾಗಾಗಿ ನಾವೆಲ್ಲರೂ ಯಡಿಯೂರಪ್ಪನವರ ಬೆಂಬಲಕ್ಕಿದ್ದು, ಅವರ ಭೇಟಿಯಾಗಿ ಚರ್ಚೆ ನಡೆಸುತ್ತಿರುವುದಾಗಿ ತಿಳಿಸಿದರು.

ಇದೇ ವೇಳೆ ಚಿತ್ರದುರ್ಗದ ಮುರುಘಾ ಮಠದದಲ್ಲಿ ವಿವಿಧ ಮಠಾಧೀಶರ ಜೊತೆ ಸುದ್ದಿಗೋಷ್ಠಿ ನಡೆಸಿರುವ ಮುರುಘಾಶ್ರೀಗಳು, ಯಡಿಯೂರಪ್ಪ ಓರ್ವ ಮಾಸ್ ಲೀಡರ್. ಅವರು ಯಾವುದೇ ಒಂದು ಜಾತಿಗೆ ಸೀಮತವಾಗಿಲ್ಲ, ಎಲ್ಲಾ ವರ್ಗದ ಜನರ ವಿಶ್ವಾಸಗಳಿಸಿದ ನಾಯಕ. ಇಂತ ಸಂದರ್ಭದಲ್ಲಿ ನಾಯಕತ್ವದ ಬದಲಾವಣೆ ವಿಚಾರ ಸರಿಯಲ್ಲ ಎಂದಿದ್ದಾರೆ. ಭೋವಿ ಮಠದ ಇಮ್ಮಡಿ ಸಿದ್ದೇಶ್ವರ ಸ್ವಾಮೀಜಿ, ಮಾದಾರ ಮಠದ ಬಸವಮೂರ್ತಿ ಶ್ರೀ, ಶಿರಸಿ ಮಠದ ಮಲ್ಲಿಕಾರ್ಜುನ ಸ್ವಾಮೀಜಿ, ಅಥಣಿಯ ಶಿವಬಸವ ಶ್ರೀ ಸೇರಿದಂತೆ ಹಲವು ಸ್ವಾಮೀಜಿಗಳು ಬಿಎಸ್ ವೈಗೆ ಬೆಂಬಲ ನೀಡಿದ್ದಾರೆ.
ಸಚಿವ ನಿರಾಣಿ ವಿರುದ್ಧ ಸಿಡಿ ಬಾಂಬ್ ಸಿಡಿಸಿದ ಆಲಂ ಪಾಷ

Related Articles

Back to top button