Latest

*ಸಿಎಂ ಬೊಮ್ಮಾಯಿ ಹೇಳಿಕೆಗೆ ಕಾಂಗ್ರೆಸ್ ತಿರುಗೇಟು*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಕಾಂಗ್ರೆಸ್ ಉಚಿತ ವಿದ್ಯುತ್ ಭರವಸೆ ಬಗ್ಗೆ ಪ್ರಶ್ನೆ ಮಾಡಿದ್ದ ಸಿಎಂ ಬಸವರಾಜ್ ಬೊಮ್ಮಾಯಿ ಅವರಿಗೆ ಕಾಂಗ್ರೆಸ್ ಟಾಂಗ್ ನೀಡಿದೆ.

ನಮ್ಮ 200 ಯೂನಿಟ್ ಉಚಿತ ವಿದ್ಯುತ್ತಿನ ಗೃಹಜ್ಯೋತಿ ಯೋಜನೆಗೆ ಹಣ ಎಲ್ಲಿಂದ ತರುತ್ತಾರೆ ಎಂದು ಸಿಎಂ ಕೇಳಿದ್ದಾರೆ.. 40% ಕಮಿಷನ್ ಲೂಟಿ ನಿಂತರೆ ಜನಪರ ಯೋಜನೆಗಳಿಗೆ ಹಣ ಕ್ರೋಡೀಕರಿಸಬಹುದು. ನಿಮ್ಮ ಸರ್ಕಾರ ನಡೆಸುತ್ತಿರುವ ಲೂಟಿ ನಿಂತರೆ ಸಮೃದ್ಧ ಕರ್ನಾಟಕವನ್ನು ನಿರ್ಮಿಸಬಹುದು ಎಂದು ತಿರುಗೇಟು ನೀಡಿದೆ.

ಸಿಎಂ ಬೊಮ್ಮಾಯಿ ಅವರದ್ದು ಯತ್ನಾಳ್ ವಿರುದ್ಧ ಮಾಧ್ಯಮಗಳ ಮುಂದಿನ ವ್ಯರ್ಥ ಪ್ರಲಾಪ ಬಿಟ್ಟರೆ ಇನ್ನೇನೂ ಸಾಧ್ಯವಿಲ್ಲ. ಇಷ್ಟೆಲ್ಲ ಮಾತನಾಡುವ ಯತ್ನಾಳರ ಮೇಲೆ ಪಕ್ಷದ ಅಧ್ಯಕ್ಷ ನಳೀನ್ ಕುಮಾರ್ ಕಟೀಲ್ ಕ್ರಮ ಕೈಗೊಳ್ಳುತ್ತಿಲ್ಲವೇಕೆ? ಯತ್ನಾಳ್ ಹಿಂದಿರುವ ಅಗೋಚರ ಶಕ್ತಿ ಯಾವುದು? ಇದು ಯಾರ “ಸಂತೋಷ”ಕ್ಕಾಗಿ ಎಂದು ಪ್ರಶ್ನಿಸಿದೆ.

*ಭೀಕರ ವಿಮಾನ ದುರಂತ; ಥಾಣೆ ಮೂಲದ ಒಂದೇ ಕುಟುಂಬದ ನಾಲ್ವರು ಸೇರಿ 72 ಜನ ಸಜೀವದಹನ*

Home add -Advt

https://pragati.taskdun.com/nepalaflight-crash72-passenger-deathpokhara-international-airport/

 

Related Articles

Back to top button