ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರಾಜ್ಯ ಸಚಿವ ಸಂಪುಟ ವಿಸ್ತರಣೆ ಚರ್ಚೆ ನಡುವೆಯೇ 28 ಜಿಲ್ಲೆಗಳಿಗೆ ಉಸ್ತುವಾರಿ ಸಚಿವರನ್ನು ನೇಮಕ ಮಾಡಿ ಸಿಎಂ ಬಸವರಾಜ್ ಬೊಮ್ಮಾಯಿ ಆದೇಶ ಹೊರಡಿಸಿದ್ದಾರೆ.
ಬೆಂಗಳೂರು ನಗರ ಜಿಲ್ಲೆ ಉಸ್ತುವಾರಿಗಾಗಿ ಕಂದಾಯ ಸಚಿವ ಆರ್.ಅಶೋಕ್ ಹಾಗೂ ವಸತಿ ಸಚಿವ ವಿ.ಸೋಮಣ್ಣ ನಡುವೆ ಬಿಗ್ ಫೈಟ್ ನಡೆದಿದ್ದರೂ, ಭಾರಿ ಪೈಪೋಟಿ ನಡುವೆಯೂ ಸಿಎಂ ಬೊಮ್ಮಾಯಿ ಬೆಂಗಳೂರು ನಗರ ಉಸ್ತುವಾರಿಯನ್ನು ತಮ್ಮ ಬಳಿಯೇ ಉಳಿಸಿಕೊಂಡಿದ್ದಾರೆ. ಸಚಿವ ಆರ್.ಅಶೋಕ್ ಹಾಗೂ ಮಾಧುಸ್ವಾಮಿ ಇಬ್ಬರು ಸಚಿವರಿಗೆ ಯಾವುದೇ ಜಿಲ್ಲೆ ಉಸ್ತುವಾರಿ ನೀಡಲಾಗಿಲ್ಲ.
ಜಿಲ್ಲಾ ಉಸ್ತುವಾರಿ ಸಚಿವರ ಪಟ್ಟಿ:
ಸಿಎಂ ಬಸವರಾಜ್ ಬೊಮ್ಮಾಯಿ – ಬೆಂಗಳೂರು ನಗರ
ಗೋವಿಂದ ಕಾರಜೋಳ – ಬೆಳಗಾವಿ
ಡಾ.ಕೆ.ಸುಧಾಕರ್ – ಬೆಂಗಳೂರು ಗ್ರಾಮಾಂತರ
ಶಶಿಕಲಾ ಜೊಲ್ಲೆ – ವಿಜಯನಗರ
ವಿ.ಸೋಮಣ್ಣ – ಚಾಮರಾಜನಗರ
ಅರಗ ಜ್ಞಾನೇಂದ್ರ ತುಮಕೂರು
ಶ್ರೀರಾಮುಲು-ಬಳ್ಳಾರಿ
ಎಸ್ ಅಂಗಾರ-ಉಡುಪಿ
ಬಿ.ಸಿ ಪಾಟೀಲ್ – ಚಿತ್ರದುರ್ಗ-ಗದಗ
ಬಿ.ಸಿ.ನಾಗೇಶ್ -ಕೊಡಗು
ಉಮೇಶ್ ಕತ್ತಿ – ವಿಜಯಪುರ
ಮುರುಗೇಶ್ ನಿರಾಣಿ- ಕಲಬುರ್ಗಿ
ಕೆ ಎಸ್ ಈಶ್ವರಪ್ಪ- ಚಿಕ್ಕಮಗಳೂರು
ಕೆ.ಗೋಪಾಲಯ್ಯ ಹಾಸನ-ಮಂಡ್ಯ
ಶಂಕರ ಪಾಟೀಲ್ ಮುನೇನಕೊಪ್ಪ ರಾಯಚೂರು- ಬೀದರ್
ಹಾಲಪ್ಪ ಆಚಾರ್ -ಧಾರವಾಡ
ಸುನೀಲ್ ಕುಮಾರ್ ದಕ್ಷಿಣ ಕನ್ನಡ
ಎಂಟಿಬಿ ನಾಗರಾಜ್ – ಚಿಕಬಳ್ಳಾಪುರ
ಪ್ರಭು ಚೌವ್ಹಾಣ್ – ಯಾದಗಿರಿ
ಕೋಟಾಶ್ರೀನಿವಾಸ್ ಪೂಜಾರಿ – ಉತ್ತರ ಕನ್ನಡ
ಆನಂದ್ ಸಿಂಗ್ – ಕೊಪ್ಪಳ
ಶಿವರಾಮ್ ಹೆಬ್ಬಾರ್ – ಹಾವೇರಿ
ಬೈರತಿ ಬಸವರಾಜ್-ದಾವಣಗೆರೆ
ಮುನಿರತ್ನ-ಕೋಲಾರ
ಎಸ್.ಟಿ.ಸೋಮಶೇಖರ್ – ಮೈಸೂರು
ನಾರಾಯಣಗೌಡ-ಶಿವಮೊಗ್ಗ
ಅಶ್ವತ್ಥನಾರಾಯಣ – ರಾಮನಗರ
ಸಿ.ಸಿ.ಪಾಟೀಲ್ – ಬಾಗಲಕೋಟೆ
ಇಲ್ಲಿದೆ ಆದೇಶ ಪ್ರತಿ – Dist ministers order copy
ನಿಗಮ, ಮಂಡಳಿಗಳಿಗೆ ನೇಮಕಾತಿ ಪಕ್ಷದ ಮೇಲೆ ಅವಲಂಬಿಸಿದೆ; ಸಿಎಂ ಬಸವರಾಜ ಬೊಮ್ಮಾಯಿ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ