Latest

ಸಿಎಂ ಬೊಮ್ಮಾಯಿ ಎಸ್ಕಾರ್ಟ್ ವಾಹನ ಪಲ್ಟಿ; ತಾಯಿ-ಮಗು ಗಂಭೀರ

ಪ್ರಗತಿವಾಹಿನಿ ಸುದ್ದಿ; ಹಿರಿಯೂರು: ಸಿಎಂ ಬಸವರಾಜ್ ಬೊಮ್ಮಾಯಿ ಅವರ ಎಸ್ಕಾರ್ಟ್ ವಾಹನ ಭೀಕರ ಅಪಘಾತಕ್ಕೀಡಾಗಿದ್ದು, ಘಟನೆಯಲ್ಲಿ ತಾಯಿ ಹಾಗೂ ಮಗು ಗಾಯಗೊಂಡಿರುವ ಘಟನೆ ಚಿತ್ರದುರ್ಗ ಬಳಿಯ ಹಿರಿಯೂರು ತಾಲೂಕು ಕಚೇರಿ ಬಳಿ ನಡೆದಿದೆ.

ಸಿಎಂ ಬಸವರಾಜ್ ಬೊಮ್ಮಾಯಿ ಇಂದು ವಾಣಿವಿಲಾಸ ಸಾಗರಕ್ಕೆ ಬಾಗಿನ ಅರ್ಪಿಸುವ ಕಾರ್ಯಕ್ರಮವಿದ್ದ ಹಿನ್ನೆಲೆಯಲ್ಲಿ ಜಲಾಶಯಕ್ಕೆ ಬಾಗಿನ ಅರ್ಪಿಸಿ ವಾಪಸ್ ಆಗುತ್ತಿದ್ದಾಗ ಮುಖ್ಯಮಂತ್ರಿಗಳಿಗೆ ಭದ್ರತೆ ಒದಗಿಸಲು ನೀಡಲಾಗಿದ್ದ ಸಿಇಎನ್ ಸಿಪಿಐ ಹಾಗೂ ಸಿಬ್ಬಂದಿಗಳು ಇದ್ದ ಎಸ್ಕಾರ್ಟ್ ವಾಹನ ಅಪಘಾತಕ್ಕೀಡಾಗಿ ಪಲ್ಟಿಯಾಗಿದೆ.

ವಾಣಿವಿಲಾಸ ಸಾಗರದಿಂದ ಹಿರಿಯೂರಿನತ್ತ ಬರುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದ್ದು, ರಸ್ತೆಯಲ್ಲಿ ತೆರಳುತ್ತಿದ್ದ ತಾಯಿ ಹಾಗೂ ಮಗು ಗಾಯಗೊಂಡಿದ್ದಾರೆ.

ಮಸ್ಕಲ್ ಗ್ರಾಮದ ಮಂಜುಳಾ ಹಾಗೂ ಮಗ ಮನೋಜ್ ಗೆ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ವೇಗವಾಗಿ ಚಲಿಸುತ್ತಿದ್ದ ಎಸ್ಕಾರ್ಟ್ ವಾಹನ ಒಮ್ಮೇಲೆ ಬ್ರೇಕ್ ಹಾಕಿದ ಕಾರಣಕ್ಕೆ ಪಲ್ಟಿಯಾಗಿ ಬಿದ್ದಿದೆ ಎಂದು ಪ್ರತ್ಯಕ್ಷ ದರ್ಶಿಗಳು ಹೇಳಿದ್ದಾರೆ.

Home add -Advt

ಗಡಿ ವಿವಾದ: ರಾಜ್ಯದ ನಿಲುವಿಗೆ ಕನ್ನಡ ಸಾಹಿತ್ಯ ಪರಿಷತ್ತು ಬೆಂಬಲ

https://pragati.taskdun.com/karnataka-maharashtraborder-issuesupreme-court/

Related Articles

Back to top button