Latest

ನೂತನ ಸಚಿವರಿಗೆ ಕೋವಿಡ್, ನೆರೆ ವೀಕ್ಷಣೆಗೆ ಜಿಲ್ಲೆ ಹಂಚಿಕೆ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಮೊದಲಿನ ಖಾತೆ ಮುಂದುವರಿಸಿ ಎಂದು ಸಚಿವರು ಯಾವುದೇ ಬೇಡಿ ಇಟ್ಟಿಲ್ಲ, ಯಾವುದೇ ಖಾತೆ ಕೊಟ್ಟರೂ ನಿಭಾಯಿಸುತ್ತೇವೆ ಎಂದು ಹೇಳಿದ್ದಾರೆಂದು ಸಿಎಂ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ.

ನೂತನ ಸಚಿವ ಸಂಪುಟ ರಚನೆ ಬಳಿಕ ಮೊದಲ ಸಭೆ ನಡೆಸಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ, ಒಂದೆರಡು ದಿನಗಳಲ್ಲಿ ಸಚಿವರಿಗೆ ಖಾತೆ ಹಂಚಿಕೆ ಮಾಡುತ್ತೇನೆ. ಕೋವಿಡ್, ನೆರೆ ವೀಕ್ಷಣೆಗೆ ಸಚಿವರಿಗೆ ಜಿಲ್ಲೆ ಹಂಚಿಕೆ ಮಾಡುತ್ತೇವೆ. ನಾಳೆಯೇ ಸಚಿವರು ಜಿಲ್ಲೆಗಳಿಗೆ ತೆರಳಿ ಪರಿಹಾರ ಕಾರ್ಯ ಕೈಗೊಳ್ಳಲಿದ್ದಾರೆ. ಸ್ಥಳೀಯವಾಗಿ ಪರಿಹಾರ ಕೊಡುವ ಕೆಲಸ ನಡೆಯಲಿದೆ ಎಂದರು.

ಈ ಹಿಂದೆ ಸಂಪುಟ ರಚನೆಗೆ 10-15 ದಿನ, ತಿಂಗಳುಗಳು ಆಗುತ್ತಿತ್ತು. ಆದರೆ ಕೇವಲ 3 ದಿನಗಳಲ್ಲಿ ನಾನು ಸಚಿವರ ಪಟ್ಟಿ ಫೈನಲ್ ಮಾಡಿಕೊಂಡು ಬಂದಿದ್ದೇನೆ. ಹಾಗಾಗಿ ಖಾತೆ ಹಂಚಿಕೆ ಕೂಡ ಶೀಘ್ರವಾಗಿ ನಡೆಯಲಿದೆ. ಒಂದೆರಡು ದಿನಗಳಲ್ಲಿ ಖಾತೆ ಹಂಚಿಕೆಯನ್ನು ನಾನೇ ಮಾಡುತ್ತೇನೆ. ಬಳಿಕ ಕೋವಿಡ್ ಟಾಸ್ಕ್ ಫೋರ್ಸ್ ಕೂಡ ಪುನಾರಚನೆಯಾಗಲಿದೆ ಎಂದು ಹೇಳಿದರು.

ಯಾರಿಗೆ ಯಾವ ಜಿಲ್ಲೆ ಉಸ್ತುವಾರಿ?  ಇಲ್ಲಿ ಕ್ಲಿಕ್ ಮಾಡಿ –  DOC040821-04082021214911

Home add -Advt

ಯಾವ ಶಾಸಕರೂ ರಾಜೀನಾಮೆ ನೀಡುವ ಪ್ರಶ್ನೆ ಇಲ್ಲ ಎಂದ ಕಟೀಲ್

Related Articles

Back to top button