ಪ್ರಿಯಾಂಕಾ ಗಾಂಧಿಗೆ ಕಾಂಗ್ರೆಸ್ ಸರಿಯಾದ ಮಾಹಿತಿ ನೀಡಿಲ್ಲ ಎಂದು ಟಾಂಗ್
ಪ್ರಗತಿವಾಹಿನಿ ಸುದ್ದಿ; ಹುಬ್ಬಳ್ಳಿ: ಜೆ.ಪಿ ನಡ್ಡಾ ಅವರು ನನ್ನ ಮೇಲೆ ಬಹಳಷ್ಟು ನಿರೀಕ್ಷೆ ಇಟ್ಟು ಒಳ್ಳೆಯ ಮಾತು ಹೇಳಿದ್ದಾರೆ. ಅಮಿತ್ ಶಾ ಅವರು ಬಂದಾಗ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವುದಾಗಿ ಹೇಳಿದ್ದೆ. ನಮ್ಮ ಪಕ್ಷದಲ್ಲಿ ಸ್ಪಷ್ಟ ನಿಲುವಿದೆ. ಸಿಎಂ ನೇತೃತ್ವದಲ್ಲಿ ಚುನಾವಣೆಗೆ ಹೋಗುತ್ತೇವೆ. ಕೇಂದ್ರ ಸಂಸದೀಯ ಮಂಡಳಿ ಮತ್ತು ಶಾಸಕರು ಸಿಎಮ್ ಆಯ್ಕೆ ಮಾಡುತ್ತಾರೆ. ನಡ್ಡಾ ಅವರು ಹೇಳಿದ ಮಾತಿಗೆ ನಾನು ಚಿರಋಣಿಯಾಗಿರುತ್ತೇನೆ ಎಲ್ಲರನ್ನೂ ಒಟ್ಟಾಗಿ ತೆಗೆದುಕೊಂಡು ಹೋಗುತ್ತೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಇಂದು ಹುಬ್ಬಳ್ಳಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ನಡ್ಡಾ ಅವರು ಮುಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿಕೆಗೆ ನಾನು ಚಿರಋಣಿ ಎಂದರು.
ಪ್ರವಾಹದ ಸಂದರ್ಭದಲ್ಲಿ ಮೋದಿ ರಾಜ್ಯಕ್ಕೆ ಬಂದಿಲ್ಲ ಎನ್ನುವ ಪ್ರಿಯಾಂಕಾ ಗಾಂಧಿಗೆ ತಿರುಗೇಟು ನೀಡಿದ ಸಿಎಂ, ಪ್ರವಾಹ ಬಂದಾಗ ಹೆಚ್ಚಿನ ಅನುದಾನ ಕೊಟ್ಟಿದ್ದು ಮೋದಿ ಸರ್ಕಾರ. ಪ್ರಿಯಾಂಕಾ ಗಾಂಧಿಯವರ ಸರ್ಕಾರದ ಇದ್ದಾಗ ಮನೆ ಬಿದ್ದರೆ 2 ಸಾವಿರ ಕೊಡುತ್ತಿದ್ದರು. ಅತಿವೃಷ್ಟಿ ಪರಿಹಾರ ಮೋದಿ ಕಾಲದಲ್ಲಿ ಹೆಚ್ಚಿಸಲಾಗಿದೆ. ಅತಿಹೆಚ್ಚು ರೈತರ ಆತ್ಮಹತ್ಯೆ ಆಗಿದ್ದು ಸಿದ್ದರಾಮಯ್ಯ ಅವರು ಕಾಲದಲ್ಲಿ. ರೈತರು ಆತ್ಮಹತ್ಯೆ ಮಾಡಿಕೊಂಡಾಗ ಪ್ರಿಯಾಂಕಾ ರಾಹುಲ್ ಬಂದೋದ್ರಾ ? ಯಾವುದು ಸೂಕ್ತವಲ್ಲವೋ ಅದನ್ನು ಮಾತನಾಡಿ ಜನರನ್ನು ಮರಳು ಮಾಡಲು ಸಾದ್ಯವಿಲ್ಲ. ಜನತೆಗೆ ಗೊತ್ತಿರುವ ಮಾಹಿತಿ ಪ್ರಿಯಾಂಕಾ ಗಾಂಧಿಗೆ ಕಾಂಗ್ರೆಸ್ ಸರಿಯಾದ ಮಾಹಿತಿ ನೀಡಿಲ್ಲ ಎಂದರು.
ಐಟಿ ರೇಡ್ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂಬ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿಕೆ ವಿಚಾರಕ್ಕೆ, ಕಳ್ಳನ ಜೀವ ಉಳ್ಳುಳ್ಳಗೆ ಎಂದು ಸಿಎಂ ವ್ಯಂಗ್ಯವಾಡಿದರು.
ಇದೇ ವೇಳೆ ಜಗದೀಶ್ ಶೆಟ್ಟರ್ ಎಲ್ಲ ಹೇಳಿಕೆಗೆ ನಾನು ಪ್ರತಿಕ್ರಿಯಿಸಲ್ಲ. ಮೋದಿಯವರಿಗೆ ದಿನಕ್ಕೆ ಐದು ಕಡೆ ಪ್ರಚಾರ ಮಾಡುವ ಶಕ್ತಿ ಇದೆ ಮಾಡುತ್ತಾರೆ. ಎಐಸಿಸಿಯ ಅಧ್ಯಕ್ಷ ಖರ್ಗೆಯವರು ಸೀನಿಯರ್ ಲೀಡರ್. ಅವರ ಬಾಯಿಂದ ಇಂತ ಮಾತು ಬಂದಿದೆ ಅಂದಾಗ, ಉಳಿದವರಿಂದ ಪ್ರತಿಕ್ರಿಯೆ ಬರೋದು ಸಹಜ. ಇನ್ನೂ ದೇವೇಗೌಡರು ಯಾವ ರಾಷ್ಟ್ರೀಯ ಪಕ್ಷದವರು ಮೈತ್ರಿಗೆ ಮುಂದಾಗಿದ್ದಾರೆ ಬಹಿರಂಗವಾಗಿ ಹೇಳಲಿ ಎಂದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ