Latest

ಚುನಾವಣಾ ಉದ್ದೇಶಕ್ಕೆ ಕಾಂಗ್ರೆಸ್ ನಿಂದ ಸಾಮಾಜಿಕ ಆರ್ಥಿಕ ಸಮೀಕ್ಷೆ; ಸಿದ್ದರಾಮಯ್ಯ ಸರ್ಕಾರದ ದಾಖಲೆ ಬಗ್ಗೆ ಬಿಚ್ಚಿಟ್ಟ ಸಿಎಂ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಕಾಂಗ್ರೆಸ್ ಆಡಳಿತದಲ್ಲಿ ಇಡೀ ಕರ್ನಾಟಕದ ಮಾಹಿತಿಯನ್ನು ಬಳಸಿಕೊಂಡಿದ್ದು, ಚುನಾವಣೆಯನ್ನೂ ಸೋತಿದ್ದಾರೆ. ಕಾಂಗ್ರೆಸ್ ಪಕ್ಷದವರು ಹತಾಶರಾಗಿದ್ದು, ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಚುನಾವಣೆಯ ನಾಮಪತ್ರ ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂಬ ಕಾಂಗ್ರೆಸ್ ನ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿಗಳು ರಮಣಶ್ರೀ ಪ್ರತಿಷ್ಠಾನ, ಬೆಂಗಳೂರು ಇಲ್ಲಿ ಕಾರ್ಯಕ್ರಮದ ನಂತರ ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದರು.

ಕಾಂಗ್ರೆಸ್ ಪಕ್ಷ ನಡೆಸಿದ ಸಾಮಾಜಿಕ ಆರ್ಥಿಕ ಸಮೀಕ್ಷೆ :
ಸಿದ್ದರಾಮಯ್ಯನವರು ತಮ್ಮ ಅವಧಿಯಲ್ಲಿ 130 ಕೋಟಿ ರೂ. ಖರ್ಚು ಮಾಡಿ, ಇಡೀ ಕರ್ನಾಟಕದ ಸಾಮಾಜಿಕ ಆರ್ಥಿಕ ಸಮೀಕ್ಷೆ ಎಂಬ ಹೆಸರಿನಲ್ಲಿ ಜಾತಿ , ಉಪಜಾತಿಗಳನ್ನು ಸೃಷ್ಟಿಸಿ, ದಾಖಲೆಗಳನ್ನು ಮಾಡಿ, ಆ ಮಾಹಿತಿಗಳನ್ನು ಸಾರ್ವಜನಿಕವಾಗಿ ಬಹಿರಂಗಗೊಳಿಸದೇ, ಚುನಾವಣೆಯ ಉದ್ದೇಶಕ್ಕೆ ಕಾಂಗ್ರೆಸ್ ಬಳಸಿಕೊಂಡಿತು. ಈ ವಿಷಯದಲ್ಲಿ ಶಿಕ್ಷೆ ಮೊದಲು ಸಿದ್ದರಾಮಯ್ಯನವರ ಸರ್ಕಾರಕ್ಕೆ ಆಗಬೇಕು. ಪ್ರಸ್ತುತ ಈ ವಿಚಾರದಲ್ಲಿ ಸರ್ಕಾರಕ್ಕೆ ಸಂಬಂಧಿಸಿರುವುದಿಲ್ಲ. ತಳಹಂತದಲ್ಲಿ ಈ ಕೆಲಸವಾಗಿದ್ದರೆ, ಸೂಕ್ತ ವಿಚಾರಣೆಯಾಗಿ, ತಪ್ಪಿತಸ್ಥರಿಗೆ ಶಿಕ್ಷೆಯಾಗಲಿದೆ ಎಂದು ತಿಳಿಸಿದರು.

ತಜ್ಞರ ಸಮಿತಿಯಿಂದ ಪರಿಶೀಲನೆ:
ಮೈಸೂರಿನಲ್ಲಿ ತಂಗುದಾಣದ ವಿನ್ಯಾಸದ ಬಗ್ಗೆ ಶಾಸಕ ರಾಮದಾಸ್ ಅವರು ಸ್ಥಳೀಯ ಸಂಸದರ ಮೇಲೆ ಅಸಮಧಾನಗೊಂಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಈ ವಿವಾವದ ಬಗ್ಗೆ ಪರಿಶೀಲಿಸಲು ನಡೆಸಲು ತಜ್ಞರ ಸಮಿತಿರನ್ನು ರಚಿಸಲು ತಿಳಿಸಲಾಗಿದೆ. ಈ ವಿಷಯದಲ್ಲಿ ಸ್ಥಳೀಯ ನಾಯಕರ ಮಧ್ಯೆ ಭಿನ್ನಾಭಿಪ್ರಾಯ ಏಕೆ ಬಂದಿದೆ ಎಂದು ತಿಳಿಯುವುದಕ್ಕಿಂತ, ತಜ್ಞರ ಸಮಿತಿ ವರದಿಯನ್ನಾಧರಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು.

ಬೆಳಗಾವಿ ಅಧಿವೇಶನ ದಿನಾಂಕ ನಿಗದಿ

https://pragati.taskdun.com/winter-sessionsuvarna-vidhanasoudhacabinet-meetingshreegandha-neeti-2022/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button