ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಜಿಲ್ಲಾಧಿಕಾರಿಗಳ ಕಾರ್ಯವೈಖರಿಗಳ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ಸಭೆಯ ಆರಂಭದಲ್ಲಿಯೇ ಅಧಿಕಾರಿಗಳ ಬೆವರಿಳಿಸಿದ್ದಾರೆ.
ಜಿಲ್ಲಾಮಟ್ಟದಲ್ಲಿ ಆಡಳಿತ ಚುರುಕುಗೊಳಿಸುವ ನಿಟ್ಟಿನಲ್ಲಿ ವಿಧಾನಸೌಧದಲ್ಲಿ ಜಿಲ್ಲಾಧಿಕಾರಿಗಳ ಹಾಗೂ ಜಿಲ್ಲಾ ಪಂಚಾಯತ್ ಸಿಇಒಗಳ ಸಭೆ ನಡೆಸಿರಿವ ಸಿಎಂ ಬೊಮ್ಮಾಯಿ, ಜಿಲ್ಲೆಗಳಲ್ಲಿ ಕೆಲ ಸಮಸ್ಯೆಗಳು ಆಗುತ್ತಿರುವುದು ಗಮನಕ್ಕೆ ಬಂದಿದೆ. ಸಮಸ್ಯೆ ಬಗೆಹರಿಸುವ ಕೆಲಸ ನಿಮ್ಮಿಂದ ಆಗುತ್ತಿಲ್ಲ. ಅಧಿಕಾರಿಗಳು ಯಾರೂ ಕ್ರಿಯಾಶೀಲವಾಗಿ ಕೆಲಸ ಮಾಡುತ್ತಿಲ್ಲ. ಜನರ ತೊಮ್ದರೆ ಬಗೆಹರಿಸುವುದೇ ನಿಮ್ಮ ಕೆಲಸ ಅದೇ ಸಾಧ್ಯವಾಗುತ್ತಿಲ್ಲ ಎಂದರೆ ನಿಮಗೆ ಊಟವಾದರೂ ಯಾಕೆಬೇಕು? ಎಂದು ಖಡಕ್ ಆಗಿ ಕ್ಲಾಸ್ ತೆಗೆದುಕೊಂಡಿದ್ದಾರೆ.
ಬೆಳಿಗ್ಗೆ 10 ಗಂಟೆಯಿಂದ ಸಂಜೆ 5ಗಂಟೆಯವರೆಗೆ ಸರ್ಕಾರಿ ಕೆಲಸ ಎನ್ನುವ ಮನೋಭಾವ ಬಿಡಿ. ಜನರ ಕಷ್ಟಸುಖಗಳನ್ನು ಸರಿಯಾಗಿ ಆಲಿಸಿ. ಜನರ ಸಮಸ್ಯೆ ವಿಷಯದಲ್ಲಿ ರಾಜಿ ಆಗುವ ಪ್ರಶ್ನೆಯೇ ಇಲ್ಲ. ದೀನ ದಲಿತರ, ರೈತರ ಸಮಸ್ಯೆ ಬಗೆಹರಿಸಲು ವಿಳಂಬ ಬೇಡ. ಜಿಲ್ಲಾವಾರು ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸಬೇಕು. ಸರ್ಕಾರದ ಯೋಜನೆಗಳು ಫಲಾನುಭವಿಗಳಿಗೆ ತಲುಪಬೇಕು. ಆಡಳಿತ ಬಿಗಿ ಮಾಡಿ. ಕಳಂಕರಹಿತ ಕೆಲಸ ಮಾಡಿ. ಜನರ ತೊಂದರೆ ದೂರ ಮಾಡುವುದು ನಿಮ್ಮ ಕೆಲಸ ಎಂದು ಎಚ್ಚರಿಸಿದ್ದಾರೆ.
ಅಸನಿ ಚಂಡಮಾರುತ ಭೀತಿ; ನಾಳೆ ಬಿರುಗಾಳಿ ಸಹಿತ ಭಾರಿ ಮಳೆ; ಕರಾವಳಿಯಲ್ಲಿ ಭೂ ಕುಸಿತ ಎಚ್ಚರಿಕೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ