Belagavi NewsBelgaum NewsKannada NewsKarnataka NewsNationalPolitics

*ಮೂಡಾ ಹಗರಣದಲ್ಲಿ ನೇರವಾಗಿ ಸಿಎಂ ಪಾತ್ರ ಇದೆ: ಸಂಸದ ಜಗದೀಶ್ ಶೆಟ್ಟರ್ ಆರೋಪ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಮೈಸೂರಿನಲ್ಲಿ ನಡೆದಿದೆ ಎನ್ನಲಾದ ಮೂಡಾ ಹಗರಣವನ್ನು ಸಿಬಿಐ ತನಿಖೆಗೆ ವಹಿಸಬೇಕು. ಸಿಬಿಐಗೆ ತನಿಖೆಗೆ ಕೊಟ್ಟರೆ ಸಾವಿರಾರು ‌ಕೋಟಿ ಹಗರಣ ಹೊರಬರಲಿದೆ ಎಂದು ಸಂಸದ ಜಗದೀಶ್ ಶೆಟ್ಟರ್ ಅವರು ಆಗ್ರಹಿಸಿದ್ದಾರೆ. 

ಬೆಳಗಾವಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು,  ಇದರಲ್ಲಿ ನೇರವಾಗಿ ಸಿಎಂ ಅವರ ಪಾತ್ರ ಇದೆ. 50:50 ಪ್ಯಾಕೇಜ್ ಮೈಸೂರಿನಲ್ಲಿ ಮಾತ್ರ‌ ಇಂಪ್ಲಿಮೆಂಟ್ ಆಗಿದೆ ಅದು ಬೇರೆ ಕಡೆ ಆಗಿಲ್ಲ. ವಿಚಿತ್ರ ಅಂದ್ರೆ ಒಂದು ಸಲ‌ ನೋಟಿಫೈ ಮಾಡಿ ನಂತರ ಡಿ ನೋಟಿಫೈ ಮಾಡಿದ್ದಾರೆ ಎಂದು ಹೇಳಿದರು.

ಡಿ ನೋಟಿಫೈ ಆದ ಲ್ಯಾಂಡ್ ಎಕ್ಸ್ ವೈ ಝಡ್ ಹೆಸರಿನಲ್ಲಿ ಇದೆ. ಬಳಿಕ ಸಿಎಂ ಪತ್ನಿಯ ಹೆಸರಲ್ಲಿ ವ್ಯಕ್ತಿ ದಾನ‌ ಕೊಟ್ಟಿದ್ದಾರೆ. ದಾನ ಕೊಟ್ಟ ಮೇಲೆ ಸಿಎಂ ಪತ್ನಿಯೂ ಸಹ ಲೇಟರ್ ಬರೆದಿದ್ದಾರೆ. ಡಿ ನೋಟಿಫೈ ಆದ ಲ್ಯಾಂಡ್ ಅಲ್ಲಿನ ಅಧಿಕಾರಿಗಳು ಹೇಗೆ ಅಭಿವೃದ್ದಿಪಡಿಸಿದರು.‌ ನೀರು ರಸ್ತೆ ಎಲ್ಲಾ ರೀತಿಯ ಸೌಲಭ್ಯ ಯಾಕೆ‌ ಕೊಟ್ಟರು ಎಂದು ಪ್ರಶ್ನಿಸಿದರು. 

ಆವಾಗಲೇ ತಡೆ ಹಿಡಿಯಬಹುದಿತ್ತು ಆದರೆ ಅಧಿಕಾರಿಗಳು ಸುಮ್ಮನೆ‌ ಕುಳಿತರು. ಲೇಔಟ್ ಆದ ನಂತರ 50:50 ಕೊಡಿ ಎಂದು ಅಧಿಕಾರಿಗಳು ಕೇಳಿದ್ದಾರೆ. ಅಂತಹ ರೂಲ್ಸ್ ಎಲ್ಲಿಯೂ ಇಲ್ಲ. ಡೆವಲಪ್ಮೆಂಟ್ ಅಥಾರಿಟಿಯವರಿಗೆ ಯಾವುದೇ ರೈತರು ಭೂಮಿ ಕೋಡುತ್ತಿಲ್ಲ. ಬೇರೆ ಕಡೆಗೆ ಲ್ಯಾಂಡ್ ಕೊಡೊದಕ್ಕೂ ಬರೊಲ್ಲ. ಲೇಔಟ್ ಮಾಡುವಾಗ ಯಾಕೆ ಅಧಿಕಾರಿಗಳು ಬಿಟ್ಟು ಕೊಟ್ಟರು. ಅತೀ ಹೆಚ್ಚು ದುರುಪಯೋಗ ಮೂಡಾದಲ್ಲಿ ಆಗಿದೆ. 

ಹಗರಣ ಹೊರಗೆ ಬಂದ ಮೇಲೆ 50:50 ಪ್ಲಾನ್ ಶುರುವಾಯ್ತಾ ಎಂಬ ಮಾಧ್ಯಮಗಳ‌ ಪ್ರಶ್ನೆಗೆ ಉತ್ತರಿಸಿದ ಅವರು,  ಇದು ಅತೀ‌ಹೆಚ್ಚು ದುರುಪಯೋಗ ಆಗಿದ್ದು ‌ಮೈಸೂರಿನಲ್ಲಿ. ಇದರಲ್ಲಿ ಸಿಎಂ‌ ನೇರವಾಗಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿದರು.

ಎಸ್ಟಿ ನಿಗಮದ ಹಣ ದುರುಪಯೋಗ ಮಾಡಿಕೊಂಡಿರೋ ವಿಚಾರವಾಗಿ ಮಾತನಾಡಿದ ಅವರು,  ನೇರವಾಗಿ ಸಿಎಂ ಅವರೂ ಸಹ ಇದರಲ್ಲಿ ಹೊಣೆಗಾರರಾಗುತ್ತಾರೆ. ಈ ವಿಚಾರವಾಗಿ ಬಿಜೆಪಿ ನಿರಂತರ ಹೋರಾಟ ಮಾಡುತ್ತಿದೆ ಎಂದರು. 

 ಎಸ್ ಇ ಪಿ ಟಿ ಎಸ್ ಪಿ ಹಣ ಗ್ಯಾರಂಟಿಗೆ ಬಳಸಿದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಟ್ರಜರಿ ಖಾಲಿ ಆಗಿದೆ ಅಂತ ಹೇಳಿ ಸಿದ್ದರಾಮಯ್ಯ ಈ ಕೆಲಸ ಮಾಡುತ್ತಿದ್ದಾರೆ. ಈ ಹಿಂದೆ ಎಸ್ ಸಿ, ಎಸ್ ಟಿ ಹಣ ದುರುಪಯೋಗ ಮಾಡ್ಕೊಂಡ್ರಿ ಅಂತ ನಮಗೆ ಹೇಳುತ್ತಿದ್ದರು. ಆದರೆ ಈಗ ಅದೇ ಹಣವನ್ನು ನೀವು ಗ್ಯಾರಂಟಿಗೆ ಟ್ರಾನ್ಸಪರ್ ಮಾಡಿದ್ದಿರಿ. ಇವತ್ತು ಟ್ರೇಜರಿಯಲ್ಲಿ ಹಣ‌ ಇಲ್ಲದ‌ ಪರಿಸ್ಥಿತಿ ‌ನಿರ್ಮಾಣ ಮಾಡಿದ್ದಿರಿ. ರಾಜ್ಯದ ಆರ್ಥಿಕ ಸ್ಥಿತಿ ‌ಅದೋಗತಿಗೆ ಹೋಗಿದೆ. ಶಾಸಕರು ಸರ್ಕಾರದ ಮೇಲೆ‌ ಅಸಮಾಧಾನಗೊಂಡಿದ್ದಾರೆ ಎಂದು ಆಕ್ರೋಶ ಹೊರ ಹಾಕಿದರು. 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button