Kannada NewsKarnataka News

ಡಿ.19ಕ್ಕೆ ಪಂಚಮಸಾಲಿ ಮೀಸಲಾತಿ ಘೋಷಣೆ ಭರವಸೆ ನೀಡಿದ ಸಿಎಂ -ಬಸವಜಯ ಮೃತ್ಯುಂಜಯ ಶ್ರೀ

ಪ್ರಗತಿವಾಹಿನಿ ಸುದ್ದಿ, ಬೈಲಹೊಂಗಲ : ಬರುವ ಡಿಸೆಂಬರ್ 19 ರ ಒಳಗಾಗಿ ನಮ್ಮ ಪಂಚಮಸಾಲಿ ಲಿಂಗಯ ಮತ್ತು ಒಳಪಂಗಡಗಳಿಗೆ  ವರದಿ ತರಿಸಿ ಮೀಸಲಾತಿ ನೀಡುವ ಬರವಸೆ ನೀಡಿದ್ದು ಅವರು ಮೀಸಲಾತಿ ನೀಡಿದರೆ ಆತಿಥ್ಯ ನೀಡಿ ಸನ್ಮಾನಿಸೋಣ ಮತ್ತು ವಿನಾಕಾರಣ ಹೇಳಿ ಮುಂದೂಡಿದರೆ ನಾವೆಲ್ಲರೂ ಸೇರಿ ಡಿ ೨೨ ರಂದು ವಿಧಾನಸಭೆ ಅಧಿವೇಶನ ನಡೆಯೋ ಸುವರ್ಣ ವಿಧಾನಸೌಧಕ್ಕೆ ೨೦ ಲಕ್ಷ ನಮ್ಮ ಪಂಚಮಸಾಲಿ ಸಮಾಜದ ಜನ ಸೇರಿ ಮುತ್ತಿಗೆ ಹಾಕುವುದು ಶತಸಿದ್ದ ಎಂದು ಕೂಡಲಸಂಗಮದ ಪಂಚಮಸಾಲಿ ಪೀಠದ ಜಗದ್ಗುರುಗಳಾದ ಶ್ರೀ ಬಸವಜಯ ಮೃತ್ಯುಂಜಯ ಮಹಾಸ್ವಾಮಿಗಳು ಹೇಳಿದರು.
  ಅವರು ಸೋಮವಾರ  ಪಟ್ಟಣದ ಎಂ ಜಿ ಹೈಸ್ಕೂಲ್ ಆವರಣದಲ್ಲಿ ನಡೆದ ಬೈಲಹೊಂಗಲ ತಾಲೂಕಿನ ಬೃಹತ್ ಪಂಚಮಸಾಲಿ ೨ ಎ ಮೀಸಲಾತಿಗೆ ಆಗ್ರಹಿಸಿ ನಡೆದ ಸಮಾವೇಶದಲ್ಲಿ ಮಾತನಾಡಿ, ಪಂಚಮಸಾಲಿ ಸಮಾಜದ ಮಕ್ಕಳ ಶಿಕ್ಷಣ ಮತ್ತು ಉದ್ಯೋಗದ ಹಿತದೃಷ್ಟಿಯಿಂದ ನಮಗೆ ಮೀಸಲಾತಿ ಅನಿವಾರ್ಯವಾಗಿದ್ದು ಕಳೆದ 28 ವರ್ಷಗಳಿಂದ ೨ ಎ ಮೀಸಲಾತಿ ಹೋರಾಟ  ಮನಗಂಡ ಸಿ ಎಂ ಬೊಮ್ಮಾಯಿಯವರು 19 ಒಳಗೆ ಮೀಸಲಾತಿ ನೀಡುವ ಗಡುವು ನೀಡಿದ್ದು ಅದಕ್ಕಾಗಿ ಅವರು ಮೀಸಲಾತಿ ನೀಡುವ ವಿಶ್ವಾಸ ಇದೆ. ಮೀಸಲಾತಿ ಕಲ್ಪಿಸಿದರೆ ಅವರನ್ನು ಗೌರವ ಪೂರ್ವಕವಾಗಿ ಸತ್ಕರಿಸಿ ಸನ್ಮನಿಸೋಣ. ಇಲ್ಲದಿದ್ದರೆ ಉಗ್ರ ಹೋರಾಟ ಅನಿವಾರ್ಯ ಮತ್ತು ಕೂಡಲ ಸಂಗಮದಿಂದ ಬೆಂಗಳೂರು ಪಾದಯಾತ್ರೆ ಮಾಡಿ ಹತ್ತು ಲಕ್ಷ ಜನ ಸೇರಿಸಿ, ಸತ್ಯಾಗ್ರಹ ಮಾಡಲಾಗಿದ್ದು ಇಂದು ಪಂಚಮಸಾಲಿಗಳು ಸ್ವಾಭಿಮಾನಿಗಳಾಗಿದ್ದು ಅನ್ನ ನೀಡುವ ರೈತರು ನಾವು ನಮಗೆ ಸರ್ಕಾರ ಮೀಸಲಾತಿ ಕಲ್ಪಿಸಲೇಬೇಕೆಂದರು.
 ಶಾಸಕ ಬಸನಗೌಡ ಪಾಟೀಲ ಯತ್ನಾಳ ಮಾತನಾಡಿ 76 ಸಾವಿರ ಪಂಚಮಸಾಲಿ ಜನಾಂಗ ಹೊಂದಿರುವ ಬೈಲಹೊಂಗಲ ಕ್ಷೇತ್ರದಲ್ಲಿ ಕೇವಲ ಮೂರು ಜನ ಮಾತ್ರ ಪಂಚಮಸಾಲಿ   ಶಾಸಕರಾಗಿರುವದು ವಿಪರ್ಯಾಸ. ಬೆಳಗಾವಿ ಜಿಲ್ಲೆಯಲ್ಲಿ ನಡೆಯುತ್ತಿರುವ ಪಂಚಮಸಾಲಿ ಮೀಸಲಾತಿ ಸಮ್ಮೇಳನಗಳಿಂದ ಇಂದು ಜನಪ್ರತಿನಿಧಿಗಳಿಗೆ ಅಂಜಿಕೆ ಉಂಟಾಗಿದ್ದು ಸಿ ಎಂ ಬೊಮ್ಮಾಯಿ ೨ ಎ ಮೀಸಲಾತಿ ನೀಡುವ ವಿಶ್ವಾಸ ಹೊಂದಿದ್ದು 19 ಕ್ಕೆ ಸಿಗುವ ವಿಶ್ವಾಸ ಇದೆ.  ಅದು ನಮ್ಮ ಮಕ್ಕಳ ವಿದ್ಯಾಭ್ಯಾಸ ಮತ್ತು ಉದ್ಯೋಗ ಸಿಗುವ ಗುರಿ ಹೊಂದಿದ್ದು ಇದು ಸಿಕ್ಕರೆ ನನಗೆ ಸಿ ಎಂ ಆದಷ್ಟೆ ಸಂತೋಷ ಎಂದರು.
ಇಂದಿನ ಮಠಾಧೀಶರು ನಡೆದುಕೊಳ್ಳುವ ರೀತಿ ,ನೀತಿಗಳನ್ನು ನೋಡಿದರೆ ಅಸಹ್ಯ. ಅವರು ಕೆಲವು ರಾಜಕೀಯ ಮುಖಂಡರ ಕೈಗೊಂಬೆಗಳಾಗಿ ಧರ್ಮ ಸಮಾಜಕ್ಕಾಗಿ ದುಡಿಯದೇ ಕೆಟ್ಟ ಹಾದಿ ತುಳಿದು ಇಂದು ಜೈಲು ಪಾಲಾಗಿರುವ ಚಿತ್ರದುರ್ಗದ ಶ್ರೀ ಗಳ ಹೇಯ ಕೆಲಸದ ಬಗ್ಗೆ ಹರಿಹಾಯ್ದರು.
 ತಾಯಿ ಚೆನ್ನಮ್ಮ  ಪಂಚಮಸಾಲಿ ಸಮಾಜದ ದಿಟ್ಟ ಮಹಿಳೆ ಎಂಬುದು ಇನ್ನು ಬಹಳ ಜನರಿಗೆ ಗೊತ್ತಿಲ್ಲ. ಅದಕ್ಕಾಗಿ ಕಿತ್ತೂರ ಕ್ಷೇತ್ರದಲ್ಲಿ ವೀರ ಸಂಗೊಳ್ಳಿ ರಾಯಣ್ಣನನ್ನು ಹಿಡಿದುಕೊಟ್ಟ ಮನೆತನದವರನ್ನು ಶಾಸಕರನ್ನಾಗಿ ಸತತವಾಗಿ ಮಾಡಿ ಈಗ ಬದಲಾವಣೆ ಮಾಡಿದ್ದಿರಿ. ನಮ್ಮ ಎಲ್ಲ ಸಮಾರಂಭದ ಜನ ಸೇರುವಿಕೆ ,ಹೋರಾಟ, ಧರ್ಮ ಹೋರಾಟದ ಬಗ್ಗೆ ಬೆಂಗಳೂರು, ದೆಹಲಿ ಮಟ್ಟದಲ್ಲಿ ಚರ್ಚೆಯಾಗುತ್ತಿದ್ದು ಹಿಂದೂ ಸಮಾಜದ ಜನ ಜಾಗ್ರತರಾಗಿದ್ದು ಅದಕ್ಕಾಗಿ ವಿಜಯಪುರ ನಗರ ಸಭಾ ಚುನಾವಣೆಯಲ್ಲಿ ೧೮ ಸದಸ್ಯರನ್ನು ಆಯ್ಕೆ ಮಾಡಿ ಇತಿಹಾಸ ಸೃಷ್ಟಿಸಿದ ಜನ ಯಾರ ಮಾತು ಕೇಳಲ್ಲಾ. ಕೋಟಿ ಕೋಟಿ ಖರ್ಚು ಮಾಡಿ ಚುರಮುರಿ ಚಹಾ ಕುಡಿಸಿದ ನಮ್ಮ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದರು ಜನ ಜನ ಎಂದರು.
      ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಮಾತನಾಡಿ ಪಂಚಮಸಾಲಿ ಜನಾಂಗ ಯಾರಿಗೂ ಹೆದರುವ ಪ್ರಶ್ನೆ ಇಲ್ಲ. ಯತ್ನಾಳರಂತವರು ವಿಧಾನ ಸಭೆಯಲ್ಲಿ ಬಾವಿಗಿಳಿದು  ಹೋರಾಟ ಮಾಡಿದ ಫಲ ೨೮ ವರ್ಷಗಳ ಸತತ ಹೋರಾಟದ ಫಲ ಮತ್ತು ಸಮಾಜದ ಮಕ್ಕಳ ಶಿಕ್ಷಣ, ಉದ್ಯೋಗಕ್ಕಾಗಿ ಹೋರಾಟ ಮಾಡುತ್ತಿರುವ ಶ್ರೀ ಬಸವಜಯ ಮೃತ್ಯುಂಜಯ ಮಹಾಸ್ವಾಮಿಗಳ ಸಮಾಜ ಮುಖಿ ಕೆಲಸ ನಿಸ್ವಾರ್ಥವಾಗಿದ್ದು ಅವರ ಹಾದಿಯಲ್ಲೆ ನಾವೆಲ್ಲರೂ ಸಾಗೋಣ ಎಂದರು.
 ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಮಾತನಾಡಿ ಇಂದಿನ ದಿನಗಳಲ್ಲಿ ಮಹಿಳೆಯರು ಮುಂದೆ ಬಂದು ವೀರ ರಾಣಿ ಕಿತ್ತೂರ ಚೆನ್ನಮ್ಮನ ಹಾಗೇ ಹೋರಾಡುವ ಅವಶ್ಯಕತೆ ಇದ್ದು. ನಾವು ಎಲ್ಲಾ ಸಮಾಜದವರೊಂದಿಗೆ ಬೆರೆತು ಸಹಮತದಿಂದ ಜೀವನ ನಡೆಸಿ ಮುನ್ನಡೆಯೋಣ ಮತ್ತು ಕಾಲು ಕೆದರಿ ನಮ್ಮನ್ನು ಮುಗಿಸಲು ಬರುವ ಜನರಿಗೆ ಜನರಿಂದಲೆ ಬುದ್ದಿ ಕಲಿಸೋಣ ಎಂದರು.
 ಮಾಜಿ ಸಚಿವ ವಿನಯ ಕುಲಕರ್ಣಿ ಮಾತನಾಡಿ ಪಂಚಮಸಾಲಿ ಲಿಂಗಾಯತರು ಒಗ್ಗಟ್ಟು ಪ್ರದರ್ಶಿಸಿದರೆ ವಿಧಾನಸಭೆ ಅಲುಗಾಡುತ್ತದೆ ಎಂದರು.
   ರಾಜ್ಯಸಭೆ ಸದಸ್ಯ ಈರಣ್ಣ ಕಡಾಡಿ ಮಾತನಾಡಿ ಇಲ್ಲಿಯವರೆಗೆ ಗಾಣದ ಎತ್ತುಗಳಾದ್ದ ನಾವು ಇಂದು ಸಂಗಟಿತರಾಗಿದ್ದು ಮೀಸಲಾತಿ ಸಿಕ್ಕೆ ಸಿಗುತ್ತದೆ ಎಂದರು.
 ಕಿತ್ತೂರ ಶಾಸಕ ಮಹಾಂತೇಶ ದೊಡಗೌಡರ ಮಾತನಾಡಿ ದೇಶಕ್ಕೆ ರೈತನೆ ಬೆನ್ನೆಲುಬು ಆ ರೈತರೇ ಲಿಂಗಾಯತ ಪಂಚಮಸಾಲಿ ಸಮಾಜ. ಈ ಸಮಾಜದ ಒಳಿತಿಗಾಗಿ ನಾವೆಲ್ಲರೂ ಸದಾ ಸಿದ್ದ ಎಂದರು.
 ಮಾಜಿ ಶಾಸಕ ಹಾಗೂ ಕಾಡಾ ಅದ್ಯಕ್ಷರಾದ ವಿ ಆಯ್ ಪಾಟೀಲ ಮಾತನಾಡಿ ಪಂಚಮಸಾಲಿ ಜನ ಜಾಗ್ರತರಾಗಿದ್ದು ಅವರು ಸಮಾಜದ ಹೋರಾಟ ಮತ್ತು ಧರ್ಮ ಕಾರ್ಯಗಳಲ್ಲಿ ಒಗ್ಗಟ್ಟು ಪ್ರದರ್ಶಿಸಬೇಕು ಹಾಗೂ ಸಮಾಜದ ಬೆಳವಣಿಗೆಗೆ ಶ್ರಮಿಸಬೇಕು ಎಂದರು.
      ಮಾಜಿ ಸಚಿವ ಎ ಬಿ ಪಾಟೀಲ ಮಾತನಾಡಿ ಪಂಚಮಸಾಲಿ ಜನಾಂಗದ ಅನೇಕರು ಮೊದಲಿನಿಂದಲೂ ಶಿಕ್ಷಣ ಮತ್ತು ಉದ್ಯೋಗದಲ್ಲಿ ಹಿನ್ನಡೆ ಅನುಭವಿಸುತ್ತಿದ್ದು ಅದಕ್ಕಾಗಿ ನಿರಂತರ ಹೋರಾಟ ಮುಖ್ಯ ಎಂದರು.
 ಈ ಸಮಾವೇಶದಲ್ಲಿ ಶಂಕರ ಮೂಡಲಗಿ ಪ್ರಾಸ್ತಾವಿಕವಾಗಿ  ಮಾತನಾಡಿದರು. ಮಾಜಿ ಜಿ ಪಂ ಸದಸ್ಯೆ  ರೋಹಿಣಿ ಪಾಟೀಲ, ಪುರಸಭಾ ಅಧ್ಯಕ್ಷರಾದ ಬಸವರಾಜ ಜನ್ಮಟ್ಟಿ,ಶ್ರೀಶೈಲ ಬೊಳಣ್ಣವರ,ಎಫ್ ಎಸ್ ಸಿದ್ದನಗೌಡರ, ವೀರೇಶ ಹಲಕಿ, ತಾಲೂಕಾ ,ಜಿಲ್ಲಾ ಪಂಚಮಸಾಲಿ ಮುಖಂಡರು ಪಾಲ್ಗೊಂಡಿದ್ದರು.  ಗೌರಿ ಮಟ್ಟಿ ಸ್ವಾಗತಿಸಿದರು.
https://pragati.taskdun.com/lakshmi-hebbalkar-roared/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button