ತುಮಕೂರಿನಿಂದ ಬಂದ ಪ್ರಧಾನಿ ಮೋದಿ ರಾಜಭವನದಲ್ಲಿ ವಾಸ್ತವ್ಯ ಹೂಡಿದ್ದರು. ಈ ವೇಳೆ ರಾಜ್ಯದ ಜ್ವಲಂತ ಸಮಸ್ಯೆಗಳ ಬಗ್ಗೆ ವಿವರಿಸಿ, ಅತಿವೃಷ್ಟಿಯಿಂದಾದ ಹಾನಿ ಪರಿಹಾರಕ್ಕೆ ಹೆಚ್ಚಿನ ವಿಶೇಷ ಅನುದಾನ ಬಿಡುಗಡೆ, ಮಹದಾಯಿ ವಿವಾದ ವಿಚಾರ, ಮೇಕೆದಾಟು ವಿಚಾರ, ಕಾವೇರಿ ನದಿ ನೀರು ಹಂಚಿಕೆ ವಿಚಾರ ಸೇರಿದಂತೆ ರಾಜ್ಯದ ನೀರಾವರಿ ಯೋಜನೆಗಳ ಸಮಸ್ಯೆ ಬಗೆಹರಿಸುವಂತೆ ಮನವಿ ಮಾಡಲು ಸಿಎಂ ಬಿಎಸ್ವೈ ನಿರ್ಧರಿಸಿದ್ದರು.
ಈ ಹಿನ್ನೆಲೆಯಲ್ಲಿ ಸಿಎಂ ಬಿ.ಎಸ್.ಯಡಿಯೂರಪ್ಪ, ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಮತ್ತು ಸಚಿವ ಜೆ.ಸಿ.ಮಾಧುಸ್ವಾಮಿ ನಿಯೋಗ ಸಂಜೆ ರಾಜಭವನಕ್ಕೆ ತೆರಳಿತ್ತು. ಆದರೆ ಪ್ರಧಾನಿ ಮೋದಿ ಭೇಟಿಗೆ ಅವಕಾಶವೇ ಸಿಕ್ಕಿಲ್ಲ.
ಸಿಎಂ ನೇತೃತ್ವದ ನಿಯೋಗ ಬರುವ ಮುನ್ನವೇ ಮೋದಿ ಅವರು ವಿಶ್ರಾಂತಿಗೆ ತೆರಳಿದ್ದರು. ಹೀಗಾಗಿ ಪ್ರಧಾನಿ ಭೇಟಿಗೆ ಭದ್ರತಾ ಸಿಬ್ಬಂದಿ ಬಿಡಲಿಲ್ಲ. ಆದ್ದರಿಂದ ಬಿಎಸ್ವೈ ನಿಯೋಗ ಬಂದ ದಾರಿಗೆ ಸುಂಕವಿಲ್ಲವೆಂದು ರಾಜಭವನದಿಂದ ವಾಪಸ್ಸಾಯಿತು.
ನಿನ್ನೆ ಭೇಟಿ ಸಾಧ್ಯವಾಗದ ಹಿನ್ನೆಲೆಯಲ್ಲಿ ಇಂದು ಮತ್ತೊಮ್ಮೆ ಪ್ರಧಾನಿ ಭೇಟಿಯಾಗಲು ನಿರ್ಧರಿಸಾಲಾಗಿದೆ. ಒಂದು ವೇಳೆ ಇಂದೂ ಸಾಧ್ಯವಿಲ್ಲವೆಂದಾದರೆ ಸಿಎಂ ದೆಹಲಿಗೆ ತೆರಳಿ ಪ್ರಧಾನಿ ಭೇಟಿಯಾಗಿ ಮನವರಿಕೆ ಮಾಡಲಿದ್ದಾರೆ ಎನ್ನಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ