ಅಕ್ಟೋಬರ್ 8 ರಂದು ವಿಶ್ವ ಮಾನಸಿಕ ಆರೋಗ್ಯ ದಿನ ಆಚರಣೆ; ವರ್ಚುವಲ್ ಪ್ರೋಗ್ರಾಂ ಆಯೋಜನೆ
ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ವಿದ್ಯಾರ್ಥಿಗಳ ಸಮಗ್ರ ಅಭಿವೃದ್ಧಿಯ ಮೇಲೆ ಗಮನ ಕೇಂದ್ರೀಕರಿಸಿ, ಬೆಂಗಳೂರಿನ ಸಿಎಂಆರ್ ವಿಶ್ವವಿದ್ಯಾಲಯವು (CMRU) ಅಕ್ಟೋಬರ್ 8 ರಂದು ವಿಶ್ವ ಮಾನಸಿಕ ಆರೋಗ್ಯ ದಿನವನ್ನು ಆಚರಿಸುತ್ತಿದೆ.
“ಅನ್‌ಮ್ಯೂಟ್ ಆ್ಯಂಡ್ ಎಕೋ” ವಿಷಯದ ಒಂದು ಗಂಟೆ ಅವಧಿಯ ವರ್ಚುವಲ್ ಪ್ರೋಗ್ರಾಂ ಅನ್ನು ಸಿಎಮ್‌ಆರ್‌ಯುನಲ್ಲಿರುವ ಸ್ಕೂಲ್ ಆಫ್ ಸೋಶಿಯಲ್ ಸೈನ್ಸ್ ಮತ್ತು ಮಾನವೀಯತೆ (School of Social Sciences and Humanities)ಯ Psychedelic Club ವಿದ್ಯಾರ್ಥಿಗಳು ನಡೆಸಲಿದ್ದಾರೆ.
“ಇಂದಿನ ಅನಿಶ್ಚಿತ ಸನ್ನಿವೇಶಗಳಲ್ಲಿ ಮಾನಸಿಕ ಆರೋಗ್ಯ” ಈವೆಂಟ್‌ನ ಪ್ರಮುಖ ಅಂಶ. ಈ ಚಟುವಟಿಕೆಯನ್ನು ಸ್ಲ್ಯಾಮ್ ಪೋಯೆಟ್ರಿ ಫೋರಮ್ (Slam Poetry form) ನಲ್ಲಿ ನಡೆಸಲಾಗುತ್ತದೆ. ಇದು ವಿದ್ಯಾರ್ಥಿಗಳ ಕಾರ್ಯಕ್ಷಮತೆ, ಸೃಜನಶೀಲ ಬರವಣಿಗೆ ಮತ್ತು ಸ್ಪರ್ಧೆಯ ಅಂಶಗಳನ್ನು ಸಂಯೋಜಿಸುತ್ತದೆ; ಜೊತೆಗೆ, ಪ್ರೇಕ್ಷಕರನ್ನು ಸಹ ಭಾಗವಹಿಸಲು ಆಹ್ವಾನಿಸಲಾಗುತ್ತದೆ.
Psychedelic Club ಮಾನಸಿಕ ಆರೋಗ್ಯ ಜಾಗೃತಿಯನ್ನು ಉತ್ತೇಜಿಸಲು ಮತ್ತು ಮನೋವಿಜ್ಞಾನ ಕ್ಷೇತ್ರದ ಕುರಿತು ಹೆಚ್ಚಿನ ಅರಿವನ್ನುಉಂಟುಮಾಡುವ ಉದ್ದೇಶವನ್ನು ಹೊಂದಿದೆ. ಮಾನಸಿಕ ಆರೋಗ್ಯ ಕುರಿತ ಚರ್ಚೆಗಳು ನಮ್ಮ ಸಮಾಜದಲ್ಲಿ ಇನ್ನೂ ಚಿಂತನೆಯ ವಿಷಯವಾಗಿರುವ ಸಂದರ್ಭದಲ್ಲಿ, CMRU ವಿದ್ಯಾರ್ಥಿಗಳು ಮಾನಸಿಕ ಆರೋಗ್ಯ ಕೇಂದ್ರಿತ ಚರ್ಚೆಗಳನ್ನು ಮುಖ್ಯವಾಹಿನಿಗೆ ತರಲು ಮಾನಸಿಕ ಸ್ವಾಸ್ಥ್ಯದ ವಿಷಯವನ್ನು ಪ್ರಜ್ಞಾಪೂರ್ವಕವಾಗಿಯೇ ಆಯ್ಕೆ ಮಾಡಿರುವುದು ವಿಶೇಷವಾಗಿದೆ.
ಮಾನಸಿಕ ಅಸ್ವಸ್ಥತೆಯನ್ನು ಬಹಿರಂಗವಾಗಿ ಚರ್ಚಿಸುವ ಮತ್ತು ವೈಜ್ಞಾನಿಕವಾಗಿ ಚಿಕಿತ್ಸೆ ಪಡೆಯುವ ಅಗತ್ಯದ ಅರಿವು ಮೂಡಿಸುವುದು ಇದರ ಉದ್ದೇಶವಾಗಿದೆ.
ಸ್ಲಾಮ್ ಪೋಯೆಟ್ರಿ (Slam Poetry) ಫೋರಮ್ ನಲ್ಲಿ ಭಾಗವಹಿಸುವವರಿಗೆ 5-6 ನಿಮಿಷಗಳ ಕಾಲ ಪ್ರದರ್ಶನಕ್ಕೆ ಅವಕಾಶ ಸಿಗಲಿದೆ.
ಅಕ್ಟೋಬರ್ 8, 2021 ರಂದು ಮಧ್ಯಾಹ್ನ 2.30 ರಿಂದ 3.30 ರ ನಡುವೆ ಈವೆಂಟ್ ನಡೆಯಲಿದೆ. ಇದು ಎಲ್ಲಾ ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳಿಗೆ ಮುಕ್ತವಾಗಿದೆ.
ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಪ್ರತಿವರ್ಷ ಅಕ್ಟೋಬರ್ 10 ರಂದು ವಿಶ್ವ ಮಾನಸಿಕ ಆರೋಗ್ಯ ದಿನವನ್ನು ಆಚರಿಸುತ್ತದೆ. ಮಾನಸಿಕ ಆರೋಗ್ಯಕ್ಕಾಗಿ ವಿಶ್ವ ಒಕ್ಕೂಟವು ಆಯ್ಕೆ ಮಾಡಿರುವ ಈ ವರ್ಷದ ಥೀಮ್ – “ಅಸಮಾನತೆಯ ವಿಶ್ವದಲ್ಲಿ ಆರೋಗ್ಯ”
ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಸಂಪರ್ಕಿಸಿ:
ಡಾ ರಾಧಿಕಾ ಸಿಎ – [email protected], 9945411955.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ